ನವದೆಹಲಿ: ಬೆಂಗಳೂರಿನ ಈಜುಪಟು ಶ್ರೀಹರಿ ನಟರಾಜ್ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ಅರ್ಹತೆ ಗಳಿಸಿದ್ದಾರೆ.

ಭಾನುವಾರ ರೋಮ್‌ನಲ್ಲಿ ನಡೆದಿದ್ದ ಸೆಟ್ಟೆ ಕೊಲೀ ಟ್ರೋಫಿ ಈಜು ಚಾಂಪಿಯನ್‌ಷಿಪ್‌ನ ಪುರುಷರ 100 ಮೀಟರ್ಸ್ ಬ್ಯಾಕ್‌ಸ್ಟ್ರೋಕ್‌ನಲ್ಲಿ ಅವರು ‘ಎ‘ ದರ್ಜೆಯ ಅರ್ಹತಾ ಸಮಯದಲ್ಲಿ ಗುರಿ ಮುಟ್ಟಿದ್ದರು.

‘ಶ್ರೀಹರಿ ನಟರಾಜ್ ಒಲಿಂಪಿಕ್ಸ್ ಅರ್ಹತಾ ಸಮಯ (53.77 ಸೆಕೆಂಡು)ದಲ್ಲಿಯೇ ಗುರಿ ಮುಟ್ಟಿದ್ದರು. ಅವರ ಸಾಧನೆಯನ್ನು ಕೂಲಂಕಷವಾಗಿ ಪರಿಶೀಲಿಸಿದ ಅಂತರರಾಷ್ಟ್ರೀಯ ಈಜು ಸಂಸ್ಥೆ (ಫಿನಾ) ಒಲಿಂಪಿಕ್ಸ್‌ನಲ್ಲಿ ಸ್ಪರ್ಧಿಸಲು ರಹದಾರಿ ನೀಡಿದೆ‘ ಎಂದು ಭಾರತ ಈಜು ಫೆಡರೇಷನ್ (ಎಸ್‌ಎಫ್‌ಐ) ಬುಧವಾರ ಟ್ವೀಟ್ ಮಾಡಿದೆ.

ಶ್ರೀಹರಿ ಅವರು ಭಾರತದಿಂದ ಟೋಕಿಯೊಗೆ ತೆರಳಲು ಅರ್ಹತೆ ಪಡೆದ ಎರಡನೇ ಈಜುಪಟುವಾಗಿದ್ದಾರೆ. ಸಾಜನ್ ಪ್ರಕಾಶ್ ಕೂಡ ಅರ್ಹತೆ ಗಿಟ್ಟಿಸಿದ್ದರು.

200 ಮೀಟರ್ಸ್ ಬಟರ್‌ಫ್ಲೈ ವಿಭಾಗದಲ್ಲಿ ಒಲಿಂಪಿಕ್ ‘ಎ‘ ದರ್ಜೆಯ ಅರ್ಹತೆ ಗಳಿಸಿದ ಮೊದಲ ಭಾರತೀಯ ಈಜುಪಟುವೆಂಬ ಹೆಗ್ಗಳಿಕಗೆ ಸಾಜನ್ ಪಾತ್ರರಾಗಿದ್ದಾರೆ. ಅವರು 2016ರ ರಿಯೊ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿದ್ದರು.

20 ವರ್ಷದ ಶ್ರೀಹರಿ ಅವರು ಇದೇ ಮೊದಲ ಬಾರಿಗೆ ಒಲಿಂಪಿಕ್ಸ್‌ಗೆ ತೆರಳುತ್ತಿದ್ದಾರೆ. ಅವರು 2018ರ ಕಾಮನ್‌ವೆಲ್ತ್ ಗೇಮ್ಸ್ ಮತ್ತು ಏಷ್ಯನ್ ಗೇಮ್ಸ್ ನಲ್ಲಿ ಸ್ಪರ್ಧಿಸಿದ್ದರು. ಅದೇ ವರ್ಷ ನಡೆದಿದ್ದ ಯೂತ ಒಲಿಂಪಿಕ್ಸ್‌ನಲ್ಲಿಯೂ ಅವರು ಭಾಗವಹಿಸಿದ್ದರು.

ಇದನ್ನೂ ಓದಿ... PV Web Exclusive: ನೋವು ಹೊತ್ತು ನಲಿವ ನೋಡಿದ ಸೆರೆನಾ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.