ಪ್ಯಾರಿಸ್: ಟೋಕಿಯೊದಲ್ಲಿ ಮೂರು ವರ್ಷಗಳ ಹಿಂದೆ ಕಂಚಿನ ಪದಕ ಜಯಿಸಿದ್ದ ಹರ್ವಿಂದರ್ ಸಿಂಗ್ ಅವರು ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಬಿಲ್ಗಾರ ಎನಿಸಿಕೊಂಡರು.

ಬುಧವಾರ ರಾತ್ರಿ ನಡೆದ ಪುರುಷರ ರಿಕರ್ವ್ ಓಪನ್ ವಿಭಾಗದ ಫೈನಲ್‌ನಲ್ಲಿ 33 ವರ್ಷ ವಯಸ್ಸಿನ ಹರ್ವಿಂದರ್ 6–0ಯಿಂದ ಪೋಲೆಂಡ್‌ನ ಲುಕಾಸ್ಜ್ ಸಿಸ್ಜೆಕ್ ಅವರನ್ನು ಸೋಲಿಸಿ ಐತಿಹಾಸಿಕ ಚಿನ್ನ ಗೆದ್ದರು.

ಈ ಕೂಟದಲ್ಲಿ ಒಟ್ಟಾರೆ ಪದಕಗಳ ಸಂಖ್ಯೆ 22ಕ್ಕೆ ಹೆಚ್ಚಿತು. ಇದರಲ್ಲಿ ನಾಲ್ಕು ಚಿನ್ನಗಳಿವೆ. ಪದಕ ಪಟ್ಟಿಯಲ್ಲಿ ಭಾರತ 15ನೇ ಸ್ಥಾನಕ್ಕೆ ಏರಿದೆ.

ಪ್ಯಾರಿಸ್‌ನಲ್ಲಿ ಆರ್ಚರಿ ಸ್ಪರ್ಧೆಯಲ್ಲಿ ಭಾರತಕ್ಕೆ ದಕ್ಕಿದ ಎರಡನೇ ಪದಕ ಇದಾಗಿದೆ. ಸೋಮವಾರ ರಾಕೇಶ್ ಕುಮಾರ್ ಮತ್ತು ಶೀತಲ್ ದೇವಿ ಅವರನ್ನು ಒಳಗೊಂಡ ಮಿಶ್ರ ತಂಡ ಕಾಂಪೌಂಡ್ ಓಪನ್ ವಿಭಾಗದಲ್ಲಿ ಕಂಚು ಗೆದ್ದಿದ್ದರು.

ಹರ್ವಿಂದರ್ ಸತತ ನಾಲ್ಕು ಸುತ್ತುಗಳಲ್ಲಿ ಗೆಲುವು ಸಾಧಿಸಿ ಪ್ಯಾರಾಲಿಂಪಿಕ್ಸ್ ಫೈನಲ್‌ಗೆ ಪ್ರವೇಶಿಸಿದ ಭಾರತದ ಮೊದಲ ಆರ್ಚರಿಪಟು ಎಂಬ ಹಿರಿಮೆಗೂ ಪಾತ್ರರಾದರು. ಸೆಮಿ ಫೈನಲ್‌ನಲ್ಲಿ ಅವರು ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡು 7-3 ಅಂತರದಲ್ಲಿ ಇರಾನ್‌ನ ಮೊಹಮ್ಮದ್ ರೆಜಾ ಅರಬ್ ಅಮೆರಿ ವಿರುದ್ಧ ಗೆಲುವು ಸಾಧಿಸಿದ್ದರು.

ಹರಿಯಾಣದ ಅಜಿತ್ ನಗರದ ಹರ್ವಿಂದರ್ ರೈತರ ಕುಟುಂಬದಿಂದ ಬಂದವರು. ಒಂದೂವರೆ ವರ್ಷದ ಮಗುವಾಗಿದ್ದಾಗ ಡೆಂಗಿಗೆ ತುತ್ತಾಗಿದ್ದ ಅವರಿಗೆ ನೀಡಿದ್ದ ಚುಚ್ಚುಮದ್ದಿನ ಅಡ್ಡಪರಿಣಾಮದಿಂದ ಎರಡೂ ಕಾಲುಗಳು ದುರ್ಬಲಗೊಂಡಿವೆ.

