ಪ್ಯಾರಿಸ್: ರಕ್ಷಣೆಯಲ್ಲಿ ಕೆಲವು ಲೋಪಗಳ ಹೊರತಾಗಿಯೂ ಭಾರತ ತಂಡ ನಿರೀಕ್ಷೆಯಂತೆ ಐರ್ಲೆಂಡ್ ತಂಡವನ್ನು ಸೋಲಿಸಿ ಪ್ಯಾರಿಸ್ ಒಲಿಂಪಿಕ್ಸ್ ಹಾಕಿ ಕ್ವಾರ್ಟರ್ಫೈನಲ್ನತ್ತ ದಿಟ್ಟ ಹೆಜ್ಜೆಯಿಟ್ಟಿತು. ‘ಬಿ’ ಗುಂಪಿನ ಈ ಪಂದ್ಯವನ್ನು ಮಂಗಳವಾರ ಭಾರತ ತಂಡ 2–0 ಗೋಲುಗಳಿಂದ ಜಯಿಸಿತು. ನಾಯಕ ಹರ್ಮನ್ಪ್ರೀತ್ ಸಿಂಗ್ ಈ ಎರಡೂ ಗೋಲುಗಳನ್ನು ಗಳಿಸಿದರು.

ಈ ಹಿಂದಿನ ಎರಡು ಪಂದ್ಯಗಳಿಗೆ ಭಿನ್ನವಾಗಿ ಭಾರತ ಈ ಬಾರಿ ಎದುರಾಳಿ ತಂಡದ ಗೋಲಿನತ್ತ ಪದೇ ಪದೇ ದಾಳಿಗಳನ್ನು ನಡೆಸಿತು. ವಿರಾಮಕ್ಕೆ ಮೊದಲಂತೂ ಭಾರತದ ಮೇಲುಗೈ ಸ್ಪಷ್ಟವಾಗಿ ಕಾಣಿಸಿತು. ಇದು ಅನಿರೀಕ್ಷಿತವೇನೂ ಆಗಿರಲಿಲ್ಲ. ಗುಂಪಿನಲ್ಲಿ ಇರುವ ತಂಡಗಳ ಪೈಕಿ ಐರ್ಲೆಂಡ್ ದುರ್ಬಲ ಎಂದು ಗುರುತಿಸಿಕೊಂಡಿದೆ. ಆದರೆ ಉತ್ತರಾರ್ಧದಲ್ಲಿ ಭಾರತದ ಆಟ ಮೆಚ್ಚುವಂತಿರಲಿಲ್ಲ.

ಈ ಗೆಲುವಿನ ನಂತರ ಭಾರತ ಮೂರು ಪಂದ್ಯಗಳಿಂದ ಏಳು ಪಾಯಿಂಟ್ಸ್ ಸಂಗ್ರಹಿಸಿದೆ. ಐರ್ಲೆಂಡ್ ಕ್ವಾರ್ಟರ್ಫೈನಲ್ ರೇಸ್ನಿಂದ ಹೊರಬಿತ್ತು. ಐರ್ಲೆಂಡ್ ಆಡಿದ ಮೂರೂ ಪಂದ್ಯಗಳಲ್ಲಿ ಸೋತಿದೆ. 12 ತಂಡಗಳನ್ನು ಎರಡು ಗುಂಪುಗಳಲ್ಲಿ ವಿಂಗಡಿಸಲಾಗಿದ್ದು, ಮೊದಲ ನಾಲ್ಕು ಸ್ಥಾನ ಗಳಿಸುವ ತಂಡಗಳು ಕ್ವಾರ್ಟರ್ಫೈನಲ್ ತಲುಪಲಿವೆ.

ಸದ್ಯದ ಪರಿಸ್ಥಿತಿಯಲ್ಲಿ ‘ಬಿ’ ಗುಂಪಿನಲ್ಲಿ ಅರ್ಜೆಂಟೀನಾ ಮತ್ತು ನ್ಯೂಜಿಲೆಂಡ್ ನಡುವಣ ನಾಲ್ಕನೇ ಸ್ಥಾನಕ್ಕೆ ಪೈಪೋಟಿ ನಡೆಯುವ ಸಾಧ್ಯತೆ ಕಾಣುತ್ತಿದೆ.

ಮೊದಲ ಪಂದ್ಯದಲ್ಲಿ ಭಾರತ 3–2 ಗೋಲುಗಳಿಂದ ನ್ಯೂಜಿಲೆಂಡ್ ವಿರುದ್ಧ ಜಯಗಳಿಸಿದ್ದು, ಸೋಮವಾರ ಅರ್ಜೆಂಟೀನಾ ವಿರುದ್ಧ 1–1 ಸಮಬಲ ಸಾಧಿಸಿತ್ತು.

