ಲಂಡನ್: ಲಯೊನೆಲ್ ಮೆಸ್ಸಿ ನಾಯಕತ್ವದ ಅರ್ಜೆಂಟಿನಾ ತಂಡವು ಬುಧವಾರ ತಡರಾತ್ರಿ ನಡೆದ ಫೈನಲಿಸಿಮಾ ಕಪ್ ಗೆದ್ದುಕೊಂಡಿತು.

ವೆಂಬ್ಲಿ ಕ್ರೀಡಾಂಗಣದಲ್ಲಿ ನಡೆದ ಈ ಪಂದ್ಯದಲ್ಲಿ ದಕ್ಷಿಣ ಅಮೆರಿಕಾ ಫುಟ್‌ಬಾಲ್ ಚಾಂಪಿಯನ್ ಅರ್ಜೆಂಟಿನಾ ತಂಡವು 3–0 ಗೋಲುಗಳಿಂದ ಯುರೋಪ್ ಚಾಂಪಿಯನ್ ಇಟಲಿ ವಿರುದ್ಧ ಜಯಿಸಿತು.

ಏಳು ಬಾರಿಯ ಬ್ಯಾಲನ್ ಡಿ ಓರ್ ಪ್ರಶಸ್ತಿ ವಿಜೇತ ಮೆಸ್ಸಿಗೆ ಇದು ಎರಡನೇ ಅಂತರರಾಷ್ಟ್ರೀಯ ಟ್ರೋಫಿ. 11 ತಿಂಗಳುಗಳ ಅಂತರದಲ್ಲಿ ಅವರ ನಾಯಕತ್ವದಲ್ಲಿ ಅರ್ಜೆಂಟಿನಾ ತಂಡವು ಈ ಪ್ರಶಸ್ತಿಗಳನ್ನು ಗೆದ್ದುಕೊಂಡಿದೆ. ಇದೇ ವರ್ಷ ನಡೆಯಲಿರುವ ಫಿಫಾ ವಿಶ್ವಕಪ್ ಜಯಿಸುವತ್ತ 34 ವರ್ಷದ ಮೆಸ್ಸಿ ಚಿತ್ತ ನೆಟ್ಟಿದ್ದಾರೆ.

ಈ ಪಂದ್ಯದಲ್ಲಿ ಅರ್ಜೆಂಟಿನಾ ತಂಡಕ್ಕೆ 28ನೇ ನಿಮಿಷದಲ್ಲಿ ಲಾಟೆರೊ ಮಾರ್ಟಿನೇಜ್ ಮೊದಲ ಗೋಲು ಕಾಣಿಕೆ ನೀಡಿದರು. ಈ ಗೋಲು ಗಳಿಕೆಯಲ್ಲಿ ಮೆಸ್ಸಿ ಕಾಲ್ಚಳಕವೂ ಇತ್ತು. ಗೋಲ್ ಪೋಸ್ಟ್ ಸನಿಹ ಅವರು ಕೊಟ್ಟ ಚುರುಕಿನ ಪಾಸ್ ಪಡೆದ ಮಾರ್ಟಿನೇಜ್ ಮಿಂಚಿದರು. ಏಂಜೆಲ್ ಡಿ ಮಾರಿಯಾ (45+1ನಿ) ಮತ್ತು ಪಾಲೋ ದೈಬಲಾ (90+4) ಅವರು ತಲಾ ಒಂದು ಗೋಲು ಕಾಣಿಕೆ ನೀಡಿದರು.

ಹೋದ ವರ್ಷವಷ್ಟೇ ಇದೇ ಕ್ರೀಡಾಂಗಣದಲ್ಲಿ ಇಟಲಿ ತಂಡವು ಯುರೋ ಕಪ್ ಜಯಿಸಿತ್ತು. ಇಟಲಿ ತಂಡದ ನಾಯಕ ಜಾರ್ಜಿಯೊ ಚೀಲಿನಿಗೆ ಇದು ಕೊನೆಯ ಅಂತರರಾಷ್ಟ್ರೀಯ ಪಂದ್ಯವಾಗಿದೆ. 37 ವರ್ಷದ ಜಾರ್ಜಿಯೊ 117 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.