ಕ್ರೀಡಾ ಯಶಸ್ಸಿನ ಜೊತೆಗೆ ಅವರು ಅರ್ಥಶಾಸ್ತ್ರ ವಿಷಯದಲ್ಲಿ ಪಿಎಚ್.ಡಿ ಮಾಡುತ್ತಿದ್ದಾರೆ.

ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತಕ್ಕೆ ಮೊದಲ ಆರ್ಚರಿ ಪದಕವನ್ನೂ ಹರ್ವಿಂದರ್ ಗೆದ್ದು ಇತಿಹಾಸ ನಿರ್ಮಿಸಿದ್ದರು.

ಖಿಲಾರಿಗೆ ಬೆಳ್ಳಿ: ವಿಶ್ವ ಚಾಂಪಿಯನ್ ಸಚಿನ್ ಸರ್ಜೆರಾವ್ ಖಿಲಾರಿ ಅವರು ಪುರುಷರ ಷಾಟ್‌ಪಟ್‌ನಲ್ಲಿ (ಎಫ್46) ಬುಧವಾರ ಏಷ್ಯನ್ ದಾಖಲೆಯೊಡನೆ ಬೆಳ್ಳಿ ಪದಕ ಗೆದ್ದರು. ಪ್ಯಾರಾಲಿಂಪಿಕ್ಸ್ ಟ್ರ್ಯಾಕ್ ಅಂಡ್ ಫೀಲ್ಡ್‌ನಲ್ಲಿ ಭಾರತ ಅಭೂತಪೂರ್ವ ಸಾಧನೆ ದಾಖಲಿಸಿತು.

ಸಚಿನ್ ಖಿಲಾರಿ ಗಳಿಸಿದ ಬೆಳ್ಳಿ ಪ್ಯಾರಿಸ್ ಪ್ಯಾರಾ ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ 11ನೇ ಪದಕ ಎನಿಸಿತು. ಮೂರು ವರ್ಷಗಳ ಹಿಂದೆ ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಅಥ್ಲೆಟಿಕ್ಸ್‌ನಲ್ಲಿ ಎಂಟು ಪದಕಗಳು ಬಂದಿದ್ದವು. ಸಚಿನ್ ಅವರು ಎರಡನೇ ಪ್ರಯತ್ನದಲ್ಲಿ 16.32 ಮೀ.ಗಳ ಶ್ರೇಷ್ಠ ಥ್ರೊ ದಾಖಲಿಸಿದರು. ಆ ಮೂಲಕ ಮೇ ತಿಂಗಳಲ್ಲಿ ಜಪಾನ್‌ನಲ್ಲಿ ನಡೆದಿದ್ದ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ನಲ್ಲಿ ತಾವೇ ಸ್ಥಾಪಿಸಿದ್ದ 16.30 ಮೀ.ಗಳ ದಾಖಲೆಯನ್ನು ಸುಧಾರಿಸಿದರು.

ಕೆನಡಾದ ಗ್ರೆಗ್ ಸ್ಟಿವರ್ಟ್ ಅವರು 16.38 ಮೀ. ದೂರಕ್ಕೆ ಎಸೆದು ಚಿನ್ನ ಗೆದ್ದರು. ಕ್ರೊವೇಷ್ಯಾದ ಲುಕಾ ಬಕೊವಿಕ್ 16.27 ಮೀ. ಥ್ರೊದೊಡನೆ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಎಫ್46 ಕ್ಲಾಸಿಫಿಕೇಷನ್‌ನಲ್ಲಿ ಅಥ್ಲೀಟುಗಳು ತೋಳಿಗೆ ಸಂಬಂಧಿಸಿದ (ಸ್ನಾಯು ದೌರ್ಬಲ್ಯ, ಚಲನೆ ಯಲ್ಲಿ ತೊಂದರೆ) ವೈಕಲ್ಯಗಳನ್ನು ಹೊಂದಿರುತ್ತಾರೆ. ಅವರು ನಿಂತುಕೊಂಡು ಸ್ಪರ್ಧಿಸುತ್ತಾರೆ.

