ಭುವನೇಶ್ವರ: ಹ್ಯಾಟ್ರಿಕ್ ಸೋಲುಗಳಿಂದ ಕಂಗೆಟ್ಟಿರುವ ಭಾರತದ ಮಹಿಳಾ ಹಾಕಿ ತಂಡ ಈಗ ಆ ಸರಣಿಯನ್ನು ಕಡಿದುಹಾಕುವ ತವಕದಲ್ಲಿದ್ದೆ. ಆತಿಥೇಯ ತಂಡ ಶುಕ್ರವಾರ ಇಲ್ಲಿ ನಡೆಯುವ ಎಫ್ಐಎಚ್ ಪ್ರೊ ಲೀಗ್ ಪಂದ್ಯದಲ್ಲಿ ಅಮೆರಿಕ ತಂಡವನ್ನು ಎದುರಿಸಲಿದೆ.

ಪ್ಯಾರಿಸ್ ಒಲಿಂಪಿಕ್ಸ್ಗೆ ಅರ್ಹತೆ ಪಡೆಯಲು ವಿಫಲವಾದ ಸವಿತಾ ಪೂನಿಯಾ ಬಳಗದ ಪ್ರದರ್ಶನ ಇತ್ತೀಚಿನ ದಿನಗಳಲ್ಲಿ ಸಾಧಾರಣ ಮಟ್ಟದಿಂದ ಅಧೋಗತಿಯತ್ತ ಸಾಗಿದೆ.

ಚೀನಾಕ್ಕೆ 1–2 ಗೋಲುಗಳಿಂದ ಮಣಿದಿದ್ದ ಭಾರತ ನಂತರ ಪ್ರಬಲ ನೆದರ್ಲೆಂಡ್ಸ್ ತಂಡದೆದುರು 1–3ರಿಂದ ಸೋಲನುಭವಿಸಿತ್ತು. ಬುಧವಾರ ಬಲಿಷ್ಠ ಆಸ್ಟ್ರೇಲಿಯಾಕ್ಕೆ 0–3 ಗೋಲುಗಳಿಂದ ಶರಣಾಗಿತ್ತು.

‘ನಮಗೆ ಆರಂಭಿಕ ಪಂದ್ಯಗಳು ಪ್ರಬಲ ಸವಾಲನ್ನು ಒಡ್ಡಿದವು. ಆದರೆ ನಮ್ಮದು ಪುಟಿದೇಳಬಲ್ಲ ತಂಡ. ಪ್ರತಿಯೊಂದು ಸೋಲು ನಮಲ್ಲಿ ದೃಢನಿರ್ಧಾರ, ಮರಳಿ ಹೋರಾಡಲು ಶಕ್ತಿ ತುಂಬಿವೆ’ ಎಂದು ನಾಯಕಿ ಸವಿತಾ ಹೇಳಿದರು. ನಮ್ಮ ನೈಜ ಸಾಮರ್ಥ್ಯ ಪ್ರದರ್ಶಿಸಿ, ಮೊದಲ ಗೆಲುವು ದಾಖಲಿಸಲು ಶುಕ್ರವಾರದ ಪಂದ್ಯ ಅವಕಾಶ ಎಂದೂ ಹೇಳಿದರು.

ಅಮೆರಿಕ ತಂಡವೂ ಹಿನ್ನಡೆಯಿಂದಲೇ ಲೀಗ್ ಆರಂಭಿಸಿದೆ. ನೆದರ್ಲೆಂಡ್ಸ್ ಕೈಲಿ 0–7 ಅಂತರದ ಭಾರಿ ಸೋಲು ಅನುಭವಿಸಿದ ನಂತರ, ಆ ತಂಡ 0–3 ಗೋಲುಗಳಿಂದ ಆಸ್ಟ್ರೇಲಿಯಾಕ್ಕೆ ಶರಣಾಗಿತ್ತು. ಚೀನಾ ತಂಡವೂ 3–1 ಗೋಲುಗಳಿಂದ ಅಮೆರಿಕ ಮೇಲೆ ಜಯಗಳಿಸಿದೆ. ಹೀಗಾಗಿ ಆ ತಂಡವೂ ಗೆಲುವಿಗಾಗಿ ತವಕದಿಂದ ಇದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.