ದೋಹಾ: ಏಷ್ಯನ್ ಚಾಂಪಿಯನ್ಸ್ ಕತಾರ್ ತಂಡವು ಫಿಫಾ ವಿಶ್ವಕಪ್ ಅರ್ಹತಾ ಟೂರ್ನಿಯ ‘ಎ’ ಗಂಪಿನ ಪಂದ್ಯದಲ್ಲಿ ಮಂಗಳವಾರ ಭಾರತ ತಂಡದ ವಿರುದ್ಧ 2–1 ಗೋಲುಗಳ ಅಂತರದಲ್ಲಿ ಜಯ ಸಾಧಿಸಿತು. ಈ ಸೋಲಿನೊಂದಿಗೆ ವಿಶ್ವಕಪ್ ಅರ್ಹತಾ ಮೂರನೇ ಸುತ್ತಿನಲ್ಲಿ ಆಡುವ ಭಾರತದ ಕನಸು ಈಡೇರಲಿಲ್ಲ.

ಲಾಲಿಯನ್ಜುವಾಲಾ ಚಾಂಗ್ಟೆ 37ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ಭಾರತ ಮುನ್ನಡೆ ಸಾಧಿಸಿತು. ಆದರೆ, 73ನೇ ನಿಮಿಷದಲ್ಲಿ ಕತಾರ್ನ ಯೂಸುಫ್ ಐಮೆನ್ ಗೋಲು ಗಳಿಸಿದರು. ಇದರೊಂದಿಗೆ ಸಮಬಲ ಸಾಧಿಸಿತು. 85ನೇ ನಿಮಿಷದಲ್ಲಿ ಅಹ್ಮದ್ ಅಲ್-ರಾವಿ ಗಳಿಸಿದ ಗೋಲಿನಿಂದ ಕತಾರ್ ಮೇಲುಗೈ ಸಾಧಿಸಿತು.

ಮೊದಲಾರ್ಧದಲ್ಲಿ 1-0 ಗೋಲಿನಿಂದ ಮುನ್ನಡೆ ಸಾಧಿಸಿದ ನಂತರ ಭಾರತ ತಂಡಕ್ಕೆ ಗೆಲ್ಲುವ ವಿಶ್ವಾಸ ಇತ್ತು. ಆದರೆ ದ್ವಿತೀಯಾರ್ಧದಲ್ಲಿ ಐಮೆನ್ ಮತ್ತು ಅಲ್-ರಾವಿ ಅವರ ಗೋಲಿನಿಂದಾಗಿ ಭಾರತದ ಕನಸು ಕೆಲವೇ ನಿಮಿಷಗಳಲ್ಲಿ ಭಗ್ನಗೊಂಡಿತು.

ದಿನದ ಮತ್ತೊಂದು ಪಂದ್ಯದಲ್ಲಿ ಕುವೈತ್ ಮತ್ತು ಅಫ್ಘಾನಿಸ್ತಾನ ತಂಡಗಳ ನಡುವಿನ ಪಂದ್ಯ ಗೋಲಿಲ್ಲದೇ ಡ್ರಾ ಆಗಿದೆ.

ಕತಾರ್ ಮತ್ತು ಕುವೈತ್ ತಂಡಗಳು ಎರಡನೇ ಸುತ್ತಿಗೆ ಪ್ರವೇಶಿಸಿದವು. ಸುನಿಲ್ ಚೆಟ್ರಿ ಅವರಿಲ್ಲದ ಭಾರತ ತಂಡ, ಪ್ರಬಲ ಕತಾರ್ ತಂಡವನ್ನು ಎದುರಿಸಿತು.

ಭಾರತದ ಫುಟ್ಬಾಲ್ ರಂಗದ ತಾರೆ ಸುನಿಲ್ ಚೆಟ್ರಿ ನಿವೃತ್ತಿ ಘೋಷಿಸಿದ್ದಾರೆ.

ಕಳೆದ ವಾರವಷ್ಟೇ ಕುವೈತ್ ವಿರುದ್ಧ ಕೋಲ್ಕತ್ತದಲ್ಲಿ ನಡೆದ ಅರ್ಹತಾ ಪಂದ್ಯದಲ್ಲಿ ಕೊನೆಯ ಬಾರಿ ರಾಷ್ಟ್ರೀಯ ತಂಡದ ಪರ ಆಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.