ಪ್ಯಾರಿಸ್: ರಾಷ್ಟ್ರೀಯ ದಾಖಲೆ ಹೊಂದಿರುವ ಪ್ರಿಯಾಂಕಾ ಗೋಸ್ವಾಮಿ ಅವರು ಪ್ಯಾರಿಸ್ ಒಲಿಂಪಿಕ್ಸ್ ಮಹಿಳೆಯರ 20 ಕಿ.ಮೀ. ನಡಿಗೆ ಸ್ಪರ್ಧೆಯಲ್ಲಿ ಕಳಪೆ ಸಾಧನೆಯೊಡನೆ 41ನೇ ಸ್ಥಾನ ಪಡೆದರು. ಪುರುಷರ ವಿಭಾಗದಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದ ವಿಕಾಶ್ ಸಿಂಗ್ ಮತ್ತು ಪರಮ್ಜೀತ್ ಸಿಂಗ್ ಅವರು ಕ್ರಮವಾಗಿ 30 ಮತ್ತು 37ನೇ ಸ್ಥಾನ ಪಡೆದರು.

ಏಷ್ಯನ್ ಬೆಳ್ಳಿ ಪದಕ ವಿಜೇತರಾಗಿರುವ ಪ್ರಿಯಾಂಕಾ ಅವರು 1 ಗಂಟೆ 39 ನಿಮಿಷ 55 ಸೆಕೆಂಡುಗಳಲ್ಲಿ ಗುರಿ ತಲುಪಿದರು. 1 ಗಂಟೆ 29 ನಿಮಿಷ 48 ಸೆಕೆಂಡುಗಳಲ್ಲಿ ಗುರಿ ತಲುಪಿದ್ದು ಈ ಋತುವಿನಲ್ಲಿ ಅವರ ಶ್ರೇಷ್ಠ ಕಾಲಾವಧಿಯಾಗಿತ್ತು. 28 ವರ್ಷ ವಯಸ್ಸಿನ ಅಥ್ಲೀಟ್, ಪ್ಯಾರಿಸ್ನಲ್ಲಿ ಗುರಿ ತಲುಪಲು ಇದಕ್ಕಿಂತ 10 ನಿಮಿಷ ಹೆಚ್ಚಿನ ಸಮಯ ತೆಗೆದುಕೊಂಡರು.

1 ಗಂಟೆ 28 ನಿಮಿಷ 45 ಸೆಕೆಂಡುಗಳಲ್ಲಿ ಗುರಿ ತಲುಪಿದ್ದು ಪ್ರಿಯಾಂಕಾ ಅವರ ಶ್ರೇಷ್ಠ ಸಾಧನೆ.

ಕೇಂದ್ರದ ಮಿಷನ್ ಒಲಿಂಪಿಕ್ ಸೆಲ್ ಅವರಿಗೆ ಕಳೆದ ಡಿಸೆಂಬರ್ನಲ್ಲಿ ಪರ್ವತ ಪ್ರದೇಶಗಳಲ್ಲಿ ತರಬೇತಿ ಪಡೆಯಲು ಅನುಮೋದನೆ ನೀಡಿದ ನಂತರ ಅವರು ಈ ವರ್ಷದ ಆರಂಭದಿಂದ ಆಸ್ಟ್ರೇಲಿಯಾದಲ್ಲಿ ನೆಲೆಸಿದ್ದರು.

ಹಾಲಿ ಏಷ್ಯನ್ ಗೇಮ್ಸ್ ಚಾಂಪಿಯನ್ ಚೀನಾದ ಯಾಂಗ್ ಜಿಯಾವು 1 ಗಂಟೆ 25 ನಿಮಿಷ 54 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು. ವಿಶ್ವ ಚಾಂಪಿಯನ್, ಸ್ಪೇನ್ನ ಮರಿಯಾ ಪರೆಜ್ (1:26:19) ಮತ್ತು ಆಸ್ಟ್ರೇಲಿಯಾದ ಜೆಮಿಮಾ ಮಾಂಟಗ್ (1:26:25) ಕ್ರಮವಾಗಿ ಬೆಳ್ಳಿ ಹಾಗೂ ಕಂಚಿನ ಪದಕ ತಮ್ಮದಾಗಿಸಿಕೊಂಡರು.

