ನವಿ ಮುಂಬೈ : 12 ಮಂದಿ ಸದಸ್ಯರಿಗೆ ಕೋವಿಡ್–19 ಖಚಿತಪಟ್ಟ ಕಾರಣ ಭಾರತ ತಂಡವು ಏಷ್ಯಾಕಪ್ ಫುಟ್‌ಬಾಲ್ ಟೂರ್ನಿಯಿಂದ ಹೊರಬಿದ್ದಿದೆ. ಇದರಿಂದಾಗಿ ಭಾನುವಾರ ನಡೆಯಬೇಕಿದ್ದ ಚೀನಾ ತೈಪೆ ಎದುರಿನ ಪಂದ್ಯವೂ ರದ್ದಾಯಿತು.

ಕೋವಿಡ್ ಪ್ರಕರಣಗಳು ಅಲ್ಲದೆ ಇಬ್ಬರು ಆಟಗಾರ್ತಿಯರು ಗಾಯಗೊಂಡಿದ್ದ ಹಿನ್ನೆಲೆಯಲ್ಲಿ ಪಂದ್ಯಕ್ಕೆ ತಂಡವನ್ನು ಕಣಕ್ಕಿಳಿಸಲು ಸಾಧ್ಯವಾಗಲಿಲ್ಲ. ಈ ಮೊದಲಿ ಇಬ್ಬರು ಆಟಗಾರ್ತಿಯರು ಕೋವಿಡ್ ಕಾರಣದಿಂದ ಹೊರಗುಳಿದಿದ್ದರು.

ಏಷ್ಯನ್ ಫುಟ್ಬಾಲ್ ಕಾನ್ಫೆಡರೇಷನ್ (ಎಎಫ್‌ಸಿ) ಪಂದ್ಯಾವಳಿಯ ನಿಯಮಗಳ ಅನ್ವಯ ತಂಡವು ಪಂದ್ಯಕ್ಕೆ ಆಟಗಾರ್ತಿಯರನ್ನು ಕಣಕ್ಕಿಳಿಸಲು ಸಾಧ್ಯವಾಗದಿದ್ದರೆ ಸ್ಪರ್ಧೆಯಿಂದ ಹಿಂದೆ ಸರಿದಿದೆ ಎಂದು ಪರಿಗಣಿಸಲಾಗುತ್ತದೆ.

ಜನವರಿ 21ರಂದು ಆಟಗಾರ್ತಿಯರನ್ನು ಆರ್‌ಟಿ– ಪಿಸಿಆರ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಭಾನುವಾರ ಅದರ ಫಲಿತಾಂಶ ಬಂದಿದೆ.

ಚೀನಾಗೆ ಗೆಲುವು: ಎಂಟು ಬಾರಿಯ ಚಾಂಪಿಯನ್ ಚೀನಾ ತಂಡವು ಟೂರ್ನಿಯಲ್ಲಿ ಮತ್ತೊಂದು ಸೊಗಸಾದ ಗೆಲುವು ದಾಖಲಿಸಿತು. ಭಾನುವಾರ ನಡೆದ ಪಂದ್ಯದಲ್ಲಿ ವ್ಯಾಂಗ್ ಶುಯಾಂಗ್ ಮತ್ತು ವಾಂಗ್ ಶನ್ಸೇನ್ ಅವರ ಭರ್ಜರಿ ಆಟದ ಬಲದಿಂದ ಚೀನಾ 7–0ಯಿಂದ ಇರಾನ್ ವಿರುದ್ಧ ಜಯ ಗಳಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.