ನವದೆಹಲಿ: ಭಾರತದ ಯುವ ಪ್ರತಿಭೆ ಗಣೆಮತ್ ಸೆಕೋಂವ್ ಹಾಗೂ ಅಂಗದ್ ವೀರ್ ಸಿಂಗ್ ಬಾಜ್ವಾ ಐಎಸ್‌ಎಸ್‌ಎಫ್‌ಶೂಟಿಂಗ್ ವಿಶ್ವಕಪ್‌ನಲ್ಲಿ ಚಿನ್ನದ ಪದಕ ಮುಡಿಗೇರಿಸಿಕೊಂಡರು. ಇಲ್ಲಿಯ ಕರ್ಣಿ ಸಿಂಗ್ ಶೂಟಿಂಗ್ ರೇಂಜ್‌ನಲ್ಲಿ ನಡೆಯುತ್ತಿರುವ ಟೂರ್ನಿಯ ಐದನೇ ದಿನವಾದ ಮಂಗಳವಾರ ಈ ಜೋಡಿಯು, ಮಿಶ್ರ ತಂಡಕ್ಕಾಗಿ ಇದ್ದ ಸ್ಕೀಟ್ ವಿಭಾಗದಲ್ಲಿ ಅಗ್ರಸ್ಥಾನ ಗಳಿಸಿತು.

ಗಣೆಮತ್ ಹಾಗೂ ಅಂಗದ್ ಫೈನಲ್ ಹಣಾಹಣಿಯಲ್ಲಿ 33–29ರಿಂದ ಕಜಕಸ್ತಾನದ ಓಲ್ಗಾ ಪನಾರಿನಾ–ಅಲೆಕ್ಸಾಂಡರ್ ಯೆಚ್‌ಶೆಂಕೊ ಜೋಡಿಯನ್ನು ಪರಾಭವಗೊಳಿಸಿದರು. ಅರ್ಹತಾ ಸುತ್ತಿನಲ್ಲಿ ಭಾರತದ ಜೋಡಿಯು 141 ಪಾಯಿಂಟ್ಸ್ ಕಲೆಹಾಕಿತ್ತು. ಈ ಗೆಲುವಿನೊಂದಿಗೆ ಟೂರ್ನಿಯಲ್ಲಿ ಅಗ್ರಸ್ಥಾನದಲ್ಲಿರುವ ಭಾರತ ಗೆದ್ದ ಚಿನ್ನದ ಪದಕಗಳ ಸಂಖ್ಯೆ ಏಳಕ್ಕೇರಿದೆ.

ಇದೇ ವಿಭಾಗದಲ್ಲಿ ಸ್ಪರ್ಧಿಸಿದ್ದ ಭಾರತದ ಪರಿನಾಜ್ ಧಲಿವಾಲ್–ಮೈರಾಜ್ ಅಹಮ್ಮದ್ ಖಾನ್ ಕೂದಲೆಳೆ ಅಂತರದಲ್ಲಿ ಕಂಚಿನ ಪದಕ ತಪ್ಪಿಸಿಕೊಂಡರು. ಮೂರನೇ ಸ್ಥಾನಕ್ಕಾಗಿ ನಡೆದ ಸ್ಪರ್ಧೆಯಲ್ಲಿ ಈ ಜೋಡಿಯು 31–32ರಿಂದ ಕತಾರ್‌ನ ರೀಮ್ ಎ ಶರ್ಶಾನಿ–ರಶೀದ್ ಹಮಾದ್ ಎದುರು ಸೋಲು ಅನುಭವಿಸಿದರು.

20ರ ಹರಯದ ಗಣೆಮತ್, ಟೂರ್ನಿಯ ಮೂರನೇ ದಿನ ಮಹಿಳಾ ವೈಯಕ್ತಿಕ ಸ್ಕೀಟ್ ವಿಭಾಗದಲ್ಲಿ ಕಂಚಿನ ಪದಕ ಗೆದ್ದುಕೊಂಡಿದ್ದರು. ಇದರೊಂದಿಗೆ ಐಎಸ್‌ಎಸ್‌ಎಫ್ ವಿಶ್ವಕಪ್‌ವೊಂದರಲ್ಲಿ ಈ ವಿಭಾಗದಲ್ಲಿ ಅಗ್ರಸ್ಥಾನ ಗಳಿಸಿದ ಭಾರತದ ಮೊದಲ ಮಹಿಳೆ ಎನಿಸಿಕೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.