ಮಳೆಯಿಂದಾಗಿ ಅರ್ಧ ಗಂಟೆ ತಡವಾಗಿ ಆರಂಭವಾದ ಪುರುಷರ 20 ಕಿ.ಮೀ ನಡಿಗೆ ಸ್ಪರ್ಧೆಯಲ್ಲಿ ಭಾರತದ ವಿಕಾಶ್ ಅವರು 1 ಗಂಟೆ 22 ನಿಮಿಷ 36 ಸೆಕೆಂಡು ಮತ್ತು ಪರಮ್ಜೀತ್ ಸಿಂಗ್ 1 ಗಂಟೆ 23 ನಿಮಿಷ 48 ಸೆಕೆಂಡುಗಳಲ್ಲಿ ಗುರಿ ತಲುಪಿದರು. ಈಕ್ವೆಡಾರ್ನ ಬ್ರಿಯಾನ್ ಡೆನಿಯಲ್ ಪಿಂಟಾಡೊ ಅವರು 1 ಗಂಟೆ 18 ನಿಮಿಷ 55 ಸೆಕೆಂಡುಗಳಲ್ಲಿ ಗುರಿ ತಲುಪಿ ಚಿನ್ನದ ಪದಕ ತಮ್ಮದಾಗಿಸಿಕೊಂಡರು.

ಬ್ರೆಜಿಲ್ನ ಕಿಯೊ ಬಾಂಫಿಮ್ (1:19:09) ಮತ್ತು ಹಾಲಿ ವಿಶ್ವ ಚಾಂಪಿಯನ್, ಸ್ಪೇನ್ನ ಅಲ್ವೆರೊ ಮಾರ್ಟಿನ್ (1:19:11) ಅವರು ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದರು. ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನ ಗೆದ್ದಿದ್ದ ಮಸ್ಸಿಮೊ ಸ್ಟ್ಯಾನೊ ಅವರು (1:19:12) ನಾಲ್ಕನೇಯವರಾಗಿ ಗುರಿ ತಲುಪಿದರು.

ರಾಷ್ಟ್ರೀಯ ದಾಖಲೆ ಹೊಂದಿರುವ ಅಕ್ಷದೀಪ್ ಸಿಂಗ್ ಅವರು ಆರು ಕಿ.ಮೀ ಕ್ರಮಿಸಿದ ನಂತರ ಸ್ಪರ್ಧೆಯಿಂದ ಹಿಂದೆ ಸರಿದರು. ಈ ವೇಳೆ ಕಿಬ್ಬೊಟ್ಟೆ ಹಿಡಿದು ಮುಂದಕ್ಕೆ ಬಾಗಿದ ಅವರು ಅಸ್ವಸ್ಥರಾದಂತೆ ಕಂಡುಬಂದರು.

ಅಕ್ಷದೀಪ್ ಅವರು ಮೂತ್ರನಾಳದ ಸೋಂಕಿನಿಂದಾಗಿ ಕಳೆದ ಎರಡು ದಿನಗಳಿಂದ ಜ್ವರದಿಂದ ಬಳಲುತ್ತಿದ್ದರು ಎಂದು ತಂಡದ ಕೋಚ್ ಪಿಟಿಐಗೆ ತಿಳಿಸಿದ್ದಾರೆ.

2012ರ ಲಂಡನ್ ಕೂಟದಲ್ಲಿ ಕೆ.ಟಿ.ಇರ್ಫಾನ್ ಅವರು 1 ಗಂಟೆ 20 ನಿಮಿಷ 21 ಸೆಕೆಂಡುಗಳಲ್ಲಿ ಗುರಿ ತಲುಪಿದ್ದು ಒಲಿಂಪಿಕ್ಸ್ನಲ್ಲಿ ಭಾರತದ ಶ್ರೇಷ್ಠ ಸಾಧನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.