ಬೆಂಗಳೂರು: ಗೋಲುಗಳ ಸುರಿಮಳೆಗೈದ ಕರ್ನಾಟಕದ ತಂಡವು ಪಶ್ಚಿಮ ಬಂಗಾಳದ ನಾಡಿಯಾದಲ್ಲಿ ‘ರಾಜಮಾತಾ ಜೀಜಾಬಾಯಿ ಟ್ರೋಫಿ’ಗಾಗಿ ಶನಿವಾರ ಆರಂಭಗೊಂಡ 29ನೇ ಮಹಿಳೆಯರ ರಾಷ್ಟ್ರೀಯ ಫುಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಶುಭಾರಂಭ ಮಾಡಿತು.

ಅಫ್ರೀನ್ ಪೀರ್ಭಾಯ್ ನಾಯಕತ್ವದ ಕರ್ನಾಟಕ ತಂಡವು ಬಿ ಗುಂಪಿನ ಮೊದಲ ಪಂದ್ಯದಲ್ಲಿ 13–0ಯಿಂದ ಜಮ್ಮು ಮತ್ತು ಕಾಶ್ಮೀರ ತಂಡವನ್ನು ಸುಲಭವಾಗಿ ಮಣಿಸಿತು.

ಕರ್ನಾಟಕದ ಹೇಮಾ ಮುಂಡಾ, ತನುಶ್ರೀ ರಾಯ್ ಹ್ಯಾಟ್ರಿಕ್ ಗೋಲು ಗಳಿಸಿದರು. ಆರುಷಿ ಸಂತೋಷ್ ಎರಡು ಗೋಲು ಗಳಿಸಿದರೆ, ಅನ್ಯಾ ಸುಸಾನ್ ಥಾಮಸ್, ರಿವ್ಕಾ ರಾಮ್ಜಿ, ಅಫ್ರೀನ್, ಮೈತ್ರೇಯಿ ಪಾಲಸಮುದ್ರಂ, ತನ್ವಿ ನಾಯರ್ ತಲಾ ಒಂದು ಬಾರಿ ಚೆಂಡನ್ನು ಗುರಿ ಸೇರಿಸಿದರು.

ಇದೇ ಸೋಮವಾರ ಕರ್ನಾಟಕ ತಂಡವು ಬಿಹಾರವನ್ನು ಎದುರಿಸಲಿದೆ. 23ರಂದು ಪಶ್ಚಿಮ ಬಂಗಾಳದ ವಿರುದ್ಧ ಸೆಣಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.