ನವದೆಹಲಿ: ಫುಟ್ಬಾಲ್ ದಿಗ್ಗಜ ಪೆಲೆ ನಿಧನಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಸಂತಾಪ ಸೂಚಿಸಿದ್ದಾರೆ.

’ಪೀಲೆ ಅವರ ನಿಧನವು ಕ್ರೀಡಾ ಜಗತ್ತಿಗೆ ಭರಿಸಲಾಗದ ನಷ್ಟವನ್ನುಂಟು ಮಾಡಿದೆ. ಜಾಗತಿಕ ಫುಟ್ಬಾಲ್ ಸೂಪರ್ ಸ್ಟಾರ್, ಅವರ ಜನಪ್ರಿಯತೆ ಎಲ್ಲೆಗಳನ್ನು ಮೀರಿದೆ. ಅವರ ಅತ್ಯುತ್ತಮ ಕ್ರೀಡಾ ಪ್ರದರ್ಶನ ಮತ್ತು ಯಶಸ್ಸು ಮುಂದಿನ ಪೀಳಿಗೆಗೆ ಸ್ಫೂರ್ತಿ ನೀಡುತ್ತದೆ. ಅವರ ಕುಟುಂಬಸ್ಥರು ಮತ್ತು ಅಭಿಮಾನಿಗಳಿಗೆ ನನ್ನ ಸಂತಾಪಗಳು‘ ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

ಬ್ರೆಜಿಲ್ ತಂಡವು ಮೂರು ಬಾರಿ ವಿಶ್ವಕಪ್ (1958, 1962 ಮತ್ತು 1970) ಜಯಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ದಿಗ್ಗಜ ಆಟಗಾರ ಪೆಲೆ (82) ಅವರು ಗುರುವಾರ ನಿಧನರಾಗಿದ್ದಾರೆ.

ಕ್ಯಾನ್ಸರ್ನಿಂದ ಬಳಲುತ್ತಿದ್ದ ಪೆಲೆ ಅವರನ್ನು ಇಲ್ಲಿನಅಲ್ಬರ್ಟ್ ಐನ್ಸ್ಟೈನ್ ಆಸ್ಪತ್ರೆಗೆನವೆಂಬರ್ ಕೊನೆಯ ವಾರದಲ್ಲಿ ದಾಖಲಿಸಲಾಗಿತ್ತು.ಅವರಿಗೆ ಕರುಳಿನ ಕ್ಯಾನ್ಸರ್ ಉಲ್ಬಣಿಸಿದ್ದು ಮೂತ್ರಪಿಂಡ ಮತ್ತು ಹೃದಯಕ್ಕೆ ಸೋಂಕು ವ್ಯಾಪಿಸಿತ್ತು ಎಂದು ಆಸ್ಪತ್ರೆಯ ಮೂಲಗಳು ತಿಳಿಸಿದ್ದವು.

1957ರಲ್ಲಿ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದ್ದ ಪೆಲೆ, 1977ರಲ್ಲಿ ನಿವೃತ್ತರಾಗಿದ್ದರು.ಫಾರ್ವರ್ಡ್ ಮತ್ತು ಅಟ್ಯಾಕಿಂಗ್ ಮಿಡ್ಫೀಲ್ಡರ್ ಆಗಿದ್ದ ಅವರು,ವೃತ್ತಿಜೀವನದಲ್ಲಿ 1000ಕ್ಕೂ ಹೆಚ್ಚು ಗೋಲುಗಳನ್ನು ಬಾರಿಸಿದ್ದರು.1995–1998ರ ಅವಧಿಯಲ್ಲಿ ಬ್ರೆಜಿಲ್ನ ಕ್ರೀಡಾ ಸಚಿವರೂ ಆಗಿದ್ದರು.

ಗಣ್ಯರ ಸಂತಾಪ...
ಅಮೆರಿಕ ಅಧ್ಯಕ್ಷ ಜೋ ಬೈಡನ್, ಮಾಜಿ ಅಧ್ಯಕ್ಷರಾದ ಬರಾಕ್ ಒಬಾಮ, ಬಿಲ್ ಕ್ಲಿಂಟನ್, ಫುಟ್ಬಾಲ್ ದಿಗ್ಗಜರಾದ ಕ್ರಿಸ್ಟಿಯಾನೊ ರೊನಾಲ್ಡೊ, ಲಿಯೊನೆಲ್ ಮೆಸ್ಸಿ, ಮಾಜಿ ಕ್ರಿಕೆಟಿಗರು ಸೇರಿದಂತೆ ವಿಶ್ವದಾದ್ಯಂತ ಗಣ್ಯರು ಪೆಲೆ ನಿಧನಕ್ಕೆ ಸಂತಾಪ ಸೂಚಿಸಿದ್ದಾರೆ.

ಇವನ್ನೂ ಓದಿ...

ಫುಟ್ಬಾಲ್ ದಿಗ್ಗಜ ಪೆಲೆ ನಿಧನಕ್ಕೆ ಗಣ್ಯರ ಸಂತಾಪ

ಪೆಲೆ ನಿಧನಕ್ಕೆ ಫುಟ್ಬಾಲ್ ಜಗತ್ತು ಕಂಬನಿ: ಬ್ರೆಜಿಲ್ನಲ್ಲಿ ಮೂರು ದಿನ ಶೋಕಾಚರಣೆ

ನಿಮ್ಮ ಪರಂಪರೆ ಶಾಶ್ವತವಾಗಿ ಉಳಿಯಲಿದೆ: ಪೆಲೆ ನಿಧನಕ್ಕೆ ಸಚಿನ್ ಸಂತಾಪ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.