ರೊಸ್ತೋವ್:ಮೊದಲ ಪಂದ್ಯದಲ್ಲಿ ಕಣಕ್ಕೆ ಇಳಿಯಲಾಗದ ಲೂಯಿಸ್ ಸ್ವಾರೆಜ್ ಬುಧವಾರ ಇಲ್ಲಿನ ರೋಸ್ತೊವ್ ಅರೆನಾದಲ್ಲಿ ತುಂಬಿದ್ದ ಅಭಿಮಾನಿಗಳನ್ನು ರೋಮಾಂಚನಗೊಳಿಸಿದರು. ತಮ್ಮ 100ನೇ ಅಂತರರಾಷ್ಟ್ರೀಯ ಪಂದ್ಯದಲ್ಲಿ ಗೋಲು ಗಳಿಸಿ ಮಿಂಚಿದರು.

ಸೌದಿ ಅರೇಬಿಯಾ ಎದುರಿನ ‘ಎ’ ಗುಂಪಿನ ಪಂದ್ಯದ 23ನೇ ನಿಮಿಷದಲ್ಲಿ ಸ್ವಾರೆಜ್ ಗಳಿಸಿದ ಗೋಲಿನ ಬಲದಿಂದ ಉರುಗ್ವೆ ತಂಡ ಜಯ ಗಳಿಸಿತು. ಮೊದಲ ಪಂದ್ಯದಲ್ಲಿ ಆತಿಥೇಯ ರಷ್ಯಾಗೆ 0–5ರಿಂದ ಮಣಿದಿದ್ದ ಸೌದಿ ಅರೇಬಿಯಾ ಬುಧವಾರ ಪ್ರಬಲ ಪೈಪೋಟಿ ನೀಡಿತು. ಆದರೆ 23ನೇ ನಿಮಿಷದಲ್ಲಿ ಸ್ವಾರೆಜ್ ಅವರನ್ನು ಕಟ್ಟಿ ಹಾಕಲು ಸೌದಿ ರಕ್ಷಣಾ ಬಳಗಕ್ಕೆ ಸಾಧ್ಯವಾಗಲಿಲ್ಲ. ಎಡಭಾಗದಿಂದ ಲಭಿಸಿದ ಪಾಸ್ ಅನ್ನು ಗೋಲುಪೆಟ್ಟಿಗೆಯ ಬಳಿಯಲ್ಲಿ ನಿಯಂತ್ರಿಸಿದ ಸ್ವಾರೆಜ್, ಸುಲಭವಾಗಿ ಗೋಲು ಗಳಿಸಿ ಮುನ್ನಡೆ ತಂದುಕೊಟ್ಟರು.

ನಂತರ ಉಭಯ ತಂಡಗಳು ಜಿದ್ದಿಗೆ ಬಿದ್ದವರಂತೆ ಕಾದಾಡಿದರು. ಮುನ್ನಡೆಯನ್ನು ಹೆಚ್ಚಿಸಲುಉರುಗ್ವೆಗೆ ಆಗಲಿ, ಖಾತೆ ತೆರೆಯಲು ಸೌದಿ ಅರೇಬಿಯಾ ತಂಡಕ್ಕಾಗಲಿಸಾಧ್ಯವಾಗಲಿಲ್ಲ.

52ನೇ ಗೋಲು: ಬುಧವಾರ ಸ್ವಾರೆಜ್ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 52ನೇ ಗೋಲು ಗಳಿಸಿ ಉರುಗ್ವೆ ಪರ ಮೂರು ವಿಶ್ವಕಪ್ಗಳಲ್ಲಿ ಗೋಲು ಗಳಿಸಿದ ಏಕೈಕ ಆಟಗಾರ ಎಂಬ ಶ್ರೇಯಸ್ಸು ತಮ್ಮದಾಗಿಸಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.