ಬೆಂಗಳೂರು: ಅಮೋಘ ಸಾಮರ್ಥ್ಯ ತೋರಿದ ಭಾರತದ ಅನಿತಾ ಚೌಧರಿ ಮತ್ತು ಇಥಿಯೋಪಿಯಾದ ಮಿಕಿಯಾಸ್ ಯೆಮೆಟಾ ಅವರು ಬೆಂಗಳೂರು ಮ್ಯಾರಥಾನ್‌ನಲ್ಲಿ ಕ್ರಮವಾಗಿ ಮಹಿಳಾ ಮತ್ತು ಪುರುಷರ ವಿಭಾಗಗಳಲ್ಲಿ ಚಾಂಪಿಯನ್ ಆಗಿದ್ದಾರೆ.

ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಮಹಿಳಾ ವಿಭಾಗದ ಸ್ಪರ್ಧೆಯಲ್ಲಿ ಉತ್ತರ ಪ್ರದೇಶದ ಅನಿತಾ 3 ಗಂಟೆ 11 ನಿಮಿಷ 53 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರು.

ಇಥಿಯೋಪಿಯಾದ ಜೆನಾಶ್ ಬೆಕೆಲೆ ಮಾಮೊ ಬೆಳ್ಳಿಯ ಪದಕ ಗೆದ್ದರು. ಅವರು ನಿಗದಿತ ದೂರ ಕ್ರಮಿಸಲು 3 ಗಂಟೆ 16 ನಿಮಿಷ 56 ಸೆಕೆಂಡು ತೆಗೆದುಕೊಂಡರು.

ಭಾರತದ ಸ್ವಾತಿ ಪಂಚಬುದ್ಧೆ (3:23:05ಸೆ.) ಕಂಚಿನ ಪದಕ ಪಡೆದರು.

ಪುರುಷರ ವಿಭಾಗದಲ್ಲಿ ಇಥಿಯೋಪಿಯಾದ ಮಿಕಿಯಾಸ್ 2 ಗಂಟೆ 35 ನಿಮಿಷ 20 ಸೆಕೆಂಡುಗಳಲ್ಲಿ ಅಂತಿಮ ರೇಖೆ ಮುಟ್ಟಿದರು.

ಇಥಿಯೋಪಿಯಾದವರೇ ಆದ ಟೀರೀ ಸೆವಾಂಜಾವ್ (2:36:29ಸೆ.) ಮತ್ತು ಭಾರತದ ಎಸ್. ಹರಿ ಕೃಷ್ಣನ್ (2:37:21ಸೆ.) ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಪಡೆದರು.

ಹಾಫ್ ಮ್ಯಾರಥಾನ್‌ನ ಪುರುಷರ ವಿಭಾಗದಲ್ಲಿ ಕೀನ್ಯಾದ ಎವಾನ್ಸ್ ಸೈಟೋಟಿ 1 ಗಂಟೆ 8 ನಿಮಿಷ 54 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಮೊದಲ ಸ್ಥಾನ ತಮ್ಮದಾಗಿಸಿಕೊಂಡರು.

ಮಹಿಳಾ ವಿಭಾಗದ ಪ್ರಶಸ್ತಿ ಇಥಿಯೋಪಿಯಾದ ಬಿರ್ಟುಕನ್ ಶೆವಾಯ ಅವರ ಪಾಲಾಯಿತು. ಅವರು 1 ಗಂಟೆ 29 ನಿಮಿಷ 19 ಸೆಕೆಂಡುಗಳ ಸಾಮರ್ಥ್ಯ ತೋರಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.