ಫೈನಲ್ ಸುತ್ತಿನಲ್ಲಿದ್ದ ಭಾರತದ ಮೊಹಮ್ಮದ್ ಯಾಸಿರ್ (14.21 ಮೀ.) ಮತ್ತು ರೋಹಿತ್ ಕುಮಾರ್ (14.10 ಮೀ.) ಕ್ರಮವಾಗಿ ಎಂಟು ಮತ್ತು ಒಂಬತ್ತನೇ ಸ್ಥಾನ ಗಳಿಸಿದರು.

ವಿಶ್ವದಾಖಲೆ (16.80 ಮೀ.) ವೀರ, ಅಮೆರಿಕದ ಜೊಶುವಾ ಸಿನ್ನಾಮೊ ಇಲ್ಲಿ 15.66 ಮೀ. ಥ್ರೊದೊಡನೆ ನಾಲ್ಕನೇ ಸ್ಥಾನಕ್ಕೆ ಸರಿದರು.

ಕಳೆದ ವರ್ಷ ಹಾಂಗ್‌ಝೌ ಪ್ಯಾರಾ ಏಷ್ಯನ್ ಕ್ರೀಡೆಗಳಲ್ಲಿ ಚಿನ್ನ ಗೆದ್ದಿದ್ದ ಮೆಕ್ಯಾನಿಕಲ್ ಎಂಜಿನಿಯರಿಂಗ್ ಪದವೀಧರ ಖಿಲಾರಿ ಅವರ ಎಡಗೈ ಊನಗೊಂಡಿದೆ. ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕರಗನಿ ಗ್ರಾಮದ ಅವರು ವಿದ್ಯಾರ್ಥಿಯಾಗಿದ್ದಾಗ ಅಪಘಾತಕ್ಕೆ ಒಳಗಾಗಿದ್ದರು. ಇದರಿಂದ ಚರ್ಮ ಕೊಳೆತು ಸಮಸ್ಯೆ ಎದುರಿಸಿದರು. ಹಲವು ಶಸ್ತ್ರಚಿಕಿತ್ಸೆಗಳ ಹೊರತಾಗಿಯೂ ಅವರ ತೋಳು ಮೊದಲಿನಂತೆ ಆಗಲಿಲ್ಲ.

ಸಣ್ಣ ವಯಸ್ಸಿನಲ್ಲೇ ತಾಯಿಯನ್ನು ಅವರು ಕಳೆದುಕೊಂಡಿದ್ದರು. ಆದರೆ ಈ ಎಲ್ಲ ಬೇಗುದಿಗಳ ನಡುವೆ ವಿದ್ಯಾರ್ಥಿ ದೆಸೆಯಲ್ಲೇ ಜಾವೆಲಿನ್ ಥ್ರೊದಲ್ಲಿ ಆಸಕ್ತಿ ಬೆಳೆಸಿಕೊಂಡರು. ಆದರೆ ಭುಜದ ನೋವಿನ ಕಾರಣ ಅವರು ಶಾಟ್‌ಪಟ್‌ನಲ್ಲಿ ತೊಡಗಿಕೊಂಡರು. 2015ರಲ್ಲಿ ಪ್ಯಾರಾ ಸ್ಪೋರ್ಟ್ಸ್‌ನಲ್ಲಿ ಭಾಗವಹಿಸತೊಡಗಿದರು.

