ಜೊಹೋರ್, ಮಲೇಷ್ಯಾ: ಭಾರತದ ಅಭಯ್ ಸಿಂಗ್ ಅವರು ಇಲ್ಲಿ ನಡೆಯುತ್ತಿರುವ ಏಷ್ಯನ್ ಸ್ಕ್ವ್ಯಾಷ್ ಚಾಂಪಿಯನ್ಷಿಪ್ನಲ್ಲಿ ಭಾನುವಾರ ಪುರುಷರ ಡಬಲ್ಸ್ ಹಾಗೂ ಮಿಶ್ರ ಡಬಲ್ಸ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.

ಪುರುಷರ ಡಬಲ್ಸ್ನಲ್ಲಿ ಅಭಯ್ ಸಿಂಗ್ ಮತ್ತು ವೇಲವನ್ ಸೆಂಥಿಲ್ಕುಮಾರ್ ಜೋಡಿ 11-4, 11-5 ರಿಂದ 2ನೇ ಶ್ರೇಯಾಂಕದ ಮಲೇಷ್ಯಾದ ಓಂಗ್ ಸಾಯಿ ಹಂಗ್ ಮತ್ತು ಸೈಫಿಕ್ ಕಮಾಲ್ ಜೋಡಿ ವಿರುದ್ಧ ಜಯ ಸಾಧಿಸಿತು. ಅಭಯ್ ಸಿಂಗ್ ಏಷ್ಯನ್ ಗೇಮ್ಸ್ ಟೀಮ್ ಚಾಂಪಿಯನ್ಷಿಪ್ನಲ್ಲಿ ಚಿನ್ನದ ಪದಕ ಗೆದ್ದಿದ್ದಾರೆ.

ಮಿಶ್ರ ಡಬಲ್ಸ್ ಫೈನಲ್ನಲ್ಲಿ ಅಭಯ್ ಸಿಂಗ್ ಮತ್ತು ಅನುಭವಿ ಆಟಗಾರ್ತಿ ಜೋಶ್ನಾ ಚಿಣ್ಣಪ್ಪ ಜೋಡಿ 11-8, 10-11, 11-5ರಿಂದ ಹಾಂಗ್ಕಾಂಗ್ನ ತೊಂಗ್ ಶಿಜ್ ವಿಂಗ್ ಮತ್ತು ತಾಂಗ್ ಮಿಂಗ್ ಹಾಂಗ್ ಜೋಡಿಯನ್ನು ಪರಾಭವಗೊಳಿಸಿತು.

‘ಈ ವಾರ ಅಭಯ್ ಜೊತೆಗೂಡಿ ನೀಡಿದ ಪ್ರದರ್ಶನ ಸಂತೋಷ ತಂದಿದೆ. ನಾವು ಆತ್ಮವಿಶ್ವಾಸದಿಂದ ಇದ್ದೆವು. ಟೂರ್ನಿಯಲ್ಲಿ ಪಂದ್ಯದಿಂದ ಪಂದ್ಯಕ್ಕೆ ಉತ್ತಮಗೊಂಡಿದ್ದೇವೆ. ದೀರ್ಘಕಾಲದ ನಂತರ ರಾಷ್ಟ್ರೀಯ ಡಬಲ್ಸ್ ಚಾಂಪಿಯನ್ಷಿಪ್ಗೆ ಮರಳಲು ಎಸ್ಆರ್ಎಫ್ಐ ಮತ್ತು ಎಚ್ಸಿಎಲ್ ಅವಕಾಶ ಕಲ್ಪಿಸಿವೆ’ ಎಂದು ಸೆಂಥಿಲ್ಕುಮಾರ್ ಹೇಳಿದ್ದಾರೆ.

‘ಮಂಡಿ ಶಸ್ತ್ರಚಿಕಿತ್ಸೆಯಿಂದಾಗಿ ಕಳೆದ ಐದು ತಿಂಗಳಿಂದ ಆಟದಿಂದ ದೂರವಿದ್ದ ನನಗೆ ಭಾರತದ ಪರವಾಗಿ ಮತ್ತೆ ಆಡುವುದು ಅತ್ಯಂತ ಪ್ರಮುಖವಾಗಿದೆ’ ಎಂದು ಜೋಶ್ನಾ ಚಿಣ್ಣಪ್ಪ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.