ಹೂಸ್ಟನ್ : ಭಾರತದ ಬಾಲಕರ ಮತ್ತ ಬಾಲಕಿಯರ ತಂಡಗಳು ಇಲ್ಲಿ ನಡೆಯುತ್ತಿರುವ ವಿಶ್ವ ಜೂನಿಯರ್ ಸ್ಕ್ವಾಷ್ ಚಾಂಪಿಯನ್ಷಿಪ್ನಲ್ಲಿ ಕ್ವಾರ್ಟರ್ ಫೈನಲ್ಗೆ ಮುನ್ನಡೆದವು.

ಬಾಲಕರ ‘ಎಫ್’ ಗುಂಪಿನಲ್ಲಿ ಭಾರತ 3-0ಯಿಂದ ಬ್ರೆಜಿಲ್ ತಂಡವನ್ನು ಸೋಲಿಸಿತು. ಯುವರಾಜ್ ವಾಧ್ವಾನಿ, ಶೌರ್ಯ ಬಾವಾ ಮತ್ತು ಅಯಾನ್ ವಜಿರಳ್ಳಿ ತಮ್ಮ ಸುತ್ತಿನ ಪಂದ್ಯಗಳನ್ನು ಗೆದ್ದರು. ಕ್ವಾರ್ಟರ್ ಫೈನಲ್ನಲ್ಲಿ ಭಾರತವು ಕೆನಡಾ ತಂಡವನ್ನು ಎದುರಿಸಲಿದೆ.

ಬಾಲಕಿಯರ ‘ಡಿ’ ಗುಂಪಿನಲ್ಲಿ ಭಾರತ ತಂಡವು ಬ್ರೆಜಿಲ್ ಮತ್ತು ಆಸ್ಟ್ರೇಲಿಯಾವನ್ನು ಒಂದೇ ರೀತಿಯ ಅಂತರದಿಂದ (3-0) ಸೋಲಿಸಿ ಕ್ವಾರ್ಟರ್ಫೈನಲ್ ಸ್ಥಾನವನ್ನು ಖಚಿತಪಡಿಸಿಕೊಂಡಿತು. ಅನಾಹತ್ ಸಿಂಗ್, ನಿರುಪಮಾ ದುಬೆ, ಉನ್ನತಿ ತ್ರಿಪಾಠಿ ಮತ್ತು ಶಮೀನಾ ರಿಯಾಜ್ ಅವರನ್ನು ತಮ್ಮ ಸುತ್ತಿನ ಪಂದ್ಯಗಳಲ್ಲಿ ಜಯ ಗಳಿಸಿದರು. ಗುಂಪಿನ ಕೊನೆಯ ಪಂದ್ಯದಲ್ಲಿ ಭಾರತವು ಹಾಂಗ್ಕಾಂಗ್ ತಂಡವನ್ನು ಎದುರಿಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.