ಕೋಲ್ಕತ್ತ: ಭಾರತ ಮಹಿಳೆಯರ ಕಾಂಪೌಂಡ್ ಆರ್ಚರಿ ತಂಡ ವಿಶ್ವ ರ‍್ಯಾಂಕಿಂಗ್‌ನಲ್ಲಿ ಐತಿಹಾಸಿಕ ಸಾಧನೆ ಮಾಡಿದೆ. ಇತ್ತೀಚೆಗೆ ಬಿಡುಗಡೆಯಾಗಿರುವ ರ‍್ಯಾಂಕಿಂಗ್ ಪಟ್ಟಿಯಲ್ಲಿ ಭಾರತ ತಂಡ ಅಗ್ರ ಸ್ಥಾನಕ್ಕೇರಿದೆ. ಮೊದಲ ಬಾರಿ ಈ ಸಾಧನೆ ಮಾಡಿದ್ದು ಏಷ್ಯನ್ ಕ್ರೀಡಾಕೂಟಕ್ಕೆ ಸಜ್ಜಾಗುತ್ತಿರುವ ತಂಡ ಇದರಿಂದ ಉತ್ತೇಜನ ಪಡೆದುಕೊಂಡಿದೆ.

ಅಂತಲ್ಯ ಮತ್ತು ಬರ್ಲಿನ್‌ನಲ್ಲಿ ನಡೆದಿದ್ದ ಟೂರ್ನಿಗಳಲ್ಲಿ ಬೆಳ್ಳಿ ಪದಕದ ಸಾಧನೆ ಮಾಡಿದ್ದ ತಂಡ ಒಟ್ಟು 342.6 ಪಾಯಿಂಟ್ ಗಳಿಸಿದೆ. ಪಟ್ಟಿಯಲ್ಲಿ ಎರಡನೇ ಸ್ಥಾನ ಗಳಿಸಿರುವ ಚೀನಾ ತೈಪೆಗಿಂತ ಭಾರತ ತಂಡದ ಖಾತೆಯಲ್ಲಿ ಹೆಚ್ಚುವರಿ ಆರು ಪಾಯಿಂಟ್‌ಗಳು ಇವೆ.

ಜ್ಯೋತಿ ಸುರೇಖ ವೆಣ್ಣಂ ಮತ್ತು ಮುಸ್ಕಾನ್ ಕಿರಾರ್ ಅವರು ಭಾರತ ತಂಡದ ಖಾಯಂ ಸ್ಪರ್ಧಿಗಳು. ಅವರು ವಿಶ್ವಕಪ್‌ನಲ್ಲಿ ಮಿಂಚಿದ್ದರು. ದಿವ್ಯಾ ದಯಾಲ್ ಮತ್ತು ತ್ರಿಶಾ ದೇವ್ ಬರ್ಲಿನ್‌ನಲ್ಲಿ ಗಮನಾರ್ಹ ಸಾಧನೆ ಮಾಡಿದ್ದರು. ರಿಕರ್ವ್ ವಿಭಾಗದಲ್ಲಿ ಈ ಹಿಂದೆ ದೀಪಿಕಾ ಕುಮಾರಿ ಅವರು ವಿಶ್ವ ಕ್ರಮಾಂಕದಲ್ಲಿ ಒಂದನೇ ಸ್ಥಾನ ಗಳಿಸಿ ಗಮನ ಸೆಳೆದಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.