ಚೆನ್ನೈ: ನಾಯಕ ಸುನಿಲ್ ಕುಮಾರ್ ಮತ್ತು ರೆಜಾ ಮೀರ್ಬಗೇರಿ ಅವರ ಅಮೋಘ ಆಟದ ನೆರವಿನಿಂದ ಜೈಪುರ್ ಪಿಂಕ್ ಪ್ಯಾಂಥರ್ಸ್ ತಂಡವು ಪ್ರೊ ಕಬಡ್ಡಿ ಲೀಗ್ ಟೂರ್ನಿಯಲ್ಲಿ ತಮಿಳ್ ತಲೈವಾಸ್ ಎದುರು ರೋಚಕ ಜಯ ಸಾಧಿಸಿತು.

ಶನಿವಾರ ನಡೆದ ಪಂದ್ಯದಲ್ಲಿ ಉಭಯ ಬಣಗಳು ಹೆಚ್ಚು ಅಂಕಗಳನ್ನು ಗಳಿಸಲಿಲ್ಲ. ಆದರೆ ಪ್ರತಿಯೊಂದು ಹಂತದಲ್ಲಿಯೂ ತುರುಸಿನ ಪೈಪೋಟಿ ನಡೆಸಿದವು. ಇದರಿಂದಾಗಿ ಜೈಪುರ್ ತಂಡವು 25–24ರಿಂದ ಆತಿಥೇಯ ತಲೈವಾಸ್ ವಿರುದ್ಧ ಜಯಿಸಿತು.

ಜೈಪುರ್ ತಂಡದ ಸುನಿಲ್ ಮತ್ತು ರೇಜಾ ಸೇರಿ ಟ್ಯಾಕಲ್ನಲ್ಲಿ ಒಂಬತ್ತು ಅಂಕ ಗಳಿಸಿದರು. ಅಲ್ಲದೇ ಮೂರು ಸೂಪರ್ ಟ್ಯಾಕಲ್ಗೂ ಕಾರಣರಾದರು.

ತಂಡದ ಅರ್ಜುನ್ ದೇಶ್ವಾಲ್ ರೇಡಿಂಗ್ನಲ್ಲಿ ಏಳು ಅಂಕ ಗಳಿಸಿದರು.

ಮೊದಲಾರ್ಧದಲ್ಲಿ ತಲೈವಾಸ್ ತಂಡವು 16–10ರ ಮುನ್ನಡೆ ಸಾಧಿ
ಸಿತ್ತು. ತಲೈವಾಸ್ ತಂಡದ ಹಿಮಾಂಶು ನರ್ವಾಲ್ ಎಂಟು ಅಂಕ ಗಳಿಸಿದರು. ಎಂ. ಅಭಿಷೇಕ್ ಕೂಡ (4 ಅಂಕ) ಉತ್ತಮ ಟ್ಯಾಕ್ಲಿಂಗ್ ಪ್ರದರ್ಶಿಸಿದರು.

ಆದರೆ ವಿರಾಮದ ನಂತರದ ಆಟದಲ್ಲಿ ಜೈಪುರ್ ತಂಡವು ಮೇಲುಗೈ ಸಾಧಿಸಿತು. ತಂಡವು ಒಟ್ಟು ಏಳು ಪಂದ್ಯಗಳನ್ನು ಆಡಿದ್ದು, ಒಟ್ಟು ನಾಲ್ಕು ಜಯ ಸಾಧಿಸಿದೆ. 25 ಅಂಕಗಳನ್ನು ಗಳಿಸಿದೆ. ಆದರೆ ತಲೈವಾಸ್ ತಂಡವು ಆರು ಪಂದ್ಯಗಳನ್ನು ಆಡಿ ಎರಡರಲ್ಲಿ ಮಾತ್ರ ಜಯಿಸಿದೆ.

ರಾತ್ರಿ ನಡೆದ ಇನ್ನೊಂದು ಪಂದ್ಯದಲ್ಲಿ ಗುಜರಾತ್ ಟೈಟನ್ಸ್ ತಂಡವು 38–30ರಿಂದ ಯು.ಪಿ. ಯೋಧಾ ವಿರುದ್ಧ ಗೆದ್ದಿತು. ಗುಜರಾತ್ ತಂಡದ ರಾಕೇಶ್ 14 ಅಂಕಗಳನ್ನು ರೇಡಿಂಗ್ನಲ್ಲಿ ಗಳಿಸಿಕೊಟ್ಟರು. ಯೋಧಾಸ್ ತಂಡದ ಸುರೇಂದರ್ ಗಿಲ್ ಅವರು 13 ಅಂಕ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.