ನವದೆಹಲಿ: ಭಾರತದ ಅಭಯ್ ಸಿಂಗ್ ಅವರು ಟೊರಾಂಟೊದಲ್ಲಿ ನಡೆಯುತ್ತಿರುವ ಗುಡ್‌ಫೆಲೊ ಕ್ಲಾಸಿಕ್ ಸ್ಕ್ವಾಷ್ ಟೂರ್ನಿಯಲ್ಲಿ ಫೈನಲ್ ಪ್ರವೇಶಿಸಿದ್ದಾರೆ.

ಶನಿವಾರ ನಡೆದ ಪುರುಷರ ಸಿಂಗಲ್ಸ್‌ನಲ್ಲಿ ಅಭಯ್ ಸಿಂಗ್ 11-5, 6-11, 11-7, 11-6ರಿಂದ ಈಜಿಪ್ತ್‌ನ ಅಬ್ದಲ್‌ರೆಹಮಾನ್ ಅಬ್ದಲ್‌ಖಲೆಕ್ ವಿರುದ್ಧ ಸೆಮಿಫೈನಲ್‌ನಲ್ಲಿ ಜಯಿಸಿದರು.

ಫೈನಲ್‌ನಲ್ಲಿ ಅಭಯ್ ಅವರು ವೇಲ್ಸ್‌ನ ಎಲಿಯಾಟ್ ಮಾರಿಸ್ ಅವರನ್ನು ಎದುರಿಸುವರು.

54 ನಿಮಿಷಗಳವರೆಗೆ ನಡೆದ ಪಂದ್ಯದಲ್ಲಿ ಅಭಯ್ ಪಾರಮ್ಯ ಸಾಧಿಸಿದರು. ವಿಶ್ವ ರ‍್ಯಾಂಕಿಂಗ್‌ನಲ್ಲಿ 66ನೇ ಸ್ಥಾನದಲ್ಲಿರುವ ಅಭಯ್ ಈಚೆಗೆ ಚೀನಾದಲ್ಲಿ ನಡೆದಿದ್ದ ಏಷ್ಯನ್ ಕ್ರೀಡಾಕೂಟದಲ್ಲಿ ತಂಡ ವಿಭಾಗದಲ್ಲಿ ಚಿನ್ನ ಹಾಗೂ ಮಿಶ್ರ ಡಬಲ್ಸ್‌ನಲ್ಲಿ ಕಂಚಿನ ಪದಕ ಜಯಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.