ಭಾರತಕ್ಕೆ ಮಂಗಳವಾರ ನಡೆದ ಪಂದ್ಯದ ಎರಡನೇ ನಿಮಿಷವೇ ಪೆನಾಲ್ಟಿ ಕಾರ್ನರ್ ದೊರಕಿತು. ಈ ಅವಕಾಶದಲ್ಲಿ ಹರ್ಮನ್ಪ್ರೀತ್ ಯತ್ನವನ್ನು ಎದುರಾಳಿ ರಕ್ಷಣೆ ಆಟಗಾರರೊಬ್ಬರು ತಡೆದರು. ಅವರಿಂದ ರಿಬೌಂಡ್ ಆದ ಚೆಂಡನ್ನು ಮನ್ದೀಪ್ ನಿಯಂತ್ರಿಸುವಲ್ಲಿ ವಿಫಲರಾದರು. ಮತ್ತೊಮ್ಮೆ ಹರ್ಮನ್ಪ್ರಿತ್ ಅವರ ಯತ್ನ ಗೋಲ್ಪೋಸ್ಟ್ಗೆ ಹೊಡೆಯಿತು.

ಆದರೆ ಗೋಲಿಗೆ ಹೆಚ್ಚುಕಾಯಬೇಕಾಗಿ ಬರಲಿಲ್ಲ. 13ನೇ ನಿಮಿಷ ತಂಡದ ನಾಯಕ ಹರ್ಮನ್ಪ್ರೀತ್ ‘ಪೆನಾಲ್ಟಿ’ ಅವಕಾಶವನ್ನು ಯಶಸ್ವಿ ಆಗಿ ಪರಿವರ್ತಿಸಿದರು. ಇಬ್ಬರು ಐರಿಷ್ ಆಟಗಾರರನ್ನು ತಪ್ಪಿಸಿಕೊಂಡು ಚೆಂಡಿನೊಡನೆ ಮುನ್ನಡೆದ ಗುರ್ಜಂತ್, ಮನ್ದೀಪ್ಗೆ ಪಾಸ್ ಮಾಡಿದರು. ಆದರೆ ಗೋಲ್ಪೋಸ್ಟ್ ಎದುರೇ ಶೇನ್ ಒ‘ಡೊನೊಘ್, ಮನದೀಪ್ ಅವರನ್ನು ಒರಟಾಗಿ ತಡೆದರು. ಪರಿಣಾಮವಾಗಿ ಈ ಪೆನಾಲ್ಟಿ ದೊರಕಿತ್ತು.

ಎರಡನೇ ಕ್ವಾರ್ಟರ್ನಲ್ಲಿ (19ನೇ ನಿಮಿಷ) ಹರ್ಮನ್ಪ್ರೀತ್ ಅವರು ತಂಡಕ್ಕೆ ದೊರೆತ ನಾಲ್ಕನೇ ಪೆನಾಲ್ಟಿ ಕಾರ್ನರ್ ಅವಕಾಶವನ್ನು ಗೋಲಾಗಿ ಬದಲಾಯಿಸಿದರು. ಅದೂ ಮೊದಲ ಎರಡು ಸತತ ಪ್ರಯತ್ನಗಳನ್ನು ಐರಿಷ್ ರಕ್ಷಣೆ ಆಟಗಾರರು ಬ್ಲಾಕ್ ಮಾಡಿದ ನಂತರ. ಮೇಲುಗೈ ಹೊರತಾಗಿಯೂ ಭಾರತ ಕೆಲವು ಅವಕಾಶಗಳನ್ನು ಸರಿಯಾಗಿ ಬಳಸಿಕೊಳ್ಳಲಿಲ್ಲ.

ಐರ್ಲೆಂಡ್ಗೂ ಕೆಲವು ಅವಕಾಶಗಳು ದೊರೆತಿದ್ದವು. ಆದರೆ ಗೋಲ್ಕೀಪರ್ ಶ್ರೀಜೇಶ್ ಅವರನ್ನು ದಾಟಲು ಆಗಲಿಲ್ಲ. ಪಂದ್ಯದ ಮೂರನೇ ಕ್ವಾರ್ಟರ್ನಲ್ಲಿ ಐರ್ಲೆಂಡ್ ಪ್ರಬಲ ಪೈಪೋಟಿ ನೀಡಿತು. ಎಂಟು ಪೆನಾಲ್ಟಿ ಕಾರ್ನರ್ಗಳು ದೊರೆತವು. ಆದರೆ ಒಂದರಲ್ಲೂ ಯಶಸ್ವಿಯಾಗಲಿಲ್ಲ. ಕೆಲವು ಬಾರಿ ರಕ್ಷಣೆಯಲ್ಲಿ ತಪ್ಪು ಎಸಗಿದರೂ ಅದರಿಂದ ಹಾನಿಯಾಗಲಿಲ್ಲ. ಎದುರಾಳಿ ತಂಡ ಪ್ರಬಲವಾಗಿದ್ದಲ್ಲಿ ಕಥೆ ಬೇರೆಯಿರುತಿತ್ತೇನೊ. ಕೊನೆಯ ಕ್ವಾರ್ಟರ್ನಲ್ಲೂ ಐರಿಷ್ ತಂಡಕ್ಕೆ ಅವಕಾಶಗಳು ದೊರೆತೂ ‘ಫಿನಿಷಿಂಗ್’ ಇರಲಿಲ್ಲ.

ಭಾರತ ತನ್ನ ಮುಂದಿನ ಪಂದ್ಯವನ್ನು ಆಗಸ್ಟ್ 1ರಂದು ಬೆಲ್ಜಿಯಂ ವಿರುದ್ಧ ಆಡಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.