ಬೆಂಗಳೂರು: ಕರ್ನಾಟಕದ ಶ್ರೀಹರಿ ನಟರಾಜ್ ಮತ್ತು ಧೀನಿಧಿ ದೇಸಿಂಗು ಅವರು ಗೋವಾದ ಮಡಗಾಂವ್ನಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡೆಗಳ ಈಜು ಸ್ಪರ್ಧೆಯಲ್ಲಿ ಕ್ರಮವಾಗಿ ಪುರುಷರ ಮತ್ತು ಮಹಿಳೆಯರ 100 ಮೀ. ಫ್ರೀಸ್ಟೈಲ್ನಲ್ಲಿ ಕೂಟ ದಾಖಲೆಯೊಡನೆ ಸ್ವರ್ಣ ಗೆದ್ದುಕೊಂಡರು. ಈಜುಕೊಳದಲ್ಲಿ ಶನಿವಾರವೂ ಕರ್ನಾಟಕದ ಪಾರಮ್ಯ ಮುಂದುವರಿದಿದ್ದು, ಮಿಕ್ಸೆಡ್ ರಿಲೇಯಲ್ಲೂ ಕರ್ನಾಟಕ ತಂಡ ದಾಖಲೆ ಸ್ಥಾಪಿಸಿತು.

ಅಂತರರಾಷ್ಟ್ರೀಯ ಈಜುಪಟು ಶ್ರೀಹರಿ 100 ಮೀ. ಫ್ರೀಸ್ಟೈಲ್ ಸ್ಪರ್ಧೆಯನ್ನು 49.97 ಸೆಕೆಂಡುಗಳಲ್ಲಿ ಪೂರೈಸಿ, ತಮ್ಮದೇ ಹೆಸರಿನಲ್ಲಿದ್ದ ದಾಖಲೆಯನ್ನು (ಕಳೆದ ವರ್ಷ, 50.41 ಸೆ.) ಉತ್ತಮಪಡಿಸಿಕೊಂಡರು. ಸರ್ವಿಸಸ್ನ ಆನಂದ್ ಎ.ಎಸ್. (51.37 ಸೆ.) ಮತ್ತು ದೆಹಲಿಯ ವಿಶಾಲ್ ಗ್ರೇವಾಲ್ (51.48 ಸೆ.) ಕ್ರಮವಾಗಿ ಬೆಳ್ಳಿ ಮತ್ತು ಕಂಚಿನ ಪದಕ ಪಡೆದರು.

ಧೀನಿಧಿ ಮಹಿಳೆಯರ ವಿಭಾಗದಲ್ಲಿ ಇದೇ ಅಂತರವನ್ನು 57.87 ಸೆ.ಗಳಲ್ಲಿ ಪೂರೈಸಿ, ಹರಿಯಾಣದ ಶಿವಾಣಿ ಕಟಾರಿಯಾ ಸ್ಥಾಪಿಸಿದ್ದ ದಾಖಲೆಯನ್ನು (2015ರಲ್ಲಿ 58.34 ಸೆ.) ಮುಳುಗಿಸಿದರು. ಅಸ್ಸಾಮ್ನ ಶಿವಾಂಗಿ ಶರ್ಮಾ (58.07 ಸೆ.) ಎರಡನೇ ಮತ್ತು ಬಂಗಾಳದ ಜಾಹ್ನವಿ ಚೌಧರಿ (58.37 ಸೆ) ಮೂರನೇ ಸ್ಥಾನ ಪಡೆದರು. ಕರ್ನಾಟಕದ ನೀನಾ ವೆಂಕಟೇಶ್ (59.42 ಸೆ.) ನಾಲ್ಕನೇ ಸ್ಥಾನ ಗಳಿಸಿದರು.

ಶ್ರೀಹರಿ ನಟರಾಜ್, ವಿದಿತ್ ಎಸ್.ಶಂಕರ್, ನೀನಾ ವೆಂಕಟೇಶ್, ಧೀನಿಧಿ ದೇಸಿಂಗು ಅವರಿದ್ದ ತಂಡ 4x100 ಮೀ. ಮಿಶ್ರ ರಿಲೆಯಲ್ಲೂ ಕೂಟ ದಾಖಲೆಯೊಡನೆ (ಕಾಲ: 4ನಿ.03.80ಸೆ.) ಚಿನ್ನ ಗೆದ್ದಿತು. ರಾಜ್ಕೋಟ್ನಲ್ಲಿ ಕಳೆದ ವರ್ಷ ತಮಿಳುನಾಡು ತಂಡ ಈ ಹಿಂದಿನ ದಾಖಲೆ (4ನಿ.11.08 ಸೆ.) ಸ್ಥಾಪಿಸಿತ್ತು.

100 ಮೀ. ಬ್ರೆಸ್ಟ್ ಸ್ಟ್ರೋಕ್ನಲ್ಲಿ ಕೇರಳದ ಹರ್ಷಿತಾ ಜಯರಾಮ್ 1ನಿ.13.89 ಸೆ.ಗಳಲ್ಲಿ ಅಂತರ ಕ್ರಮಿಸಿ ನೂತನ ದಾಖಲೆ ಸ್ಥಾಪಿಸಿದರು. ಅವರಿಗೆ ತೀವ್ರ ಪೈಪೋಟಿ ನೀಡಿದ ಕರ್ನಾಟಕದ ಲಿನೇಶಾ ಎ.ಕೆ. (1ನಿ.13.99 ಸೆ.) ಬೆಳ್ಳಿಯ ಪದಕ ಗೆದ್ದುಕೊಂಡರು. ಹಳೆಯ ದಾಖಲೆ ಪಂಜಾಬ್ನ ಚಾಹತ್ ಅರೋರಾ (2022ರಲ್ಲಿ 1:14.42) ಹೆಸರಿನಲ್ಲಿತ್ತು. ಕರ್ನಾಟಕದ ಮಾನವಿ ವರ್ಮಾ (1:15.38) ನಾಲ್ಕನೇ ಸ್ಥಾನಕ್ಕೆ ಸರಿದರು. ಇದೇ ಸ್ಪರ್ಧೆಯ ಪುರುಷರ ವಿಭಾಗದಲ್ಲಿ ಕರ್ನಾಟಕದ ಸರ್ವಿಸಸ್ನ ಲಿಖಿತ್ ಎಸ್.ಪಿ. (1:02.25) ಚಿನ್ನ ಗೆದ್ದರು. ಕರ್ನಾಟಕದ ವಿದಿತ್ ಎಸ್.ಶಂಕರ್ (1:04.89) ನಾಲ್ಕನೇ ಸ್ಥಾನ ಪಡೆದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.