ರಿಯೊ ಡಿ ಜನೈರೊ: ಬ್ರೆಜಿಲ್ನಲ್ಲಿ ನಡೆಯುತ್ತಿರುವ ಐಎಸ್ಎಸ್ಎಫ್ ಶೂಟಿಂಗ್ ವಿಶ್ವಕಪ್ನಲ್ಲಿ ಭಾರತದ ಇಳವೆನ್ನಿಲಾ ವಾಳರಿವನ್ ಚಿನ್ನ ಗೆದ್ದಿದ್ದಾರೆ.

ಮಹಿಳೆಯರ 10 ಮೀಟರ್ ಏರ್ ರೈಫಲ್ ವಿಭಾಗದಲ್ಲಿ ವಾಳರಿವನ್ ಒಟ್ಟು 252.2 ಪಾಯಿಂಟ್ಸ್ಗಳೊಂದಿಗೆ ಚಿನ್ನ ಜಯಿಸಿದ್ದಾರೆ.

ಪ್ರಾನ್ಸ್ನ 20 ವರ್ಷದ ಒಷಿಯಾನ್ ಮುಲ್ಲರ್ ಬೆಳ್ಳಿ ಹಾಗೂ ಚೀನಾದ ಜಾಂಗ್ ಜಿಯಲ್ ಕಂಚಿನ ಪದಕ ಜಯಿಸಿದರು.

ಇಳವೆನ್ನಿಲಾ 630.5 ಅಂಕಗಳೊಂದಿಗೆ ಎಂಟನೇಯವರಾಗಿ ಫೈನಲ್ ಸುತ್ತು ಪ್ರವೇಶಿಸಿದರು. ಆದರೆ ಪ್ರಶಸ್ತಿ ಸುತ್ತಿನಲ್ಲಿ 24 ಪ್ರಯತ್ನಗಳಲ್ಲಿ ಪ್ರತಿ ಸಲವೂ 10.1ಕ್ಕೂ ಹೆಚ್ಚು ಪಾಯಿಂಟ್ಸ್ ಗಿಟ್ಟಿಸುವ ಮೂಲಕ ಅಮೋಘ ಸಾಧನೆ ಮಾಡಿದ್ದಾರೆ.

ಶೂಟಿಂಗ್ ವಿಶ್ವಕಪ್ನಲ್ಲಿ ಭಾರತದ 16 ಸ್ಪರ್ಧಿಗಳು ಭಾಗವಹಿಸುತ್ತಿದ್ದಾರೆ. ಸದ್ಯ ಭಾರತ ಪದಕಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.