ನವದೆಹಲಿ: ಮೊಹಮ್ಮದ್ ಹಸಮುದ್ದೀನ್ ಸೇರಿದಂತೆಭಾರತದ ಮೂರು ಬಾಕ್ಸರ್‌ಗಳು ಜರ್ಮನಿಯ ಹ್ಯಾಲೆಯಲ್ಲಿ ನಡೆಯುತ್ತಿರುವ ಕೆಮಿಸ್ಟ್ರಿ ಬಾಕ್ಸಿಂಗ್ ಕಪ್ ಟೂರ್ನಿಯ ಕ್ವಾರ್ಟರ್‌ಫೈನಲ್ ಪಂದ್ಯಗಳಲ್ಲಿ ಗೆದ್ದಿದ್ದಾರೆ.

ಪುರುಷರ 56 ಕೆ. ಜಿ. ವಿಭಾಗದಲ್ಲಿ ಮೊಹಮ್ಮದ್ ಹಸಮುದ್ದೀನ್ ಅವರು ಜೋರ್ಡನ್‌ನ ಮೊಹಮ್ಮದ್ ಅಲ್ವದಿ ವಿರುದ್ಧ5–0ಯಿಂದ ಗೆದ್ದರು.

56 ಕೆ. ಜಿ. ವಿಭಾಗದಲ್ಲಿ ಮದನ್ ಲಾಲ್ ಅವರು ಸ್ಲೋವಾಕಿಯಾದ ವಿಲಿಯಂ ಟ್ಯಾಂಕೊ ಅವರನ್ನು 5–0 ಯಿಂದ ಮಣಿಸಿದರು.

91 ಕೆ. ಜಿ. ವಿಭಾಗದಲ್ಲಿ ನರೇಂದರ್ ಅವರು ಮಾಲ್ಡೋವಾದ ಅಲೆಕ್ಸಿ ಜವಾತಿನ್ ಅವರನ್ನು 4–0ಯಿಂದ ಪರಾಭವಗೊಳಿಸಿದರು.

69 ಕೆ. ಜಿ. ವಿಭಾಗದಲ್ಲಿ ಮನೋಜ್ ಕುಮಾರ್ ಅವರು ರಷ್ಯಾದ ಆಂಡ್ರ್ಯೂ ಜಮ್ಕೊವೊಯಿ ವಿರುದ್ಧ ಸೋತರು. 81 ಕೆ. ಜಿ. ವಿಭಾಗದಲ್ಲಿ ಮನೀಶ್ ಪನ್ವಾರ್ ಅವರನ್ನು ಸ್ಲೋವಾಕಿಯಾದ ಮ್ಯಾಟಸ್ ಸ್ಟ್ರನಿಸ್ಕೊ ಅವರು ಮಣಿಸಿದರು.

ಗುರುವಾರ ನಡೆದ ಎಂಟರ ಘಟ್ಟದ ಪಂದ್ಯಗಳಲ್ಲಿ ಅಮಿತ್ ಪಂಗಲ್, ಗೌರವ್ ಸೋಲಂಕಿ, ಹಾಗೂ ಧೀರಜ್ ರಂಗಿ ಅವರು ಗೆದ್ದು ಸೆಮಿಫೈನಲ್‌ಪ್ರವೇಶಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.