ಟೋಕಿಯೊ: ‘ಟೋಕಿಯೊ ಒಲಿಂಪಿಕ್ಸ್ನಲ್ಲಿ ಚಿನ್ನದ ಪದಕ ಗೆಲ್ಲುವ ಕನಸು ನನ್ನನ್ನು ಈಗಲೂ ಕಾಡುತ್ತಿದೆ. ಆದರೆ ಅದು ನನಸಾಗುವ ಕುರಿತು ಸಂದೇಹ ಉಂಟಾಗುತ್ತಿದೆ’ ಎಂದು ವಿಶ್ವದ ಅಗ್ರಮಾನ್ಯ ಬ್ಯಾಡ್ಮಿಂಟನ್ ಆಟಗಾರ ಜಪಾನ್ನ ಕೆಂಟೊ ಮೊಮೊಟಾ ಆತಂಕ ವ್ಯಕ್ತಪಡಿಸಿದ್ದಾರೆ.

ಅಪಫಾತವೊಂದರಲ್ಲಿ ಗಾಯಗೊಂಡಿರುವ ಮೊಮೊಟಾ, ‘ವೃತ್ತಿಬದುಕು ಅಂತ್ಯವಾಗುವ ಭೀತಿ ಎದುರಿಸುತ್ತಿದ್ದೇನೆ’ ಯಾವಾಗ ಸಂಪೂರ್ಣ ಗುಣಮುಖವಾಗುತ್ತೇನೋ ಗೊತ್ತಿಲ್ಲ’ ಎಂದು ಹೇಳಿದ್ದಾರೆ.

ಜನವರಿಯಲ್ಲಿ ನಡೆದ ಮಲೇಷ್ಯಾ ಮಾಸ್ಟರ್ಸ್ ಟೂರ್ನಿಯಲ್ಲಿ ಪ್ರಶಸ್ತಿ ಗೆದ್ದಿದ್ದ ಮೊಮೊಟಾ, ಕ್ವಾಲಾಲಂಪುರದ ವಿಮಾನ ನಿಲ್ದಾಣ ತಲುಪಲು ವ್ಯಾನ್ನಲ್ಲಿ ತೆರಳುತ್ತಿದ್ದರು. ಈ ವೇಳೆ ಅಪಘಾತ ಸಂಭವಿಸಿ ವ್ಯಾನ್ ಚಾಲಕ ಮೃತಪಟ್ಟಿದ್ದ. ಮೊಮೊಟಾ ಅವರ ಮೂಳೆ ಮುರಿದಿತ್ತು. ಅಂದು‘ನನ್ನ ಆತ್ಮವಿಶ್ವಾಸ ಸಂಪೂರ್ಣ ಕುಸಿದಿತ್ತು’ ಎಂದು ಅವರು ಹೇಳಿದ್ದಾರೆ. ಈಗ ಆಲ್ ಇಂಗ್ಲೆಂಡ್ ಚಾಂಪಿಯನ್ಷಿಪ್ಗೆ ಮರಳುವ ಉತ್ಸುಕತೆಯಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.