ಶೂಟಿಂಗ್: ನಿಹಾಲ್, ರುದ್ರಾಂಶ್‌ಗೆ ನಿರಾಸೆ

ಶಾತೊಹು (ಪಿಟಿಐ): ಭಾರತದ ಶೂಟರ್‌ಗಳಾದ ನಿಹಾಲ್ ಸಿಂಗ್ ಮತ್ತು ರುದ್ರಾಂಶ್ ಖಂಡೇಲವಾಲ್ ಅವರು ಪ್ಯಾರಿಸ್ ಪ್ಯಾರಾಲಿಂಪಿಕ್ಸ್‌ನ 50 ಮೀ. ಪಿಸ್ತೂಲ್ (ಎಸ್‌ಎಚ್1) ವಿಭಾಗದಲ್ಲಿ ಫೈನಲ್ ತಲುಪಲು ವಿಫಲರಾದರು.

2023ರ ವಿಶ್ವ ಚಾಂಪಿಯನ್‌ಷಿಪ್ ಕಂಚಿನ ಪದಕ ವಿಜೇತ ನಿಹಾಲ್ ಅವರು ಕ್ವಾಲಿಫಿಕೇಷನ್ ಸುತ್ತಿನಲ್ಲಿ 19ನೇ ಸ್ಥಾನ ಪಡೆದರು. ಅವರು ಒಟ್ಟು 522 ಪಾಯಿಂಟ್ಸ್ ಕಲೆಹಾಕಿದರು.

ಮೊದಲ ಬಾರಿ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾಗವಹಿಸುತ್ತಿರುವ 17 ವರ್ಷ ವಯಸ್ಸಿನ ರುದ್ರಾಂಶ್, 517 ಪಾಯಿಂಟ್ಸ್ ಗಳಿಸಿ 22ನೇ ಸ್ಥಾನಕ್ಕೆ ಸರಿದರು. ಎಂಟನೇ ವರ್ಷ ವಯಸ್ಸಿನಲ್ಲಿ ಅವರು ಆಕಸ್ಮಿಕ ಅವಘಡದಲ್ಲಿ ಎಡಗಾಲನ್ನು ಕಳೆದುಕೊಂಡಿದ್ದರು.

ಕೊರಿಯಾದ ಜೊ ಜಿಯೊಂಗ್ಡು 553 ಸ್ಕೋರ್‌ನೊಡನೆ ಕ್ವಾಲಿಫಿಕೇಷನ್ ಹಂತದಲ್ಲಿ ದಾಖಲೆ ಸ್ಥಾಪಿಸಿದರು.

ಹಾಲಿ ಪ್ಯಾರಾಲಿಂಪಿಕ್ಸ್‌ನಲ್ಲಿ ಭಾರತ ಶೂಟಿಂಗ್‌ನಲ್ಲಿ ನಾಲ್ಕು ಪದಕಗಳನ್ನು (1 ಚಿನ್ನ, 1 ಬೆಳ್ಳಿ, 2 ಕಂಚು) ಗಳಿಸಿದೆ.

ಮಹಿಳಾ ಟಿಟಿ– ಭಾರತದ ಸವಾಲು ಅಂತ್ಯ: ಭಾರತದ ಬಾವಿನಾಎನ್ ಪಟೇಲ್ ಅವರು 3–1 ರಿಂದ ಚೀನಾದ ಯಿಂಗ್ ಝೌ ಅವರಿಗೆ ಮಣಿಯುವ ಮೂಲಕ ಪ್ಯಾರಾಲಿಂಪಿಕ್ಸ್ ಟೇಬಲ್ ಟೆನಿಸ್ (ಕ್ಲಾಸ್ ಫೋರ್) ಮಹಿಳೆ ಯರ ಸಿಂಗಲ್ಸ್ ಕ್ವಾರ್ಟರ್‌ಫೈನಲ್ ಹಂತದಲ್ಲಿ ಭಾರತದ ಸವಾಲು ಅಂತ್ಯಗೊಂಡಿತು. ಟೋಕಿಯೊ ಕ್ರೀಡೆಗಳಲ್ಲಿ ಬೆಳ್ಳಿ ಗೆದ್ದಿದ್ದ ಅವರು ಇಲ್ಲಿ 12–14, 9–11, 11–8, 6–11 ರಿಂದ ಚೀನಾ ಆಟಗಾರ್ತಿಗೆ ಮಣಿದರು.

