ಸಿಲ್ವರ್ಸ್ಟೋನ್: ಭಾರತದ ಜೆಹಾನ್ ದಾರುವಾಲಾ ಅವರು ಇಲ್ಲಿ ನಡೆದ ಎಫ್ಐಎ ಫಾರ್ಮುಲಾ 2 ಚಾಂಪಿಯನ್ಷಿಪ್ನ ಸ್ಪ್ರಿಂಟ್ ರೇಸ್ ವಿಭಾಗದಲ್ಲಿ ಭಾನುವಾರ ನಾಲ್ಕನೇ ಸ್ಥಾನ ಗಳಿಸಿದರು. ಫಾರ್ಮುಲಾ 2 ಚಾಂಪಿಯನ್ಷಿಪ್ನಲ್ಲಿ ಅವರ ವೈಯಕ್ತಿಕ ಶ್ರೇಷ್ಠ ಸಾಧನೆ ಇದು.

ಚಾಂಪಿಯನ್ಷಿಪ್ನ ಈ ಹಿಂದಿನ ರೇಸ್ಗಳಲ್ಲಿ ನಿಧಾನಗತಿ ಆರಂಭ ಪಡೆದಿದ್ದ ಕಾರಣ ಜೆಹಾನ್ ಅವರಿಗೆ ಈ ಫಲಿತಾಂಶ ಅಗತ್ಯವಿತ್ತು. ಶನಿವಾರದ ರೇಸ್ಅನ್ನು ಕೂಡ ಅವರು 12ನೇ ಸ್ಥಾನದೊಂದಿಗೆ ಕೊನೆಗೊಳಿಸಿದ್ದರು.

ಕಾರ್ಲಿನ್ ತಂಡವನ್ನು ಪ್ರತಿನಿಧಿಸಿದ್ದ ಜೆಹಾನ್ ಅವರು ಭಾನುವಾರ, ಫೀಚರ್ ರೇಸ್ನಲ್ಲಿ ವಿಜೇತರಾಗಿದ್ದ ನಿಖಿತ ಮೇಜೆಪಿನ್ ಅವರನ್ನು ಹಿಂದಿಕ್ಕಿದರು. ಎಂಟು ಪಾಯಿಂಟ್ಸ್ ಕಲೆಹಾಕಿದ ಅವರು ತಮ್ಮ ಒಟ್ಟು ಪಾಯಿಂಟ್ಸ್ ಗಳಿಕೆಯನ್ನು 18ಕ್ಕೆ ಹೆಚ್ಚಿಸಿಕೊಂಡರು.

ಬ್ರಿಟನ್ನ ಡ್ಯಾನ್ ಟಿಕ್ಟಮ್ ಅವರು ಸ್ಪ್ರಿಂಟ್ ರೇಸ್ನಲ್ಲಿ ಮೊದಲ ಸ್ಥಾನ ತಮ್ಮದಾಗಿಸಿಕೊಂಡರು. ಕ್ರಿಸ್ಟಿಯನ್ ಲುಂಡ್ಗಾರ್ಡ್ ಎರಡನೇ ಹಾಗೂ ಲೂಯಿಸ್ ಡೆಲೆಟ್ರಾಜ್ ಮೂರನೇ ಸ್ಥಾನ ಗಳಿಸಿದರು.

ಮುಂಬೈನ 21 ವರ್ಷದ ಜೆಹಾನ್, ನ್ಯೂಜಿಲೆಂಡ್ ಗ್ಯಾನ್ಪ್ರಿ ಗೆದ್ದ ಮೊದಲ ಭಾರತೀಯ ಎನಿಸಿದ್ದರು. 2017ರಲ್ಲಿ ಅವರು ಇದನ್ನು ಸಾಧಿಸಿದ್ದರು.

ನಾರಾಯಣ್ ಕಾರ್ತಿಕೇಯನ್ ಮತ್ತು ಕರುಣ್ ಚಾಂದೋಕ್ ಮಾತ್ರ ಫಾರ್ಮುಲಾ ವನ್ನಲ್ಲಿ ಭಾಗವಹಿಸಿರುವ ಭಾರತೀಯರೆನಿಸಿದ್ದಾರೆ. ಈಗ ಜೆಹಾನ್ ಆ ಸಾಧನೆಯ ಸನಿಹದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.