ಬೆಂಗಳೂರು: ಇಂಡಿಯನ್ ಬ್ಯಾಸ್ಕೆಟ್‌ಬಾಲ್ ಲೀಗ್‌ನ (ಐಎನ್‌ಬಿಎಲ್) 5X5 ಮಾದರಿಯ ಪಂದ್ಯಗಳು ಅಕ್ಟೋಬರ್ 12ರಿಂದ ಆರಂಭವಾಗಲಿವೆ.

ನವದೆಹಲಿಯಲ್ಲಿ ಶನಿವಾರ ನಡೆದ ಪತ್ರಿಕಾಗೋಷ್ಠಿಯಲ್ಲಿ ಭಾರತ ಬ್ಯಾಸ್ಕೆಟ್‌ಬಾಲ್ ಫೆಡರೇಷನ್ (ಬಿಎಫ್‌ಐ) ಅಧ್ಯಕ್ಷ ಕೆ. ಗೋವಿಂದರಾಜು ಮತ್ತು ಪ್ರಧಾನ ಕಾರ್ಯದರ್ಶಿ ಚಂದ್ರಮುಖಿ ಶರ್ಮಾ ಈ ವಿಷಯ ಪ್ರಕಟಿಸಿದರು.

ಬೆಂಗಳೂರು, ಚಂಡೀಗಡ, ಚೆನ್ನೈ, ದೆಹಲಿ, ಮುಂಬೈ ಮತ್ತು ಕೋಲ್ಕತ್ತ ತಂಡಗಳು ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. ಮೊದಲ ಸುತ್ತಿನ ಪಂದ್ಯಗಳು ಜೈಪುರದಲ್ಲಿ ಅಕ್ಟೋಬರ್ 12ರಿಂದ 16ರವರೆಗೆ, ಅ.26ರಿಂದ 30ರವರೆಗೆ ಕಟಕ್‌ನಲ್ಲಿ ಎರಡನೇ ಸುತ್ತು ಮತ್ತು ಡಿಸೆಂಬರ್ 14ರಿಂದ 18ರವರೆಗೆ ಮೂರನೇ ಸುತ್ತಿನ ಹಣಾಹಣಿಗಳು ನಡೆಯಲಿವೆ.

ಬೆಂಗಳೂರಿನಲ್ಲಿ 2023ರ ಜನವರಿ 11ರಿಂದ 15ರವರೆಗೆ ಪ್ಲೇ ಆಫ್ ಪಂದ್ಯಗಳು ನಡೆಯಲಿವೆ. ಈ ವರ್ಷದ ಆರಂಭದಲ್ಲಿ ದೇಶದ 20 ನಗರಗಳು 3X3 ಮಾದರಿಯ ಪಂದ್ಯಗಳನ್ನು ಆಯೋಜಿಸಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.