ಅಥ್ಲೆಟಿಕ್ಸ್‌ನಲ್ಲಿ ಭಾರತಕ್ಕೆ ಮತ್ತೆ ನಾಲ್ಕು ಪದಕ

ಮಂಗಳವಾರ ತಡರಾತ್ರಿ ಭಾರತ ಅಥ್ಲೆಟಿಕ್ಸ್‌ನಲ್ಲಿ ಎರಡು ಬೆಳ್ಳಿ, ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡಿತ್ತು.

ಪುರುಷರ ಟಿ63 ಹೈಜಂಪ್‌ನಲ್ಲಿ ಶರದ್ ಕುಮಾರ್ 1.88 ಮೀ. ಜಿಗಿದು ಬೆಳ್ಳಿ ಪದಕ ಗೆದ್ದುಕೊಂಡರು. ಇದೇ ವಿಭಾಗದಲ್ಲಿ ಮರಿಯಪ್ಪನ್ ತಂಗವೇಲು 1.85 ಮೀ. ಜಿಗಿದು ಕಂಚಿನ ಪದಕಕ್ಕೆ ತೃಪ್ತಿಪಟ್ಟುಕೊಳ್ಳ ಬೇಕಾಯಿತು. ಕಣದಲ್ಲಿದ್ದ ಭಾರತದ ಮೂರನೇ ಸ್ಪರ್ಧಿ ರಿಂಕು ಹೂಡಾ (61.58 ಮೀ.) ಐದನೇ ಸ್ಥಾನಕ್ಕೆ ಸರಿದರು.

ಅಮೆರಿಕದ ಕ್ರೀಡಾತಾರೆ ಎಜ್ರಾ ಫ್ರೆಚ್ 1.94 ಮೀ. ಎತ್ತರಕ್ಕೆ ಜಿಗಿದು ಚಿನ್ನವನ್ನು ಗೆದ್ದುಕೊಂಡರು. ಎಜ್ರಾ ಈ ಕೂಟದಲ್ಲಿ ಎರಡನೇ ಚಿನ್ನ ಗೆದ್ದಿದ್ದು ವಿಶೇಷ. ಅವರು 100 ಮೀ. ಓಟದಲ್ಲೂ ಫೊಟೊಫಿನಿಷ್ ಅಂತರದಲ್ಲಿ (0.02 ಸೆ.) ಡೆನ್ಮಾರ್ಕ್‌ನ ಡೇನಿಯಲ್ ವ್ಯಾಗ್ನರ್ ಅವರನ್ನು ಹಿಂದೆಹಾಕಿ ಚಿನ್ನ ಗೆದ್ದಿದ್ದರು.

ಪುರುಷರ ಎಫ್ 46 ಜಾವೆಲಿನ್ ಥ್ರೊ ಫೈನಲ್‌ನಲ್ಲಿ ಅಜೀತ್ ಸಿಂಗ್ 65.62 ಮೀ. ದೂರಕ್ಕೆಸೆದು ಬೆಳ್ಳಿ ಗೆದ್ದರೆ, ಈಟಿಯನ್ನು 64.96 ಮೀ. ದೂರಕ್ಕೆ ಥ್ರೊ ಮಾಡಿದ ಸುಂದರ್ ಸಿಂಗ್ ಗುರ್ಜರ್ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಕ್ಯೂಬಾದ ಗಿಲೆರ್ಮೊ ವೆರೊನಾ ಗೊನ್ವಾಲ್ವೆಝ್ ಅವರು ಚಿನ್ನ ಗೆದ್ದರು. ಎರಡನೇ ಸುತ್ತಿನಲ್ಲಿ ಅವರು 66.14 ಮೀ. ದೂರ ಎಸೆದಾಗ ಮೊದಲ ಸ್ಥಾನ ಒಲಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.