ನವದೆಹಲಿ: ಭಾರತೀಯ ಸೇನೆಯ (ಸರ್ವಿಸಸ್ ತಂಡ) ಇಬ್ಬರು ಮಹಿಳಾ ಕ್ರೀಡಾಪಟುಗಳು ಇದೇ ಮೊದಲ ಬಾರಿ ಒಲಿಂಪಿಕ್ ಕೂಟದಲ್ಲಿ ಸ್ಪರ್ಧಿಸಲಿದ್ದಾರೆ.

2022ರಲ್ಲಿ ನಡೆದಿದ್ದ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಬಾಕ್ಸಿಂಗ್ನಲ್ಲಿ ಕಂಚಿನ ಪದಕ ಜಯಿಸಿದ್ದ ಹವಾಲ್ದಾರ್ ಜೈಸ್ಮೈನ್ ಲಂಬೊರಿಯಾ ಮತ್ತು ಹೋದ ವರ್ಷದ ಏಷ್ಯನ್ ಕುಸ್ತಿ ಚಾಂಪಿಯನ್ಷಿಪ್ನಲ್ಲಿ ಕಂಚು ಗಳಿಸಿದ್ದ ಸಿಪಿಒ ರಿತಿಕಾ ಹೂಡಾ ಅವರು ಒಲಿಂಪಿಕ್ಸ್ನಲ್ಲಿ ಕಣಕ್ಕಿಳಿಯಲಿದ್ದಾರೆ.

ಪ್ಯಾರಿಸ್ನಲ್ಲಿ ಸ್ಪರ್ಧಿಸಲಿರುವ ಭಾರತ ತಂಡದಲ್ಲಿ ಒಟ್ಟು 117 ಕ್ರೀಡಾಪಟುಗಳು ಇದ್ದಾರೆ. ಅದರಲ್ಲಿ ಒಟ್ಟು 24 ಅಥ್ಲೀಟ್ಗಳು ಸರ್ವಿಸಸ್ನವರು. ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಅಥ್ಲೀಟ್, ಸುಬೇದಾರ್ ನೀರಜ್ ಚೋಪ್ರಾ ಅವರು ಪ್ರಮುಖರಾಗಿದ್ದಾರೆ. ಈ ತಂಡದಲ್ಲಿ 22 ಮಂದಿ ಪುರುಷರಿದ್ದಾರೆ ಎಂದು ಕೇಂದ್ರ ರಕ್ಷಣಾ ಸಚಿವಾಲಯ ತಿಳಿಸಿದೆ.

ಸರ್ವಿಸಸ್ನ ಅಮಿತ್ ಪಂಘಲ್ (ಬಾಕ್ಸಿಂಗ್), ತಜೀಂದರ್ ಸಿಂಗ್ ತೂರ್ (ಶಾಟ್ಪಟ್), ಅವಿನಾಶ್ ಸಾಬಳೆ (3000 ಮೀ ಸ್ಟೀಪಲ್ಚೇಸ್), ಮೊಹಮ್ಮದ್ ಅನಾಸ್ ಯಾಹಿಯಾ , ಮೊಹಮ್ಮದ್ ಅಜ್ಮಲ್, ಸಂತೋಷಕುಮಾರ್ ತಮಿಳರಸನ್ ಮತ್ತು ಮಿಜೊ ಚಾಕೊ ಕುರಿಯನ್ (4X400 ಮೀ ರಿಲೆ), ಅಬ್ಬುಲ್ಲಾ ಅಬೂಬಕ್ಕರ್ (ಟ್ರಿಪಲ್ ಜಂಪ್), ತರುಣದೀಪ್ ರಾಯ್ ಮತ್ತು ಧೀರಜ್ ಬೊಮ್ಮದೇವರ (ಆರ್ಚರಿ) ಮತ್ತು ಸಂದೀಪ್ ಸಿಂಗ್ (ಶೂಟಿಂಗ್) ಅವರೂ ಭಾರತ ತಂಡದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.