ನೈರೋಬಿ: ಕೆನ್ಯಾದ ದೂರದ ಓಟಗಾರ, 81 ದಿನಗಳಲ್ಲಿ ನಾಲ್ಕು ವಿಶ್ವ ದಾಖಲೆಗಳನ್ನು ನಿರ್ಮಿಸಿದ್ದ ಹೆನ್ರಿ ರೋನೊ (72) ಅವರು ನಿಧನರಾದರು ಎಂದು ಅಥ್ಲೆಟಿಕ್ಸ್ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.

ಅಮೆರಿಕದ ವಾಷಿಂಗ್ಟನ್ ಸ್ಟೇಟ್ ಯೂನಿವರ್ಸಿಟಿಯಲ್ಲಿ ವಿದ್ಯಾರ್ಥಿಯಾಗಿದ್ದ ರೋನೊ 1978ರಲ್ಲಿ 3,000 ಮೀಟರ್, 5,000 ಮೀಟರ್ ಮತ್ತು 3,000 ಮೀಟರ್ ಸ್ಟೀಪಲ್‌ಚೇಸ್ ವಿಭಾಗಗಳಲ್ಲಿ ನಾಲ್ಕು ವಿಶ್ವ ದಾಖಲೆಗಳೊಂದಿಗೆ ಮಿಂಚಿದ್ದರು.

‘ಕೆನ್ಯಾದ ಅತ್ಯುತ್ತಮ ದೂರದ ಓಟಗಾರರಲ್ಲಿ ರೋನೊ ಒಬ್ಬರು.

ಆದರೆ ಅವರು 1980ರ ಒಲಿಂಪಿಕ್ಸ್‌ನಲ್ಲಿ ಭಾಗವಹಿಸಿರಲಿಲ್ಲ. ಎರಡು ಪದಕಗಳನ್ನು ಗೆಲ್ಲುತ್ತಿದ್ದರು. ಅನಾರೋಗ್ಯದ ಕಾರಣ ಹತ್ತು ದಿನಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು’ ಎಂದು ಎರಡು ಬಾರಿ ಒಲಿಂಪಿಕ್ ಚಿನ್ನದ ಪದಕ ವಿಜೇತ ಕಿಪ್ಚೋಜ್ ಕೀನೊ ತಿಳಿಸಿದ್ದಾರೆ .

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.