ಭಾನುವಾರ, 19 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

Olympic | ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಭಾರತದ ಮಹಿಳಾ, ಪುರುಷರ ತಂಡ

Published 6 ಮೇ 2024, 3:04 IST
Last Updated 6 ಮೇ 2024, 3:04 IST
ಅಕ್ಷರ ಗಾತ್ರ

ನವದೆಹಲಿ: ಒಲಿಂಪಿಕ್ಸ್‌ ಕ್ರೀಡಾಕೂಟದ ಅರ್ಹತಾ ಸುತ್ತಿನಲ್ಲಿ ಭಾರತದ ಪುರುಷರ 4X400 ಮೀಟರ್ ರಿಲೇ ತಂಡವು 2ನೇ ಸ್ಥಾನ ಪಡೆಯುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದಿದೆ.

ಆದೇ ರೀತಿ ಅರ್ಹತಾ ಸುತ್ತಿನಲ್ಲಿ ಭಾರತೀಯ ಮಹಿಳಾ 4X400 ಮೀಟರ್ ರಿಲೇ ತಂಡವು 2ನೇ ಸ್ಥಾನ ಪಡೆಯುವ ಮೂಲಕ ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದೆ.

ಅನಾಸ್‌ ಮೊಹಮ್ಮದ್‌ ಯಹ್ಯಾ, ಅಮೋಜ್‌ ಜೇಕಬ್, ಮೊಹಮ್ಮದ್‌ ಅಜ್ಮಲ್‌ ಮತ್ತು ರಾಜೇಶ್‌ ರಮೇಶ್‌ ಅವರನ್ನೊಳಗೊಂಡ ಭಾರತ ಪುರುಷರ 4X400 ಮೀ. ರಿಲೇ ತಂಡವು ಪ್ಯಾರಿಸ್ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದೆ.

ಮಾಜಿ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು ಸೇರಿದಂತೆ ಭಾರತದ ಏಳು ಮಂದಿ ಬ್ಯಾಡ್ಮಿಂಟನ್ ಪಟುಗಳು, ಪ್ಯಾರಿಸ್‌ ಒಲಿಂಪಿಕ್ಸ್‌ನಲ್ಲಿ ಭಾಗವಹಿಸುವ ಅರ್ಹತೆ ಪಡೆದಿದ್ದಾರೆ. ಒಲಿಂಪಿಕ್‌ ಗೇಮ್ಸ್‌ ಅರ್ಹತೆಗೆ ಬೇಕಾದ ರ್‍ಯಾಂಕಿಂಗ್ ಮಾನದಂಡಗಳ ಆಧಾರದಲ್ಲಿ ಅವರಿಗೆ ಅವಕಾಶ ದೊರಕಿದೆ.

ಮಹಿಳಾ ವಿಭಾಗದಲ್ಲಿ ಸಿಂಧು ಮತ್ತು ಪುರುಷರ ವಿಭಾಗದಲ್ಲಿ ಎಚ್‌.ಎಸ್‌.ಪ್ರಣಯ್ ಅವರು ರ‍್ಯಾಂಕಿಂಗ್ ಆಧಾರದಲ್ಲಿ ಅರ್ಹತೆ ಪಡೆಯುವುದು ಈ ಹಿಂದೆಯೇ ಖಚಿತಗೊಂಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT