ನವದೆಹಲಿ: ಕೊರೊನಾ ಸೋಂಕು ಹಬ್ಬುತ್ತಿರುವ ಹಿನ್ನೆಲೆಯಲ್ಲಿ ಇಂಡಿಯನ್ ಗ್ರ್ಯಾನ್ಪ್ರಿ ಅಥ್ಲೆಟಿಕ್ ಸರಣಿಗಳನ್ನು ನಡೆಸಬೇಕೇ ಎಂಬ ವಿಷಯದಲ್ಲಿ ಭಾರತ ಅಥ್ಲೆಟಿಕ್ ಫೆಡರೇಷನ್ (ಎಎಫ್ಐ), ರಾಷ್ಟ್ರೀಯ ತರಬೇತುದಾರರ ಮತ್ತು ವಿದೇಶಿ ತಜ್ಞರ ಅಭಿಪ್ರಾಯ ಪಡೆಯಲು ನಿರ್ಧರಿಸಿದೆ.

ಈ ಗ್ರ್ಯಾನ್ಪ್ರಿ ಸರಣಿಗಳು ಮಾರ್ಚ್ 20ರಂದು ಪಟಿಯಾಲಾದಲ್ಲಿ, 25ರಂದು ಸಂಗ್ರೂರ್ನಲ್ಲಿ ಮತ್ತು ಮಾರ್ಚ್ 29 ರಂದು ದೆಹಲಿಯಲ್ಲಿ ನಿಗದಿಯಾಗಿವೆ.

ಇಬ್ಬರು ಕೋವಿಡ್–19 ಜ್ವರದಿಂದ ಮೃತಪಟ್ಟಿದ್ದು, 80ಕ್ಕೂ ಹೆಚ್ಚು ಮಂದಿಗೆ ಸೋಂಕು ತಗುಲಿರುವುದು ದೃಢಪಟ್ಟಿರುವ ಕಾರಣ, ಈ ಕೂಟಗಳನ್ನು ನಡೆಸುವ ವಿಷಯದಲ್ಲಿ ಎಎಫ್ಐನ ಸ್ಪರ್ಧಾ ಸಮಿತಿ ಶನಿವಾರ ಸಭೆ ಸೇರಿತ್ತು.

‘ಇಂಡಿಯನ್ ಗ್ರ್ಯಾನ್ಪ್ರಿ ಕೂಟಗಳಿಗೆ ವಿಶ್ವ ಅಥ್ಲೆಟಿಕ್ಸ್ ಮಾನ್ಯತೆಯಿದ್ದು, ಅವುಗಳು ಅಥ್ಲೀಟುಗಳಿಗೆ ಈ ಋತುವಿನ ಮೊದಲ ಸ್ಪರ್ಧೆಗಳಾಗಿವೆ. ಹೀಗಾಗಿ ಈಗಿನ ಪರಿಸ್ಥಿತಿಯಲ್ಲಿ ಇವುಗಳನ್ನು ನಡೆಸುವ ಬಗ್ಗೆ ರಾಷ್ಟ್ರೀಯ ಕೋಚ್ಗಳಿಗೆ ಮತ್ತು ವಿಶೇಶಿ ತಜ್ಞ ಕೋಚ್ಗಳಿಗೆ ಅಭಿಪ್ರಾಯ ನೀಡುವಂತೆ ಕೇಳಿದ್ದೇವೆ’ ಎಂದು ಎಎಫ್ಐ ಅಧ್ಯಕ್ಷ ಅದಿಲ್ ಜೆ.ಸುಮಾರಿವಾಲಾ ಪ್ರಕಟಣೆಯಲ್ಲಿ ತಿಳಿಸಿದರು.

ಈ ಕೂಟಗಳನ್ನು ನಡೆಸುವ ಮೊದಲು ವಸ್ತುಸ್ಥಿತಿಯ ಅವಲೋಕನ ನಡೆಸಲು ಸಮಿತಿಯು ನಿರ್ಧರಿಸಿತು. ಅದಿಲ್ ಅವರು ದೂರವಾಣಿ ಮುಖಾಂತರ ಸಭೆಯಲ್ಲಿ ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.