ಟೋಕಿಯೊ: ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್ ಟೂರ್ನಿಯಲ್ಲಿ ಭಾರತದ ಹೆಮ್ಮೆಯ ಲಕ್ಷ್ಯ ಸೇನ್ ಪ್ರೀಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟಿದ್ದಾರೆ.

ಆದರೆ ಕಳೆದ ಬಾರಿಯ ರನ್ನರ್-ಅಪ್ ಕಿದಂಬಿ ಶ್ರೀಕಾಂತ್, ಸೋಲಿನ ಆಘಾತದೊಂದಿಗೆ ಟೂರ್ನಿಯಿಂದಲೇ ನಿರ್ಗಮಿಸಿದ್ದಾರೆ.

ಇದನ್ನೂ ಓದಿ:ವಿಶ್ವ ಬ್ಯಾಡ್ಮಿಂಟನ್ ಚಾಂಪಿಯನ್ಷಿಪ್: ಪ್ರೀಕ್ವಾರ್ಟರ್ಗೆ ಸೈನಾ ನೆಹ್ವಾಲ್

ಬುಧವಾರ ನಡೆದ ಪುರುಷ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನಲ್ಲಿ ಕಾಮನ್ವೆಲ್ತ್ ಗೇಮ್ಸ್ ಚಾಂಪಿಯನ್ ಲಕ್ಷ್ಯ ಸೇನ್ ಅವರು ಸ್ಪೇನ್ನ ಲೂಯಿಸ್ ಪೆನಾಲ್ವೆರ್ ವಿರುದ್ಧ 21-17, 21-10ರ ಅಂತರದಲ್ಲಿ ಗೆಲುವು ದಾಖಲಿಸಿ ಮುನ್ನಡೆದರು.

ಎದುರಾಳಿ ಮೇಲೆ ಪಾರುಪತ್ಯ ಮೆರೆದ ಸೇನ್, 72 ನಿಮಿಷಗಳಲ್ಲಿ ಪಂದ್ಯ ವಶಪಡಿಸಿಕೊಂಡರು.

ಕಿದಂಬಿ ಕನುಸು ಭಗ್ನ...
ಪುರುಷ ವಿಭಾಗದ ಎರಡನೇ ಸುತ್ತಿನ ಹೋರಾಟದಲ್ಲಿ ಕಿದಂಬಿ ಅವರು, ವಿಶ್ವ ನಂ. 32 ರ್ಯಾಂಕ್ನ ಚೀನಾದ ಜಾವೊ ಜುನ್ ಪೆಂಗ್ ವಿರುದ್ಧ 18-21, 17-21ರ ಅಂತರದಲ್ಲಿ ಸೋಲು ಅನುಭವಿಸಿದರು.

ಇದನ್ನೂ ಓದಿ:ಚೆಸ್: ನಾರ್ವೆಯ ಕಾರ್ಲ್ಸನ್ ಮಣಿಸಿದ ಭಾರತದ ಪ್ರಗ್ನಾನಂದ

ಏತನ್ಮಧ್ಯೆ ಪುರುಷ ಡಬಲ್ಸ್ ವಿಭಾಗದಲ್ಲಿ ಎಂ.ಆರ್. ಅರ್ಜುನ್ ಹಾಗೂ ಧ್ರುವ್ ಕಪಿಲ ಜೋಡಿಯು ಪ್ರಿಕ್ವಾರ್ಟರ್ ಫೈನಲ್ಗೆ ಲಗ್ಗೆಯಿಟ್ಟಿದೆ. ಆದರೆ ಮಹಿಳಾ ಡಬಲ್ಸ್ನಲ್ಲಿ ಅಶ್ವಿನಿ ಪೊನ್ನಪ್ಪ ಹಾಗೂ ಎನ್. ಸಿಕ್ಕಿ ರೆಡ್ಡಿ ಜೋಡಿ ಎರಡನೇ ಸುತ್ತಿನಲ್ಲಿ ಮುಗ್ಗರಿಸಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.