ಬುಧವಾರ, 18 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

23 ವರ್ಷದ ಒಳಗಿನವರ ಅಥ್ಲೆಟಿಕ್ಸ್‌: ಕೂಟ ದಾಖಲೆ ಬರೆದ ತುಷಾರ್‌

Published : 14 ಸೆಪ್ಟೆಂಬರ್ 2024, 17:31 IST
Last Updated : 14 ಸೆಪ್ಟೆಂಬರ್ 2024, 17:31 IST
ಫಾಲೋ ಮಾಡಿ
Comments

ಮೈಸೂರು: ಬೆಳಗಾವಿಯ ಬಿ.ಎಚ್.ತುಷಾರ್‌ ವಸಂತ್‌, ಶನಿವಾರ ಇಲ್ಲಿನ ಚಾಮುಂಡಿ ವಿಹಾರ ಕ್ರೀಡಾಂಗಣದಲ್ಲಿ ಆರಂಭವಾದ ಕರ್ನಾಟಕ ರಾಜ್ಯ ಅಂತರ ಜಿಲ್ಲಾ ಜೂನಿಯರ್ ಮತ್ತು 23 ವರ್ಷದ ಒಳಗಿನವರ ಅಥ್ಲೆಟಿಕ್ಸ್‌ನಲ್ಲಿ ಪುರುಷರ 800 ಮೀಟರ್ಸ್ ಓಟದಲ್ಲಿ ಹೊಸ ದಾಖಲೆ ಬರೆದರು.

ತುಷಾರ್ 1ನಿ. 49.71 ಸೆ.ಗಳಲ್ಲಿ ದೂರವನ್ನು ಕ್ರಮಿಸುವ ಮೂಲಕ 2022ರಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಎಂ.ಸಿ. ಮಿಲನ್ ಸ್ಥಾಪಿಸಿದ್ದ (1ನಿ.53.40 ಸೆ.) ಕೂಟ ದಾಖಲೆಯನ್ನು ಮುರಿದರು. ಇದೇ ವಯೋಮಿತಿಯ ಮಹಿಳೆಯರ 800 ಮೀಟರ್ಸ್ ಓಟದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ದೀಪಶ್ರೀ 2ನಿ.16.25 ಸೆಕೆಂಡುಗಳಲ್ಲಿ ಗುರಿ ತಲುಪಿ ಅಗ್ರ ಸ್ಥಾನ ತಮ್ಮದಾಗಿಸಿಕೊಂಡರು.

ಮೈಸೂರು ಜಿಲ್ಲಾ ಅಥ್ಲೆಟಿಕ್‌ ಸಂಸ್ಥೆ ಆಶ್ರಯದಲ್ಲಿ ನಡೆದಿರುವ ಟೂರ್ನಿಯಲ್ಲಿ ಒಟ್ಟು 5 ವಿಭಾಗಗಳಲ್ಲಿ 136 ಸ್ಪರ್ಧೆಗಳು ನಿಗದಿಯಾಗಿದ್ದು, 1,600 ಸ್ಪರ್ಧಿಗಳು ಪಾಲ್ಗೊಂಡಿದ್ದಾರೆ. ಸೆ. 17ರವರೆಗೆ ಸ್ಪರ್ಧೆಗಳು ನಡೆಯಲಿವೆ.

ಮೊದಲ ದಿನದ ಫಲಿತಾಂಶ

ಪುರುಷರು: 23 ವರ್ಷದ ಒಳಗಿನವರು:

800 ಮೀ. ಓಟ: ಬಿ.ಎಚ್.ತುಷಾರ್ ವಸಂತ್‌ (ಬೆಳಗಾವಿ, ಕಾಲ: 1ನಿ. 49.71 ಸೆ)–1, ಕೆ. ಲೋಕೇಶ (ಯಾದಗಿರಿ)–2, ಎಸ್. ಕಮಲ್‌ ಕಣ್ಣನ್‌ (ಬೆಂಗಳೂರು)–3

20 ವರ್ಷದ ಒಳಗಿನವರು: 800 ಮೀ. ಓಟ: ಜೆ.ಆರ್‌.ಕಲ್ಯಾಣ್‌ (ಬೆಂಗಳೂರು, ಕಾಲ: 1ನಿ.58.70 ಸೆ.)–1, ಎಚ್‌.ವೈ. ಚಿಂತನ್‌ (ಯಾದಗಿರಿ)–2, ಕಾಶಿ ಬೊಯಣ್ಣ (ದಕ್ಷಿಣ ಕನ್ನಡ)–3.

ಮಹಿಳೆಯರು: 23 ವರ್ಷದ ಒಳಗಿನವರು: ದೀಪಶ್ರೀ (ದಕ್ಷಿಣ ಕನ್ನಡ, ಕಾಲ: 2ನಿ.16.25 ಸೆ.)–1, ಪ್ರತೀಕ್ಷಾ (ಉಡುಪಿ)–2, ರೇಖಾ ಬಸಪ್ಪ (ದಕ್ಷಿಣ ಕನ್ನಡ)–3

20 ವರ್ಷದೊಳಗಿವರು: ವೈಷ್ಣವಿ (ಬೆಳಗಾವಿ, 2ನಿ.20.20 ಸೆ)–1, ಪ್ರೀತಿಶಾ ಶೆಟ್ಟಿ (ದಕ್ಷಿಣ ಕನ್ನಡ)–2

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT