ನವದೆಹಲಿ: ಕಡುಬಡತನ ಮತ್ತು ಸಮಾಜದ ಕಟ್ಟುಪಾಡುಗಳನ್ನು ಮೀರಿ ನಿಂತು ಭಾರತದ ಮಹಿಳಾ ಹಾಕಿ ಕ್ರೀಡೆಯ ದಂತಕಥೆಯಾಗಿ ಬೆಳೆದವರು ರಾಣಿ ರಾಂಪಾಲ್.

ಭಾರತ ತಂಡದ ಮಾಜಿ ನಾಯಕಿ ರಾಣಿ ಅವರು ತಮ್ಮ 16 ವರ್ಷಗಳ ಕ್ರೀಡಾ ಜೀವನಕ್ಕೆ ಗುರುವಾರ ನಿವೃತ್ತಿ ಘೋಷಿಸಿದರು. ಕುದುರೆ ಬಂಡಿಯಲ್ಲಿ ಸರಂಜಾಮು ಸಾಗಣೆ ಮಾಡುತ್ತಿದ್ದ ತಂದೆ ದಿನವೊಂದಿಗೆ ₹ 80 ರೂಪಾಯಿ ಮಾತ್ರ ಗಳಿಸುತ್ತಿದ್ದರು.ಹಾಕಿ ಸ್ಟಿಕ್ ಖರೀದಿಸಲೂ ದುಡ್ಡಿಲ್ಲದ ಕುಟುಂಬ ಅದು. ಆದರೆ ಛಲ ಮತ್ತು ಆತ್ಮವಿಶ್ವಾಸದಿಂದ ರಾಣಿ ಅತ್ಯುನ್ನತ ಸಾಧನೆ ಮಾಡಿದರು. 2020ರ ಟೋಕಿಯೊ ಒಲಿಂಪಿಕ್ ಕೂಟದಲ್ಲಿ ಆಡಿದ್ದ ಭಾರತ ಮಹಿಳಾ ತಂಡದ ನಾಯಕಿಯಾಗಿದ್ದರು. ತಂಡವು ಅಲ್ಪ ಅಂತರದಲ್ಲಿ ಕಂಚಿನ ಪದಕ ತಪ್ಪಿಸಿಕೊಂಡು ನಾಲ್ಕನೇ ಸ್ಥಾನ ಪಡೆದಿತ್ತು.

‘ಇದೊಂದು ಅಪೂರ್ವವಾದ ಪಯಣವಾಗಿದೆ. ಭಾರತ ತಂಡವನ್ನು ಇಷ್ಟು ದೀರ್ಘ ಸಮಯದವರೆಗೆ ಪ್ರತಿನಿಧಿಸುವ ಅವಕಾಶ ಪಡೆಯುತ್ತೇನೆ ಎಂದುಕೊಂಡಿರಲಿಲ್ಲ. ಬಾಲ್ಯದಲ್ಲಿ ಬಹಳ ಬಡತನ ಕಂಡಿದ್ದೇನೆ. ಆದರೆ ಭಾರತ ತಂಡವನ್ನು ಪ್ರತಿನಿಧಿಸುವ ಕನಸು ಮಾತ್ರ ಬಿಟ್ಟುಕೊಡಲಿಲ್ಲ’ ಎಂದು 29 ವರ್ಷ ವಯಸ್ಸಿನ ರಾಣಿ ಹೇಳಿದ್ದಾರೆ.

ರಾಣಿ ಅವರು ಧರಿಸುತ್ತಿದ್ದ ಪೋಷಾಕಿನ 28 ಸಂಖ್ಯೆಗೆ ನಿವೃತ್ತಿ ಗೌರವ ನೀಡಲು ಹಾಕಿ ಇಂಡಿಯಾ ನಿರ್ಧರಿಸಿದೆ. ಅವರ ಸಾಧನೆಗೆ ಲಭಿಸಿದ ಗೌರವ ಇದಾಗಿದೆ. ಅವರಿಗೆ ₹ 10 ಲಕ್ಷ ಪುರಸ್ಕಾರ ಕೂಡ ನೀಡಲಿದೆ.

ಚುರುಕಾದ ಫಾರ್ವರ್ಡ್ ಆಟಗಾರ್ತಿ ರಾಣಿ 2008ರಲ್ಲಿ ಅಂತರರಾಷ್ಟ್ರೀಯ ಹಾಕಿಗೆ ಪದಾರ್ಪಣೆ ಮಾಡಿದರು. ಆ ವರ್ಷ ನಡೆದ ಒಲಿಂಪಿಕ್ ಕ್ವಾಲಿಫೈಯರ್ ಟೂರ್ನಿಯಲ್ಲಿ ಆಡಿದ ರಾಣಿ ಅವರಿಗೆ 14 ವರ್ಷ ವಯಸ್ಸಾಗಿತ್ತು. ಅಲ್ಲಿಂದ ಇಲ್ಲಿಯವರೆಗೆ ಅವರು ಮಾಡಿದ ಸಾಧನೆಗಳು ಹಲವಾರು.

ಹರಿಯಾಣದ ಶಹಬಾದ್ ಎಂದರೆ ಹಾಕಿ ಕಣಜವೆಂದೇ ಪ್ರಸಿದ್ಧವಾಗಿದೆ. ತಮ್ಮ ತಂದೆ ಗಳಿಸುತ್ತಿದ್ದ ಆದಾಯದಲ್ಲಿ ಕುಟುಂಬದ ಆಹಾರ, ಅಗತ್ಯಗಳನ್ನು ಪೂರೈಸಲು ಪರದಾಡಬೇಕಿತ್ತು. ಆದರೆ ರಾಣಿ ಮೈದಾನದ ಬಳಿ ಮುರಿದು ಬಿದ್ದ ಹಾಕಿ ಸ್ಟಿಕ್ಗಳನ್ನು ಸಂಗ್ರಹಿಸಿಟ್ಟುಕೊಳ್ಳುತ್ತಿದ್ದರು. ಅಂತಹ ಸ್ಟಿಕ್ಗಳಲ್ಲಿಯೇ ಆಟದ ಅಭ್ಯಾಸ ಮಾಡುತ್ತಿದ್ದರು. ಇಷ್ಟೇ ಅಲ್ಲ. ಹೆಣ್ಣುಮಕ್ಕಳಿಗೇಕೆ ಆಟೋಟ ಎಂಬ ಟೀಕೆಗಳೂ ಕೇಳಿಬಂದಿದ್ದವು. ಇವುಗಳಿಗೆ ಕಿವಿಗೊಡದ ರಾಣಿ ತಮ್ಮ 6ನೇ ವಯಸ್ಸಿನಲ್ಲಿಯೇ ಸ್ಥಳೀಯ ತಂಡದಲ್ಲಿ ಆಡತೊಡಗಿದರು. ಆದರೆ ಅವರು ಅಪೌಷ್ಟಿಕತೆಯಿಂದಾಗಿ ಕೃಶವಾಗಿದ್ದರು. ಅದರಿಂದಾಗಿ ಅವರಿಗೆ ಜಿಲ್ಲಾಮಟ್ಟದಲ್ಲಿ ತರಬೇತಿ ನೀಡಲು ಕೋಚ್ ನಿರಾಕರಿಸಿದ್ದರು. ಈ ಅಡೆತಡೆಗಳನ್ನು ದಾಟಿದ ಅವರು ಬೆಳೆದ ಎತ್ತರ ಅಸಾಧಾರಣ.

‘ದೇಶದ ತಂಡದಲ್ಲಿ 15–16 ವರ್ಷ ಆಡಿದ ನಂತರ ಇಂತಹ ನಿರ್ಧಾರ ತೆಗೆದುಕೊಳ್ಳುವುದು ಭಾವನಾತ್ಮಕವಾಗಿ ಬಹಳ ಕಷ್ಟವಾಗುತ್ತದೆ. ಆದರೂ ಇದು ನಿವೃತ್ತಿಗೆ ಸಕಾಲ’ ಎಂದೂ ರಾಣಿ ಹೇಳಿದರು.

ರಾಣಿ ನಾಯಕತ್ವದಲ್ಲಿ ಭಾರತ ತಂಡವು 2018ರ ವಿಶ್ವಕಪ್ ಹಾಕಿ ಟೂರ್ನಿಗೆ ಅರ್ಹತೆ ಗಿಟ್ಟಿಸಿತ್ತು. ಅದೇ ವರ್ಷದ ಏಷ್ಯನ್ ಗೇಮ್ಸ್ನಲ್ಲಿ ಬೆಳ್ಳಿ ಜಯಿಸಿತ್ತು. ತಂಡವು 2019ರ ಎಫ್ಐಎಚ್ ಸಿರೀಸ್ ಫೈನಲ್ಸ್ ಮತ್ತು 2020ರ ಒಲಿಂಪಿಕ್ಸ್ ನಲ್ಲಿ ಭಾರತ ಉತ್ತಮ ಸಾಧನೆ ಮಾಡಿತ್ತು.

‘ನನ್ನ ಯಶಸ್ಸಿನಲ್ಲಿ ಕೋಚ್ ಬಲದೇವ್ (ಸಿಂಗ್) ಸರ್ ಅವರ ಪಾತ್ರ ಬಹಳ ದೊಡ್ಡದು. ನಾನು ಅದೃಷ್ಟವಂತೆ. ಅವರು ಹಾಕಿ ಕ್ರೀಡೆ ಅಷ್ಟೇ ಅಲ್ಲ ಜೀವನದ ಪಾಠಗಳನ್ನು ಕಲಿಸಿದರು’ ಎಂದು ಹೇಳಿದರು.

ಒಲಿಂಪಿಕ್ಸ್ನಲ್ಲಿ ಭಾರತಕ್ಕೆ ಪದಕ ಜಯಿಸುವ ಆಸೆ ಮಾತ್ರ ಹಾಗೆಯೇ ಉಳಿಯಿತು ಎಂದಿದ್ದಾರೆ.

ರಾಣಿ ಅವರನ್ನು ಈಚೆಗೆ ರಾಷ್ಟ್ರೀಯ ಸಬ್ ಜೂನಿಯರ್ ಮಹಿಳೆಯರ ತಂಡದ ಕೋಚ್ ಆಗಿ ನೇಮಕ ಮಾಡಲಾಗಿದೆ. ಅವರು ಹಾಕಿ ಇಂಡಿಯಾ ಲೀಗ್ ನಲ್ಲಿ ಸೂರ್ಮಾ ಹಾಕಿ ಕ್ಲಬ್ಗೆ ಮೆಂಟರ್ ಆಗಿದ್ದಾರೆ.
.ಏಷ್ಯನ್ ಕ್ರೀಡಾಕೂಟ ಭಾನುವಾರ ಸಮಾರೋಪ: ರಾಣಿ ರಾಂಪಾಲ್ ದೇಶದ ಧ್ವಜಧಾರಿ.ಹಾಕಿ ಕ್ರೀಡಾಂಗಣಕ್ಕೆ ರಾಣಿ ರಾಂಪಾಲ್ ಹೆಸರು.ಖೇಲ್ ರತ್ನ ಗೌರವಕ್ಕೆ ರಾಣಿ ರಾಂಪಾಲ್ ಹೆಸರು ಶಿಫಾರಸು.ಸಮಾನ ಅವಕಾಶಗಳಿಂದ ಮಹಿಳಾ ತಂಡದ ಸಾಮರ್ಥ್ಯ ವೃದ್ಧಿ: ರಾಣಿ ರಾಂಪಾಲ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.