ದಾವಣಗೆರೆ: ಮೈಸೂರಿನ ಶ್ಯಾಮ್ ಬಿಂಡಿಗನವಿಲೆ ಅವರು ಬೆಂಗಳೂರಿನ ಅನಿರುದ್ ರೆಡ್ಡಿ ವಿರುದ್ಧ ಗೆಲ್ಲುವ ಮೂಲಕ ರಾಜ್ಯ ರ್ಯಾಂಕಿಂಗ್ ಸಬ್ ಜೂನಿಯರ್ ಬ್ಯಾಡ್ಮಿಂಟನ್ ಟೂರ್ನಿಯ 15 ವರ್ಷದೊಳಗಿನ ಬಾಲಕರ ವಿಭಾಗದಲ್ಲಿ ಸೆಮಿಫೈನಲ್ ಪ್ರವೇಶಿಸಿದರು.

ಇಲ್ಲಿನ ನೇತಾಜಿ ಸುಭಾಷ್ಚಂದ್ರ ಬೋಸ್ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ಸಂಜೆ ನಡೆದ ರೋಚಕ ಪಂದ್ಯದಲ್ಲಿ ಅವರು 21–18, 21–15ರಲ್ಲಿ ಗೆದ್ದರು.

ಬೆಂಗಳೂರಿನ ಮೆಹುಲ್ ಮನವ್ ಅರುಳ್ಮುರುಗನ್ ಅವರು ತ್ರಿಶನ್ಕುಮಾರ್ ಎಂ. ಅವರನ್ನು 21–12, 10–21, 21–13ರಿಂದ ಮಣಿಸಿದರು. ಬೆಂಗಳೂರಿನ ಪಿಯೂಷ್ ತ್ರಿಪಾಟಿ ಅವರು ಸನ್ನಿ ಎಸ್. ಅವರನ್ನು 21–14 21–8ರಿಂದ ಸೋಲಿಸಿದರೆ, ಧಾರವಾಡದ ಸಂಭ್ರಮ್ ಕೋಳಿವಾಡ್ ಅವರನ್ನು 21–16 21–10ರಿಂದ ಮಣಿಸಿದ ಬೆಂಗಳೂರಿನ ಸಾಯಿ ಪುಷ್ಕರ್ ಸೆಮಿಫೈನಲ್ಗೆ ಲಗ್ಗೆ ಇಟ್ಟರು.

15 ವರ್ಷದೊಳಗಿನ ಬಾಲಕಿಯರ ವಿಭಾಗದಲ್ಲಿ ಐಕ್ಯಾ ಶೆಟ್ಟಿ ಅವರು ಸೆಲ್ವಸಮೃದ್ಧಿ ಸೆಲ್ವಪ್ರಭು ಅವರನ್ನು 21–15, 21–13ರಿಂದ ಮಣಿಸಿ ಸೆಮಿಫೈನಲ್ಗೆ ಲಗ್ಗೆ ಇಟ್ಟರು. ನಿಧಿ ಆತ್ಮರಾಮ್ ಅವರು ಅನಿಕಾ ತೇಜ ನಾರಾಯಣ್ ಎದುರು 23–21, 21–9ರಿಂದ, ಶೈನಾ ಮಣಿಮುತ್ತು ಅವರು ಐಶಾ ದಾಸ್ ವಿರುದ್ಧ 22–20, 21–15ರಿಂದ ಗೆದ್ದರು. ಗೌರಿ ಸತೀಶ್ ಅದಿತಿ ಸುಶಾಂತ್ ಎದುರು 21–19, 21–6 ಅಂತರದಲ್ಲಿ ಗೆದ್ದು ಸೆಮಿಫೈನಲ್ ತಲುಪಿದರು.

15 ವರ್ಷದೊಳಗಿನ ಬಾಲಕರ ಡಬಲ್ಸ್ ವಿಭಾಗದಲ್ಲಿ ಪಿಯೂಷ್ ತ್ರಿಪಾಠಿ ಹಾಗೂ ಶ್ಯಾಮ್ ಬಿಂಡಿಗನವಿಲೆ ಜೋಡಿಯು ಅರ್ಮಾನ್ ಖಾನ್ ಹಾಗೂ ಪಾರ್ಥ್ ಕಾಪಸಿ ಜೋಡಿಯನ್ನು 21–12, 21–14ರಿಂದ ಸೋಲಿಸಿ ಸೆಮಿಫೈನಲ್ ಪ್ರವೇಶಿಸಿತು.

