ಬೆಂಗಳೂರು: ರಾಜ್ಯ ಬಿಲಿಯರ್ಡ್ಸ್ ಸಂಸ್ಥೆಯ (ಕೆಎಸ್‌ಬಿಎ) ’ಬಿ‘ ಮತ್ತು ’ಡಿ‘ ತಂಡಗಳು ಎಂ.ಚೆನ್ನಯ್ಯಪ್ಪನ್ ಸ್ಮಾರಕ ಅಂತರ ಕ್ಲಬ್ ಟೂರ್ನಿಯಲ್ಲಿ ಬುಧವಾರ ಜಯ ಗಳಿಸಿದವು.

ಆತಿಥೇಯ ಕೆಎಸ್‌ಬಿಎ ’ಬಿ‘ ತಂಡ 2–1ರಲ್ಲಿ ಬೌರಿಂಗ್ ಸಂಸ್ಥೆಯ ತಂಡವನ್ನು ಮಣಿಸಿತು. ಮೊದಲ ಹಣಾಹಣಿಯಲ್ಲಿ ಎಂ.ಎಲ್.ಲಕ್ಷ್ಮಣ್ 50–100ರಲ್ಲಿ ಅರ್ಜುನ್ ಮೆಹ್ತಾ ಎದುರು ಸೋತು ನಿರಾಸೆ ಮೂಡಿಸಿದರು. ಆದರೆ ಸತೀಶ್ ಚಾಬ್ರಿಯಾ ಮತ್ತು ಜಿ.ಕಿಶೋರ್ ಅವರು ಅಮೋಘ ಆಟವಾಡಿ ತಂಡಕ್ಕೆ ಜಯ ತಂದುಕೊಟ್ಟರು.

ಸತೀಶ್ 100–0ಯಿಂದ ಕುಶಾಲ್ ವಿರುದ್ಧ ಜಯ ಗಳಿಸಿದರೆ ಕಿಶೋರ್ 100–30ರಲ್ಲಿ ಬ್ರಿಜೇಶ್ ವಿರುದ್ಧ ಗೆದ್ದರು. ಕೆಎಸ್‌ಬಿಎ ’ಡಿ‘ ತಂಡ ಬೆಂಗಳೂರು ಕ್ಲಬ್ ಎದುರು 2–1ರಲ್ಲಿ ಜಯ ಸಾಧಿಸಿತು. ಮೊದಲ ಹಣಾಹಣಿಯಲ್ಲಿ ಮಯಾಂಕ್ 90–100ರಲ್ಲಿ ನೀರವ್‌ಗೆ ಮಣಿದರೆ ಚಿತ್ರಾ ಎಂ 100–0ಯಿಂದ ಸುಹೇಲ್ ಅವರನ್ನೂ ಸಾಯಿರಾಮ್ 100–92ರಲ್ಲಿ ನೆವಿಲ್ ಅವರನ್ನೂ ಸೋಲಿಸಿದರು.

ಕೆಎಸ್‌ಸಿಎ ಮತ್ತು ಕೆಎಸ್‌ಬಿಎ ಮಹಿಳಾ ತಂಡಗಳ ನಡುವಿನ ಪಂದ್ಯದಲ್ಲಿ ಕೆಎಸ್‌ಸಿಎ 2–1ರಲ್ಲಿ ಜಯ ಗಳಿಸಿತು. ಇಂದಿರಾ ಗೌಡಗೆ ಕಮಲೇಶ್ 57–100ರಲ್ಲಿ ಮಣಿದರು. ನಿಹಾಲ್ 100–57ರಲ್ಲಿ ವರ್ಷಾ ಸಂಜೀವ್ ಎದುರು ಮತ್ತು ಸಂತೋಷ್ 100–28ರಲ್ಲಿ ಆರಾಧನಾ ನಾಯಕ್ ಅವರನ್ನು ಮಣಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.