ಸುರಬಯ (ಇಂಡೊನೇಷ್ಯಾ): ಸಂಘಟಿತ ಆಟವಾಡಿದ ಭಾರತ ತಂಡ, 20 ವರ್ಷದೊಳಗಿನವರ ಏಷ್ಯನ್ ವಾಲಿಬಾಲ್ ಚಾಂಪಿಯನ್‌ಷಿಪ್‌ನ ಎರಡನೇ ಪಂದ್ಯದಲ್ಲಿ ಕುವೈತ್ ತಂಡವನ್ನು ಬುಧವಾರ 3–0 ನೇರ ಸೆಟ್‌ಗಳಿಂದ ಸೋಲಿಸಿತು.

‘ಸಿ’ ಗುಂಪಿನ ಈ ಪಂದ್ಯದಲ್ಲಿ ಭಾರತ ತಂಡ 25–14, 25–12, 25–18ರಲ್ಲಿ ಜಯಗಳಿಸಿತು. ಮಿಡ್ಲ್ ಬ್ಲಾಕರ್ ಆದಿತ್ಯ, ದಾಳಿಯಲ್ಲಿ ಧ್ರುವಿಲ್ ಮತ್ತು ಸೆಟ್ಟರ್ ಆಗಿದ್ದ ನಾಯಕ ಕಬಿಲನ್ ಉತ್ತಮ ಪ್ರದರ್ಶನ ನೀಡಿದರು. ಕುವೈತ್‌ಗೆ ಇದು ಎರಡನೇ ಸೋಲು. ಮೊದಲ ಪಂದ್ಯದಲ್ಲಿ ಅದು ಜಪಾನ್ ತಂಡಕ್ಕೆ ಮಣಿದಿತ್ತು.

ಮಂಗಳವಾರ ನಡೆದ ಮೊದಲ ಪಂದ್ಯದಲ್ಲಿ ಎರಡು ಸೆಟ್ ಹಿನ್ನಡೆಯಿಂದ ಚೇತರಿಸಿಕೊಂಡ ಭಾರತ 3–2 ಸೆಟ್‌ಗಳಿಂದ (21–15, 21–25, 25–23, 25–15, 15–12ರಲ್ಲಿ) ಬಾಂಗ್ಲಾದೇಶ ತಂಡವನ್ನು ಮಣಿಸಿತ್ತು.

ಒಟ್ಟು 16 ತಂಡಗಳನ್ನು ನಾಲ್ಕು ಗುಂಪುಗಳಲ್ಲಿ ವಿಂಗಡಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.