ಹೀರೋಶಿಮಾ: ಪ್ರಶಸ್ತಿ ಮೇಲೆ ಕಣ್ಣಿಟ್ಟಿರುವ ಭಾರತ ತಂಡ ಇಲ್ಲಿ ನಡೆಯುತ್ತಿರುವ ಎಫ್ಐಎಚ್ ಮಹಿಳಾ ಹಾಕಿ ಸಿರೀಸ್ ಫೈನಲ್ಸ್ ಟೂರ್ನಿಯ ಸೆಮಿಫೈನಲ್ ಪಂದ್ಯದಲ್ಲಿ ಶನಿವಾರ ಚಿಲಿ ತಂಡವನ್ನು ಎದುರಿಸಲಿದೆ.

ವಿಶ್ವ ರ್ಯಾಂಕಿಂಗ್ನಲ್ಲಿ 9ನೇ ಸ್ಥಾನದಲ್ಲಿರುವ ಭಾರತ, ಟೂರ್ನಿಯಲ್ಲಿ ಇದುವರೆಗೆ ಒಂದೂ ಪಂದ್ಯವನ್ನು ಸೋತಿಲ್ಲ. ಉರುಗ್ವೆ ವಿರುದ್ಧ 4–1, ಪೋಲೆಂಡ್ ವಿರುದ್ಧ 5–0 ಹಾಗೂ ಫಿಜಿ ತಂಡದ ಎದುರು 11–0 ಗೋಲುಗಳಿಂದ ಜಯಭೇರಿ ಬಾರಿಸಿತ್ತು.

ರ್ಯಾಂಕಿಂಗ್ನಲ್ಲಿ 16ನೇ ಸ್ಥಾನದಲ್ಲಿರುವ ಚಿಲಿ ತಂಡವನ್ನು ಮಣಿಸುವ ವಿಶ್ವಾಸದಲ್ಲಿ ಭಾರತವಿದೆ. ರಾಣಿ ರಾಂಪಾಲ್ ಪಡೆಯು ಈ ಪಂದ್ಯದಲ್ಲಿ ಜಯ ಸಾಧಿಸಿದರೆ ಟೋಕಿಯೋ ಒಲಿಂಪಿಕ್ ಕ್ವಾಲಿಫೈಯರ್ಸ್ನ ಅಂತಿಮ ಸುತ್ತಿಗೆ ಸ್ಥಾನ ಪಡೆಯಲಿದೆ. ಈ ಸಾಧನೆ ಮಾಡಲು ಭಾರತಕ್ಕೇನೂ ಹೆಚ್ಚು ಸಮಸ್ಯೆಯಾಗಲಿಕ್ಕಿಲ್ಲ.

ಗುಂಪು ಹಂತದಲ್ಲಿ ನಡೆದ ಎಲ್ಲ ಪಂದ್ಯಗಳಲ್ಲಿ ಭಾರತಕ್ಕೆ ಸಾಕಷ್ಟು ಅವಕಾಶಗಳು ಸಿಕ್ಕರೂ ಗೋಲಾಗಿ ಪರಿವರ್ತಿಸುವಲ್ಲಿ ಎಡವಿದ್ದು ಕೋಚ್ ಶೊರ್ಡ್ ಮ್ಯಾರಿಜ್ ಅವರ ಕಳವಳಕ್ಕೆ ಕಾರಣವಾಗಿದೆ.

‘ನಾವು ಸಾಧ್ಯವಾದಷ್ಟು ಅತ್ಯುತ್ತಮ ಪ್ರದರ್ಶನ ನೀಡಲು ಬಯಸುತ್ತೇವೆ ಹಾಗೂ ಸುಧಾರಿಸಿಕೊಳ್ಳಲು ಇನ್ನೂ ಅವಕಾಶವಿದೆ’ ಎಂದು ಮ್ಯಾರಿಜ್ ಹೇಳಿದರು. ಫಿಜಿ ತಂಡದ ವಿರುದ್ಧ ನಡೆದ ಗುಂಪು ಹಂತದ ಕೊನೆಯ ಪಂದ್ಯದಲ್ಲಿ ಗುರ್ಜಿತ್ ಕೌರ್ ನಾಲ್ಕು ಗೋಲು ಬಾರಿಸಿದ್ದರು. ಇನ್ನುಳಿದ ಪಂದ್ಯಗಳಲ್ಲೂ ಅದೇ ಮಾದರಿಯ ಪ್ರದರ್ಶನ ತೋರುವ ಉತ್ಸಾಹದಲ್ಲಿದ್ದಾರೆ.

ಯಾವುದೇ ತಂಡವನ್ನು ಹಗುರವಾಗಿ ಪರಿಗಣಿಸುವುದಿಲ್ಲ ಎಂದು ನಾಯಕಿ ರಾಣಿ ಹೇಳಿದರು.ಮತ್ತೊಂದೆಡೆ ಚಿಲಿ ತಂಡ ಗುಂಪು ಹಂಂತದಲ್ಲಿ ಎರಡನೇ ಸ್ಥಾನ ಪಡೆದಿತ್ತು. ಮೆಕ್ಸಿಕೊ ತಂಡವನ್ನು 7–0ಯಿಂದ ಹಾಗೂ ಆತಿಥೇಯ ಜಪಾನ್ನ್ನು 3–1ರಿಂದ ಮಣಿಸಿದ್ದ ಚಿಲಿ, ಕ್ರಾಸ್ಓವರ್ ಪಂದ್ಯದಲ್ಲಿ ಉರುಗ್ವೆ ವಿರುದ್ಧ 5–2ರಿಂದ ಗೆದ್ದ ಚಿಲಿ ಸೆಮಿಫೈನಲ್ಗೆ ಲಗ್ಗೆಯಿಟ್ಟಿತು. ಮತ್ತೊಂದು ಸೆಮಿಫೈನಲ್ ಪಂದ್ಯದಲ್ಲಿ ರಷ್ಯಾ ತಂಡವು ಜಪಾನ್ಗೆ ಎದುರಾಗಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.