ಮಕಾವ್ : ಭಾರತದ ಸ್ಪರ್ಧಿಗಳು ಮಕಾವ್‌ನಲ್ಲಿ ನಡೆಯುತ್ತಿರುವ ಏಷ್ಯನ್ ಜೂನಿಯರ್ ಜೂಡೊ ಚಾಂಪಿಯನ್‌ಷಿಪ್‌ನಲ್ಲಿ ಮೂರು ಚಿನ್ನ ಸೇರಿದಂತೆ ಐದು ಪದಕಗಳನ್ನು ಗೆದ್ದುಕೊಂಡರು.

ಮಹಿಳೆಯರ 48 ಕೆ.ಜಿ. ವಿಭಾಗದಲ್ಲಿ ಅಸ್ಮಿತಾ ಡೆ, 63 ಕೆ.ಜಿ. ವಿಭಾಗದಲ್ಲಿ ಉನ್ನತಿ ಶರ್ಮಾ ಮತ್ತು ಪುರುಷರ 73 ಕೆ.ಜಿ. ವಿಭಾಗದಲ್ಲಿ ಅರುಣ್ ಕುಮಾರ್ ಅವರು ಚಿನ್ನ ಜಯಿಸಿದರು.

ಪುರುಷರ 100 ಪ್ಲಸ್ ಕೆ.ಜಿ. ವಿಭಾಗದಲ್ಲಿ ಯಶ್ ಗಂಗಾಸ್ ಬೆಳ್ಳಿ ಗೆದ್ದರು. ಅವರು ಫೈನಲ್‌ನಲ್ಲಿ ಮಂಗೋಲಿಯದ ಖಾಂಗರಿಡ್ ಗಾಂಟಲ್ಗಾ ಎದುರು ಪರಾಭವಗೊಂಡರು. ಮಹಿಳೆಯರ 52 ಕೆ.ಜಿ. ವಿಭಾಗದಲ್ಲಿ ಶ್ರದ್ಧಾ ಅವರು ಕಂಚು ತಮ್ಮದಾಗಿಸಿಕೊಂಡರು.

ಅಸ್ಮಿತಾ ಅವರು ಅರ್ಹತಾ ಸುತ್ತಿನಲ್ಲಿ ಅಗ್ರಸ್ಥಾನ ಪಡೆದು ಪ್ರಧಾನ ಹಂತ ಪ್ರವೇಶಿಸಿದ್ದರು. ಸೆಮಿಫೈನಲ್‌ನಲ್ಲಿ ಆಸ್ಟ್ರೇಲಿಯಾದ ಆ್ಯಶ್ಲಿನ್ ಡೊ ವಿರುದ್ಧ ಗೆದ್ದರೆ, ಫೈನಲ್‌ನಲ್ಲಿ ಅದೇ ದೇಶದ ಆ್ಯನೆಲೀಸ್ ಫೀಲ್ಡರ್ ಅವರನ್ನು ಮಣಿಸಿದರು.

ಉನ್ನತಿ ಅವರು ಸೆಮಿಫೈನಲ್ ಮತ್ತು ಫೈನಲ್‌ನಲ್ಲಿ ಕ್ರಮವಾಗಿ ಮಂಗೋಲಿಯದ ಮರಲ್ಮಾ ಖುರೆಲ್‌ಚುರನ್ ಹಾಗೂ ಆಸ್ಟ್ರೇಲಿಯಾದ ರೇಲಿ ರಮೆಟಾ ವಿರುದ್ಧ ಜಯಿಸಿದರು.

ಅರುಣ್ ಅವರು ಚಿನ್ನದ ಪದಕಕ್ಕಾಗಿ ನಡೆದ ಪೈಪೋಟಿಯಲ್ಲಿ ಆಸ್ಟ್ರೇಲಿಯಾದ ಕೊಹ್ಸಿ ತೊಯೊಶಿಮ ಅವರನ್ನು ಮಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.