ಕ್ವಾಲಾಲಂಪುರ: ಐದನೇ ಶ್ರೇಯಾಂಕದ ಪಿ.ವಿ. ಸಿಂಧು ಮಲೇಷ್ಯಾ ಓಪನ್ ಮಾಸ್ಟರ್ಸ್ ಸೂಪರ್ 500 ಬ್ಯಾಡ್ಮಿಂಟನ್ ಟೂರ್ನಿಯ ಮಹಿಳಾ ಸಿಂಗಲ್ಸ್ನಲ್ಲಿ ಕೊರಿಯಾದ ಸಿಮ್ ಯು ಜಿನ್ ಅವರನ್ನು ಮೂರು ಗೇಮ್ಗಳ ಹೋರಾಟದಲ್ಲಿ ಮಣಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ವಿರಾಮದ ನಂತರ ಪುನರಾಗಮನ ಮಾಡಿರುವ ವಿಶ್ವದ 15ನೇ ಕ್ರಮಾಂಕದ ಸಿಂಧು ಅವರಿಗೆ ಎರಡನೇ ಸುತ್ತಿನ ಪಂದ್ಯವನ್ನು 21-13, 12-21, 21-14 ಅಂತರದಲ್ಲಿ ಗೆದ್ದುಕೊಳ್ಳಲು 59 ನಿಮಿಷ ಬೇಕಾಯಿತು.

ಆರಂಭಿಕ ಹಿನ್ನಡೆಯಿಂದ ಚೇತರಿಸಿಕೊಂಡ ಭಾರತದ ಸಿಂಧು ನಿಖರ ಆಟದ ಮೂಲಕ ಮೊದಲ ಆಟದಲ್ಲಿ ಮೇಲುಗೈ ಸಾಧಿಸಿದರು. ಆದರೆ, ಎರಡನೇ ಗೇಮ್ನಲ್ಲಿ ವಿಶ್ವದ 34ನೇ ರ್ಯಾಂಕ್ನ ಜಿನ್ ಪ್ರತಿರೋಧ ತೋರಿ, ಸ್ಕೋರ್ ಅನ್ನು ಸಮಬಲಗೊಳಿಸಿದರು. ನಿರ್ಣಾಯಕ ಆಟದಲ್ಲಿ ಆರಂಭದಿಂದಲೇ ಮುನ್ನಡೆ ಕಾಯ್ದುಕೊಂಡ ಸಿಂಧು ಗೆಲುವು ಸಾಧಿಸಿದರು.

ಮಾಜಿ ವಿಶ್ವ ಚಾಂಪಿಯನ್ ಸಿಂಧು ಎಂಟರ ಘಟ್ಟದ ಪಂದ್ಯದಲ್ಲಿ ಅಗ್ರ ಶ್ರೇಯಾಂಕದ ಹಾನ್ ಯುವೆ (ಚೀನಾ) ಅವರನ್ನು ಎದುರಿಸಲಿದ್ದಾರೆ. ವಿಶ್ವ ರ್ಯಾಂಕಿಂಗ್ನಲ್ಲಿ 6ನೇ ಸ್ಥಾನದಲ್ಲಿರುವ ಹಾನ್ ವಿರುದ್ಧ ಸಿಂಧು 5–1ರ ಗೆಲುವಿನ ದಾಖಲೆ ಹೊಂದಿದ್ದಾರೆ.

ಯುವ ಆಟಗಾರ್ತಿ ಅಶ್ಮಿತಾ ಚಾಲಿಹಾ ಮೂರನೇ ಶ್ರೇಯಾಂಕದ ಅಮೆರಿಕದ ಬೀವೆನ್ ಜಾಂಗ್ ಅವರಿಗೆ ಆಘಾತ ನೀಡಿದರು. ವಿಶ್ವದ 53ನೇ ರ್ಯಾಂಕ್ನ ಅಶ್ಮಿತಾ 21–19, 16–21, 21–12ರಿಂದ 10ನೇ ಕ್ರಮಾಂಕದ ಆಟಗಾರ್ತಿಯನ್ನು ಹಿಮ್ಮೆಟ್ಟಿಸಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದರು.

ಅಶ್ಮಿತಾ ಎರಡನೇ ಬಾರಿ ಕ್ವಾರ್ಟರ್ ಫೈನಲ್ ಪ್ರವೇಶಿಸಿದ್ದಾರೆ. ಗುವಾಹಟಿಯ ಈ ಆಟಗಾರ್ತಿ ಮುಂದಿನ ಪಂದ್ಯದಲ್ಲಿ ಆರನೇ ಶ್ರೇಯಾಂಕದ ಜಾಂಗ್ ಯಿ ಮಾನ್ (ಚೀನಾ) ವಿರುದ್ಧ ಸೆಣಸಲಿದ್ದಾರೆ.

ಪುರುಷರ ಸಿಂಗಲ್ಸ್ನಲ್ಲಿ ಕಣದಲ್ಲಿ ಉಳಿದಿದ್ದ ಭಾರತದ ಏಕೈಕ ಸ್ಪರ್ಧಿ ಕಿರಣ್ ಜಾರ್ಜ್ ನಿರಾಸೆ ಮೂಡಿಸಿದರು. ಅವರು ಎರಡನೇ ಸುತ್ತಿನ ಪಂದ್ಯದಲ್ಲಿ 13–21, 18–21ರಿಂದ ಐದನೇ ಶ್ರೇಯಾಂಕದ ಲೀ ಝಿ ಜಿಯಾ (ಮಲೇಷ್ಯಾ) ಅವರಿಗೆ ಶರಣಾದರು.

ಟ್ರಿಸಾ ಜೋಳಿ ಮತ್ತು ಗಾಯತ್ರಿ ಗೋಪಿಚಂದ್ ಜೋಡಿಯೂ ಮಹಿಳೆಯರ ಡಬಲ್ಸ್ನ ಎರಡನೇ ಸುತ್ತಿನಲ್ಲಿ ಮುಗ್ಗರಿಸಿತು. ಏಳನೇ ಶ್ರೇಯಾಂಕದ ಭಾರತದ ಆಟಗಾರ್ತಿಯರು 18–21, 22–20, 14–21ರಿಂದ ಚೀನಾ ತೈಪೆಯ ಸುಂಗ್ ಶುಯೋ ಯುನ್ ಮತ್ತು ಯು ಚಿಯೆನ್-ಹುಯಿ ಅವರಿಗೆ ತಲೆಬಾಗಿದರು.

ಭಾರತದ ಮತ್ತೊಂದು ಜೋಡಿ ಸಿಮ್ರಾನ್ ಸಿಂಗ್– ರಿತಿಕಾ ಠಕ್ಕರ್ 17-21, 11–21ರಿಂದ ಎರಡನೇ ಶ್ರೇಯಾಂಕದ ಮಲೇಷ್ಯಾದ ಪರ್ಲಿ ಟಾನ್ ಮತ್ತು ಥಿನಾ ಮುರಳೀಧರನ್ ಅವರಿಗೆ ಮಣಿಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.