ಅಹಮದಾಬಾದ್ : ಯು ಮುಂಬಾ ತಂಡ ಪ್ರೊ ಕಬಡ್ಡಿ ಲೀಗ್‌ನಲ್ಲಿ ಶುಕ್ರವಾರ ರೋಚಕ ಜಯ ಸಾಧಿಸಿತು. ಇಲ್ಲಿ ನಡೆದ ಪಂದ್ಯದಲ್ಲಿ ಪಟ್ನಾ ಪೈರೇಟ್ಸ್ ವಿರುದ್ಧ ಮುಂಬಾ 34-30ರಲ್ಲಿ ಗೆದ್ದಿತು.

ಪ್ರದೀಪ್ ನರ್ವಾಲ್ ಅವರ ರೇಡಿಂಗ್ ಮತ್ತು ಹಾದಿ ಒಶ್ಟರೋಕ್ ಅವರ ಟ್ಯಾಕ್ಲಿಂಗ್ ಬಲದಿಂದ ಪಟ್ನಾ ಪೈರೇಟ್ಸ್ ಆರಂಭದಲ್ಲಿ ಮುನ್ನಡೆ ಸಾಧಿಸಿತ್ತು. ಆದರೆ ನಾಲ್ಕನೇ ನಿಮಿಷ ದಲ್ಲಿ ನರ್ವಾಲ್ ಅವರನ್ನು ಸೂಪರ್ ಟ್ಯಾಕಲ್ ಮೂಲಕ ಕೆಡವಿದ ಸಂದೀಪ್ ನರ್ವಾಲ್, ಮುಂಬಾಗೆ 5–5ರ ಸಮಬಲ ಗಳಿಸಿಕೊಟ್ಟರು.

ಮೊದಲಾರ್ಧದ ಮುಕ್ತಾಯಕ್ಕೆ ಮುಂಬಾ ಮುನ್ನಡೆ 22–9 ಆಯಿತು.

ದ್ವಿತೀಯಾರ್ಧದಲ್ಲಿ ಪಂದ್ಯ ರೋಚಕವಾಯಿತು. ಪಟ್ನಾ ಪೈರೇಟ್ಸ್ ತಿರುಗೇಟು ನೀಡಿ ಆರಂಭದಲ್ಲಿ ಕೆಲವು ಪಾಯಿಂಟ್‌ಗಳನ್ನು ಗಳಿಸಿ ಹಿನ್ನಡೆಯನ್ನು ಕುಗ್ಗಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು.

ಮತ್ತೆ ಆಧಿಪತ್ಯ ಸ್ಥಾಪಿಸಿದ ಮುಂಬಾ ಕೊನೆಯ 9 ನಿಮಿಷಗಳು ಬಾಕಿ ಇದ್ದಾಗ 28–21ರ ಮುನ್ನಡೆ ಸಾಧಿಸಿತು. ಕೊನೆಯ 4 ನಿಮಿಷಗಳು ಇದ್ದಾಗ ಪಟ್ನಾ 26–29ರಲ್ಲಿ ಮತ್ತು 2 ನಿಮಿಷ ಇದ್ದಾಗ 28–30ರಲ್ಲಿ ತಿರುಗೇಟು ನೀಡಿತು. ಆದರೂ ಛಲ ಬಿಡದ ಮುಂಬಾ ಪಂದ್ಯ ಗೆದ್ದು ಬೀಗಿತು.

ರೋಹಿತ್ ಬಲಿಯಾನ್ (9 ಪಾಯಿಂಟ್), ಅತುಲ್ ಎಂ.ಎಸ್ (8) ಮತ್ತು ಸಂದೀಪ್ ನರ್ವಾಲ್ (6) ಮುಂಬಾ ಪರ ಮಿಂಚಿದರು. ಪಟ್ನಾ ಪರ ಪ್ರದೀಪ್ ನರ್ವಾಲ್ ಮತ್ತು ಮೊಹಮ್ಮದ್ ಮೊಗಸೊಡ್ಲು ತಲಾ 6 ಪಾಯಿಂಟ್ ಗಳಿಸಿದರು.

ಜೈಪುರ ಜಯಭೇರಿ: ಮತ್ತೊಂದು ಪಂದ್ಯದಲ್ಲಿ ಜೈಪುರ ಪಿಂಕ್ ಪ್ಯಾಂಥರ್ಸ್ ತಂಡವು ಗುಜರಾತ್ ಫಾರ್ಚೂನ್ ಜೈಂಟ್ಸ್ ವಿರುದ್ಧ 22–19ರಿಂದ ಗೆದ್ದಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.