ಬೆಂಗಳೂರು: ಭಾರತದ ಆಕಾಂಕ್ಷಾ ನಿಟ್ಟುರೆ ಮತ್ತು ತನಿಶಾ ಕಶ್ಯಪ್ ಅವರು ಇಲ್ಲಿ ನಡೆಯುತ್ತಿರುವ ಎಸ್ಕೆಎಂಇ ಐಟಿಎಫ್ ಓಪನ್ ಮಹಿಳೆಯರ ಟೆನಿಸ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದರು.

ಎಸ್ಎಲ್ಟಿಎ ಟೆನಿಸ್ ಅಂಗಣದಲ್ಲಿ ಶನಿವಾರ ನಡೆದ ಸೆಮಿಫೈನಲ್ನಲ್ಲಿ ಏಳನೇ ಶ್ರೇಯಾಂಕದ ಆಕಾಂಕ್ಷಾ 7-5, 3-6, 6-2ರ ಮೂರು ಸೆಟ್ಗಳ ಹೋರಾಟದಲ್ಲಿ ಎರಡನೇ ಶ್ರೇಯಾಂಕದ ವೈಷ್ಣವಿ ಅಡ್ಕರ್ ಅವರಿಗೆ ಆಘಾತ ನೀಡಿದರು.

ಮತ್ತೊಂದು ಪಂದ್ಯದಲ್ಲಿ ಎಂಟನೇ ಶ್ರೇಯಾಂಕದ ತನಿಶಾ 6-1, 7-5ರ ನೇರ ಸೆಟ್ಗಳಿಂದ ಕ್ಯಾರೊ ಲನ್ ಡೆಲೌನೆ (ನ್ಯೂ ಕ್ಯಾಲೆಡೋನಿಯಾ) ಅವರನ್ನು ಹಿಮ್ಮೆಟ್ಟಿಸಿದರು.

ಡಬಲ್ಸ್ ವಿಭಾಗದಲ್ಲಿ ಭಾರತದ ಅಗ್ರ ಶ್ರೇಯಾಂಕದ ಹುಮೇರಾ ಬಹರ್ಮಸ್ ಮತ್ತು ಪೂಜಾ ಇಂಗಳೆ ಅವರು 7-6 (7-2), 6-4ರಿಂದ ಸ್ವದೇಶದ ಸಾಯಿ ಸಂಹಿತಾ ಮತ್ತು ದಿವಾ ಭಾಟಿಯಾ ಅವರನ್ನು ಸೋಲಿಸಿ ಫೈನಲ್ ಪ್ರವೇಶಿಸಿದರು.

ಮತ್ತೊಂದು ಸೆಮಿಫೈನಲ್ನಲ್ಲಿ ಆಕಾಂಕ್ಷಾ ಮತ್ತು ಸೋಹಾ ಸಾದಿಕ್ ಜೋಡಿಯು 5-4ರಿಂದ ಅರೀನಾ ಅರಿಫುಲ್ಲಿನಾ ಮತ್ತು ಜೋ ಲೀನ್ ಸಾ ವಿರುದ್ಧ ಮುನ್ನಡೆಯಲ್ಲಿದ್ದಾಗ ಮಳೆ ಸುರಿದು ಪಂದ್ಯವನ್ನು ಸ್ಥಗಿತಗೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.