ಬೆಂಗಳೂರು: ಭಾರತ ಬ್ಯಾಸ್ಕೆಟ್ಬಾಲ್ ತಂಡದವರು ಫಿಬಾ ವಿಶ್ವಕಪ್ ಏಷ್ಯನ್ ಅರ್ಹತಾ ಟೂರ್ನಿಯ ಕೊನೆಯ ಪಂದ್ಯದಲ್ಲೂ ಸೋಲು ಅನುಭವಿಸಿದರು.

ಕಂಠೀರವ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ‘ಇ’ ಗುಂಪಿನ ಪಂದ್ಯದಲ್ಲಿ ಭಾರತ 60–71ರಿಂದ ಸೌದಿ ಅರೇಬಿಯಾ ಎದುರು ಮಣಿಯಿತು. ಕ್ವಾಲಿಫೈಯರ್ಸ್ನಲ್ಲಿ ಆಡಿದ ಎಲ್ಲ 10 ಪಂದ್ಯಗಳಲ್ಲೂ ಭಾರತ ನಿರಾಸೆ ಅನುಭವಿಸಿ ಕೊನೆಯ ಸ್ಥಾನ ಗಳಿಸಿತು.

ಪಂದ್ಯದಲ್ಲಿ ಸೌದಿ ಅರೇಬಿಯಾ ಪರ ಮೊಹಮ್ಮದ್ ಅಲ್ಸುವಾಲೆಮ್ 27 ಪಾಯಿಂಟ್ಸ್ ಗಳಿಸಿ ಮಿಂಚಿದರು. ಮಾತ್ನಾ ಅಲ್ಮರ್ವಾಣಿ (17 ಪಾಯಿಂಟ್ಸ್) ಗೆಲುವಿಗೆ ಕೊಡುಗೆ ನೀಡಿದರು.

ಭಾರತ ತಂಡಕ್ಕಾಗಿ ಅರವಿಂದ್ ಎಂ. ಕೃಷ್ಣನ್ (24 ಪಾ.) ಮತ್ತು ಪ್ರಶಾಂತ್ ರಾವತ್ (10 ಪಾ.) ಆಟ ವ್ಯರ್ಥವಾಯಿತು.

ಈ ವರ್ಷ ವಿಶ್ವಕಪ್ ಟೂರ್ನಿಯು ಆಗಸ್ಟ್ 25ರಿಂದ ಸೆಪ್ಟೆಂಬರ್ 10ರವರೆಗೆ ಫಿಲಿಪ್ಪೀನ್ಸ್, ಜಪಾನ್ ಮತ್ತು ಇಂಡೊನೇಷ್ಯಾಗಳಲ್ಲಿ ನಡೆಯಲಿದೆ.

ಅರ್ಜೆಂಟೀನಾಗೆ ಅರ್ಹತೆ ಇಲ್ಲ (ಎಎಫ್ಪಿ ವರದಿ): ಬ್ಯಾಸ್ಕೆಟ್ಬಾಲ್ ಕ್ರೀಡೆಯ ಶಕ್ತಿ ಕೇಂದ್ರ ಎನಿಸಿರುವ ಅರ್ಜೆಂಟೀನಾ ತಂಡವು 1982ರ ಬಳಿಕ ಇದೇ ಮೊದಲ ಬಾರಿ ಅರ್ಹತೆ ಗಳಿಸಲು ವಿಫಲವಾಯಿತು. ಭಾನುವಾರ ಸಾವೊ ಪಾಲೊದಲ್ಲಿ ನಡೆದ ಅಮೆರಿಕನ್ ಕ್ವಾಲಿಫೈಯರ್ಸ್ ಪಂದ್ಯದಲ್ಲಿ ಅರ್ಜೆಂಟೀನಾ 75–79ರಿಂದ ಡೊಮಿನಿಕನ್ ರಿಪಬ್ಲಿಕ್ ತಂಡದ ಎದುರು ಸೋತಿತು.

ಕಳೆದ ಬಾರಿಯ ವಿಶ್ವಕಪ್ ಫೈನಲ್ನಲ್ಲಿ ಅರ್ಜೆಂಟೀನಾ ತಂಡವು ಸ್ಪೇನ್ ಎದುರು ಸೋತು ರನ್ನರ್ಸ್ ಅಪ್ ಆಗಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.