ಶೈಲೇಶ್ ಗಂಜಿಯವರ್ ಮತ್ತು ಶರವಣ ಆದಿತ್ಯ ಜೋಡಿಯು ಚಿರಂತ್ ರಾಜ್ ಬಿ.ಆರ್. ಹಾಗೂ ದುಶ್ಯಂತ್ ಗೌಡ ಅವರನ್ನು 21–10, 21–13ರಿಂದ, ಹರ್ಷವರ್ಧನ್ ಎಸ್. ಮತ್ತು ನಿಕೇತನ್ ಹರಿ ಎನ್.ಡಿ. ಜೋಡಿಯು ಪರೀಕ್ಷಿತ್ ಪ್ರಸಾದ್ ಮತ್ತು ರೋಚನ್ ಎಸ್. ಅವರನ್ನು 21–12, 21–14 ರಿಂದ ಮಣಿಸಿ ಉಪಾಂತ್ಯ ಪ್ರವೇಶಿಸಿತು. ಸಾತ್ವಿಕ್ ಎಸ್.ಪ್ರಭು, ತ್ರಿಶನ್ ಕುಮಾರ್ ಜೋಡಿಯು ಗೌತಮ್ ಎಸ್ ನಾಯರ್ ಜಾಹೂ ಸಿದ್ಧಾರ್ಥ್ ಎಸ್.ನಾಯರ್ ಜೋಡಿಯನ್ನು 21–12, 22–20ರಿಂದ ಮಣಿಸಿ ಅಂತಿಮ ನಾಲ್ಕರ ಘಟ್ಟ ತಲುಪಿತು.

15 ವರ್ಷದೊಳಗಿನ ಬಾಲಕಿಯರ ಡಬಲ್ಸ್ನ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ನಿಧಿ ಆತ್ಮಾರಾಮ್ ಮತ್ತು ಸೆಲ್ವಸಮೃದ್ಧಿ ಸೆಲ್ವಪ್ರಭು ಜೋಡಿಯು 21–6, 23–21ರಿಂದ ಅನ್ವಿ ಬೋರಾ ಹಾಗೂ ಯಶಿಕಾ ಶಿವಪ್ರಕಾಶ್ ಎದುರು ಗೆದ್ದರು.

ಕೀರ್ತಿ ಬಾಲಾಜಿ ಮತ್ತು ಶ್ರೀಯಾ ಜೋಶಿ ಜೋಡಿಯು 21–11, 21–15ರಲ್ಲಿ ಮಾನ್ಯಾ ಶ್ರೀಕಾಂತ್ ಹೊಳ್ಳ ಹಾಗೂ ಶ್ರದ್ಧಾ ಮನೋಜ್ ಎದುರು ಗೆದ್ದರೆ, ಅದಿತಿ ಸುಶಾಂತ್ ಹಾಗೂ ಹನ್ಸಿಕಾ ರಾಕೇಶ್ ಜೋಡಿಯು 23–25, 21–19, 21–13ರಲ್ಲಿ ಸಿರಿ ಟಿ.ಆರ್ ಜಾಗೂ ಸ್ಮೃತಿ ಎಸ್ ಎದುರು ಜಯಿಸಿ ಬೀಗಿದರು.

ಅವನಿ ಕುಲಕರ್ಣಿ ಮತ್ತು ತನ್ವಿ ಮುನೋತ್ ಜೋಡಿಯು 21–15, 15–21, 21–18ರಿಂದ ದಿಶಾ ರವಿ ಭಟ್ ಹಾಗೂ ಸಹನಾ ಶ್ರೀರಾಮ್ ಜೋಡಿ ಎದುರು ಗೆಲುವು ಕಂಡಿತು..

17 ವರ್ಷದ ಬಾಲಕರ ಡಬಲ್ಸ್ ವಿಭಾಗದಲ್ಲಿ ಮಯೂಕ್ ಡಿ.ಬಿ ಹಾಗೂ ಶ್ರೇಯಸ್ ಚಂದ್ರಶೇಖರ್ ಜೋಡಿಯು ಆದಿತ್ಯ ಬಾಫ್ಣಾ ಹಾಗೂ ಸಹಿತ್ ಮಹೇಂದ್ರ ಅವರನ್ನು 22–20, 21–10ರಿಂದ ಮಣಿಸಿ ಸೆಮಿಫೈನಲ್ನಲ್ಲಿ ಸ್ಥಾನ ಭದ್ರಪಡಿಸಿಕೊಂಡಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.