ಬೆಲ್‌ಗ್ರೇಡ್: ಪೋರ್ಚುಗಲ್‌ನ ವಿಶ್ವಕಪ್ ಕ್ವಾಲಿಫೈಯರ್ ಪಂದ್ಯದಲ್ಲಿ ಕಳೆದ ವಾರ ಬೆಲ್‌ಗ್ರೇಡ್‌ನಲ್ಲಿ ಕ್ರಿಸ್ಟಿಯಾನೋ ರೊನಾಲ್ಡೋ ಕೋಪದಿಂದ ಎಸೆದಿದ್ದ ನೀಲಿ ಬಣ್ಣದ ಕೈಪಟ್ಟಿ 64,000 ಯೂರೋ, ಅಂದರೆ $75,000 ಡಾಲರ್ (ಅಂದಾಜು ₹55 ಲಕ್ಷ) ಮೊತ್ತಕ್ಕೆ ಹರಾಜಾಗಿದೆ.

ಈ ಕುರಿತು ಸರ್ಬಿಯನ್ ಸ್ಟೇಟ್ ಟಿವಿ ವರದಿ ಮಾಡಿದ್ದು, ಸರ್ಬಿಯಾದ ಸಂಘಟನೆಯೊಂದು 6 ತಿಂಗಳ ಮಗುವಿನ ವೈದ್ಯಕೀಯ ಚಿಕಿತ್ಸೆಗೆ ಹಣ ಹೊಂದಿಸಲು ದೇಣಿಗೆ ಸಂಗ್ರಹಕ್ಕೆ ಮುಂದಾಗಿತ್ತು. ಅದರಂತೆ ಆನ್‌ಲೈನ್‌ನಲ್ಲಿ ರೊನಾಲ್ಡೋ ಕೈಪಟ್ಟಿಯನ್ನು ಹರಾಜು ಮಾಡಲಾಗಿದೆ.

ಮೂರು ದಿನಗಳ ಕಾಲ ನಡೆದ ಹರಾಜು ಪ್ರಕ್ರಿಯೆಯಲ್ಲಿ ಕೆಲವರು ಅನಗತ್ಯವಾಗಿ ಹೆಚ್ಚಿನ ಮೊತ್ತ ಬಿಡ್ ಮಾಡುವ ಮೂಲಕ ತೊಂದರೆ ನೀಡಿದರೂ, ಕೊನೆಗೆ ಸೂಕ್ತ ಮೊತ್ತಕ್ಕೆ ಹರಾಜಾಗಿದೆ.

ಪೋರ್ಚುಗಲ್ ಮತ್ತು ಸರ್ಬಿಯಾ ನಡುವಣ ಪಂದ್ಯ 2-2 ಅಂಕಗಳೊಂದಿಗೆ ಡ್ರಾ ಕಂಡಿತ್ತು.

ಪಂದ್ಯದ ಕೊನೆಗೆ ಡ್ರೆಸ್ಸಿಂಗ್ ರೂಮ್‌ಗೆ ತೆರಳುವ ಮುನ್ನ ರೊನಾಲ್ಡೋ ಕೋಪದಿಂದ ಕೈಪಟ್ಟಿಯನ್ನು ಎಸೆದು ಹೋಗಿದ್ದರು, ಅದನ್ನು ಎತ್ತಿಕೊಂಡಿದ್ದ ಅಗ್ನಿಶಾಮಕ ದಳದ ಸಿಬ್ಬಂದಿ, ಚಾರಿಟಿ ಸಂಸ್ಥೆಗೆ ನೀಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.