ನವದೆಹಲಿ: ಮುಂದಿನ ವರ್ಷದ ಜನವರಿಯಲ್ಲಿ ಕೊಕ್ಕೊ ವಿಶ್ವಕಪ್‌ನ ಚೊಚ್ಚಲ ಆವೃತ್ತಿಯು ನವದೆಹಲಿಯಲ್ಲಿ ನಡೆಯಲಿದೆ ಎಂದು ಭಾರತ ಕೊಕ್ಕೊ ಫೆಡರೇಷನ್ (ಕೆಕೆಎಫ್‌ಐ) ಬುಧವಾರ ಈ ಘೋಷಣೆ ಮಾಡಿದೆ.

‘ಕೊಕ್ಕೊ ಕ್ರೀಡೆಯ ಮೂಲ ಬೇರು ಭಾರತದಲ್ಲಿದೆ. ಈ ವಿಶ್ವಕಪ್ ಟೂರ್ನಿಯು ಕೊಕ್ಕೊದ ಸಾಂಸ್ಕೃತಿಕ ಪರಂಪರೆ ಮತ್ತು ಸ್ಪರ್ಧಾತ್ಮಕ ಮನೋಭಾವವನ್ನು ಎತ್ತಿ ತೋರಿಸಲಿದೆ. ಕೆಸರಿನಲ್ಲಿ ಆರಂಭವಾಗಿ ಮ್ಯಾಟ್‌ಗೆ ಹೊರಳಿರುವ ಈ ಕ್ರೀಡೆಯು ಇಂದು 54 ದೇಶಗಳಲ್ಲಿ ಜನಪ್ರಿಯವಾಗಿದೆ’ ಎಂದು ಕೆಕೆಎಫ್‌ಐ ತಿಳಿಸಿದೆ.

ಮೊದಲ ವಿಶ್ವಕಪ್ ಅನ್ನು ಆಯೋಜಿಸಲು ಅಂತರರಾಷ್ಟ್ರೀಯ ಕೊಕ್ಕೊ ಫೆಡರೇಷನ್ ಭಾರತಕ್ಕೆ ಅವಕಾಶ ನೀಡಿದೆ. 2032ರ ವೇಳೆಗೆ ಕೊಕ್ಕೊ ಅನ್ನು ಒಲಿಂಪಿಕ್ ಕ್ರೀಡೆಗೆ ಸೇರಿಸುವುದು ನಮ್ಮ ಅಂತಿಮ ಗುರಿ. ಆ ಕನಸಿನತ್ತ ಸಾಗುವ ಮೊದಲ ಹೆಜ್ಜೆಯೇ ಈ ವಿಶ್ವಕಪ್ ಟೂರ್ನಿಯಾಗಿದೆ ಎಂದು ಕೆಕೆಎಫ್‌ಐ ಅಧ್ಯಕ್ಷ ಸುಧಾಂಶು ಮಿತ್ತಲ್ ಹೇಳಿದ್ದಾರೆ.

ಕೆನಡ, ಅಮೆರಿಕ, ಪೆರು, ಬ್ರೆಜಿಲ್, ದಕ್ಷಿಣ ಆಫ್ರಿಕಾ, ಕೆನ್ಯಾ, ಘಾನಾ, ಜರ್ಮನಿ, ಪೋಲೆಂಡ್, ಹಾಲೆಂಡ್, ಇಂಗ್ಲೆಂಡ್, ಆಸ್ಟ್ರೇಲಿಯಾ, ಕೊರಿಯಾ, ಮಲೇಷ್ಯಾ, ಇಂಡೊನೇಷ್ಯಾ, ಇರಾನ್ ಸೇರಿದಂತೆ ಹಲವು ರಾಷ್ಟ್ರಗಳ ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿದೆ. ಪಾಕಿಸ್ತಾನದ ತಂಡವೂ ಪಾಲ್ಗೊಳ್ಳುವ ವಿಶ್ವಾಸವಿದೆ ಎಂದು ಅವರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.