ಚೀನಾ: ರಾಜ್‌ಕುಮಾರ್ ಪಾಲ್ ಅವರ ಅಮೋಘ ಆಟದ ಬಲದಿಂದ ಭಾರತ ತಂಡವು ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಮಲೇಷ್ಯಾ ವಿರುದ್ಧ 8–1 ಗೋಲುಗಳ ಅಂತರದಿಂದ ಜಯಗಳಿಸಿತು.

ಬುಧವಾರ ಚೀನಾದ ಮೊಕಿಯಲ್ಲಿ ನಡೆದ ಪಂದ್ಯದಲ್ಲಿ ರಾಜ್‌ಕುಮಾರ್ ಪಾಲ್ ಮೂರು, 25 ಮತ್ತು 33ನೇ ನಿಮಿಷದಲ್ಲಿ, ಅರಿಜಿತ್ ಸಿಂಗ್ (6 ಮತ್ತು,39 ನಿಮಿಷ) ಜುಗರಾಜ್ ಸಿಂಗ್ (7 ನಿಮಿಷ) ನಾಯಕ ಹರ್ಮನ್ ಪ್ರೀತ್ ಸಿಂಗ್ (22ನಿಮಿಷ) ಮತ್ತು ಉತ್ತಮ್ ಸಿಂಗ್ (40 ನಿಮಿಷ) ಗೋಲು ಗಳಿಸಿ ಸತತ ಮೂರನೇ ಬಾರಿಗೆ ಭಾರತದ ಗೆಲುವಿಗೆ ನೆರವಾದರು.

ಈ ಗೆಲುವಿನ ಮೂಲಕ 9 ಅಂಕಗಳಿಸಿದ ಭಾರತ ಪಾಯಿಂಟ್ ಪಟ್ಟಿಯಲ್ಲಿ ಅಗ್ರಸ್ಥಾನ ಕಾಯ್ದುಕೊಂಡಿದೆ.

ಇದೇ ಆಟದಲ್ಲಿ ಮಲೇಷ್ಯಾದ ಅಖಿಮುಲ್ಲಾ ಅನೌರ್ (34ನಿಮಿಷ) ಸುದೀರ್ಘ ಗೋಲು ಗಳಿಸಿದರು.

ಈ ಹಿಂದಿನ ಪಂದ್ಯಗಳಲ್ಲಿ ಗೆಲವಿನ ನಗೆ ಚೆಲ್ಲಿದ್ದ ಭಾರತ ಈ ಬಾರಿಯೂ ಆಕ್ರಮಣಕಾರಿಯಾಗಿಯೇ ಆಟ ಆರಂಭಿಸಿತ್ತು. ಪಂದ್ಯ ಆರಂಭವಾದ ಏಳು ನಿಮಿಷಗಳಲ್ಲೇ ಭಾರತ ಮೂರು ಗೋಲು ಗಳಿಸುವ ಮೂಲಕ ಮಲೇಷ್ಯಾವನ್ನು ಹಿಮ್ಮೆಟ್ಟಿಸಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.