ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾರ್ಸಾ ಚೆಸ್‌ ಟೂರ್ನಿಗೆ ಗುಕೇಶ್‌, ಪ್ರಗ್ಗು, ಅರ್ಜುನ್‌

Published 7 ಮೇ 2024, 16:11 IST
Last Updated 7 ಮೇ 2024, 16:11 IST
ಅಕ್ಷರ ಗಾತ್ರ

ವಾರ್ಸಾ (ಪಿಟಿಐ): ಕ್ಯಾಂಡಿಡೇಟ್ಸ್‌ ಟೂರ್ನಿಯಲ್ಲಿ ವಿಜೇತರಾದ ಡಿ.ಗುಕೇಶ್‌ ಜೊತೆ ಭಾರತದ ಇನ್ನಿಬ್ಬರು ಯುವ ತಾರೆಯರಾದ ಆರ್‌.ಪ್ರಜ್ಞಾನಂದ ಮತ್ತು ಅರ್ಜುನ್‌ ಇರಿಗೇಶಿ ಅವರು ಬುಧವಾರ ಪೋಲೆಂಡ್‌ನಲ್ಲಿ ಆರಂಭವಾಗಲಿರುವ ಸೂಪರ್‌ಬೆಟ್‌ ರ‍್ಯಾಪಿಡ್‌ ಮತ್ತು ಬ್ಲಿಟ್ಜ್‌ ಚೆಸ್‌ ಟೂರ್ನಿಯಲ್ಲಿ ಕಣಕ್ಕೆ ಇಳಿಯಲಿದ್ದಾರೆ.

ಈ ಟೂರ್ನಿಗ ಗ್ರ್ಯಾಂಡ್‌ ಚೆಸ್‌ ಟೂರ್‌ನ ಭಾಗವಾಗಿದೆ. ಕ್ಯಾಂಡಿಡೇಟ್ಸ್‌ ಟೂರ್ನಿಯ ನಂತರ ಗುಕೇಶ್ ಮತ್ತು ಪ್ರಜ್ಞಾನಂದ ಅವರಿಗೆ ಇದು ಮೊದಲ ಟೂರ್ನಿ. ವಿಶ್ವ ಕ್ರಮಾಂಕದಲ್ಲಿ ಏಳನೇ ಸ್ಥಾನಕ್ಕೇರಿರುವ ಅರ್ಜುನ್ ಇರಿಗೇಶಿ ಅವರೂ 10 ಆಟಗಾರರ ಈ ಟೂರ್ನಿಯಲ್ಲಿ ಆಕರ್ಷಣೆಯ ಕೇಂದ್ರವಾಗಿದ್ದಾರೆ.

ಟೂರ್ನಿಯು 9 ರ‍್ಯಾಪಿಡ್‌ ಮಾದರಿಯಲ್ಲಿ 9 ಸುತ್ತುಗಳನ್ನು ಮತ್ತು 18 ಬ್ಲಿಟ್ಜ್‌ ಮಾದರಿಯ ಸುತ್ತುಗಳನ್ನು ಹೊಂದಿದೆ.

ಟೂರ್ನಿಯು ₹1.46 ಕೋಟಿ ಬಹುಮಾನ ಮೊತ್ತ ಹೊಂದಿದೆ.

ನಾಡಿರ್ಬೆಕ್‌ ಅಬ್ದುಸತ್ತಾರೋವ್ (ಉಜ್ಬೇಕಿಸ್ತಾನ), ಅನಿಶ್ ಗಿರಿ (ಹಾಲೆಂಡ್‌) ಅವರೂ ಪಾಲ್ಗೊಳ್ಳಲಿದ್ದಾರೆ.

ಗುಕೇಶ್‌ಗೆ ವೇಗದ ಮಾದರಿಯಲ್ಲಿ ಅಷ್ಟೇನೂ ಬಲಾಢ್ಯರಲ್ಲದಿದ್ದರೂ, ಇಲ್ಲಿ ತಮ್ಮ ಸಾಮರ್ಥ್ಯವನ್ನು ಪರೀಕ್ಷಿಸುವ ಅವಕಾಶ ಹೊಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT