ತುಮಕೂರು: ರಾಜ್ಯದ ಅಮೋಘ್ ಬಿಶ್ಟ್ ಮತ್ತು ಅಂಜನಾ ಎ ಅವರು ಇಲ್ಲಿ ನಡೆಯುತ್ತಿರುವ ಏಳು ವರ್ಷದೊಳಗಿವನರ ರಾಷ್ಟ್ರೀಯ ಚೆಸ್ ಚಾಂಪಿಯನ್ಷಿಪ್ನ ಬಾಲಕರ ಮತ್ತು ಬಾಲಕಿಯರ ವಿಭಾಗದಲ್ಲಿ ಮುನ್ನಡೆ ಉಳಿಸಿಕೊಂಡರು.

ಬಂಡಿಮನೆ ಕಲ್ಯಾಣ ಮಂಟಪದಲ್ಲಿ ನಡೆಯುತ್ತಿರುವ ಚಾಂಪಿಯನ್ಷಿಪ್ನಲ್ಲಿ ಸೋಮವಾರ ನಡೆದ 10ನೇ ಸುತ್ತಿನಲ್ಲಿ ಅಮೋಘ್, ಆಯುಷ್ಮಾನ್ ಮೊಹಂತಿ ವಿರುದ್ಧ ಜಯ ಗಳಿಸಿದ. ಈ ಮೂಲಕ ಒಟ್ಟು ಪಾಯಿಂಟ್ಗಳನ್ನು 9.5ಕ್ಕೆ ಏರಿಸಿಕೊಂಡ.

ಮಧ್ಯಪ್ರದೇಶದ ಇಶಾನ್ ಸಿಂಗ್ ಖನೂಜ 8.5 ಪಾಯಿಂಟ್ ಗಳಿಸಿದ್ದಾನೆ. ಸೋಮವಾರ ಈತ ಗೋಕುಲ್ ಜಿ ವಿರುದ್ಧ ಗೆಲುವು ದಾಖಲಿಸಿದ. ಜಯವರ್ಧನ್ ಎದುರು ಸೋತ ಎತನ್ ವಾಜ್ ಬಳಿ ಎಂಟು ಪಾಯಿಂಟ್ಗಳು ಇವೆ. ಅಮನ್ ಜಾರ್ಜ್ ಥಾಮಸ್ ಮತ್ತು ಜ್ವಾಲ್ ಸೌರಿನ್ ಪಟೇಲ್ ಡ್ರಾ ಸಾಧಿಸಿದರು. ಇವರ ಬಳಿ ತಲಾ ಏಳೂವರೆ ಪಾಯಿಂಟ್ಗಳು ಇವೆ.

ಅಂಜನಾ ಎ ಸೋಮವಾರ ಕರ್ನಾಟಕದ ಸಾರಾ ಎದುರು ಗೆದ್ದು ಒಟ್ಟು ಪಾಯಿಂಟ್ ಸಂಖ್ಯೆಯನ್ನು ಒಂಬತ್ತಕ್ಕೆ ಏರಿಸಿಕೊಂಡಳು. ಕರ್ನಾಟಕದ ನವ್ಯಶ್ರೀ ಎದುರು ಗೆದ್ದ ಕೊಲಗಟ್ಲ ಅಲನಾ ಮೀನಾಕ್ಷಿ ಬಳಿ ಒಂಬತ್ತು ಪಾಯಿಂಟ್ಗಳು ಇದ್ದು ಭವ್ಯಾ ಜೋಶಿ ಎದುರು ಜಯ ಗಳಿಸಿದ ಲಕ್ಷಣ ಸುಬ್ರಹ್ಮಣ್ಯನ್ ಬಳಿ ಕೂಡ ಇಷ್ಟೇ ಪಾಯಿಂಟ್ಗಳು ಇವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.