ಪ್ಯಾರಿಸ್: ವಿಶ್ವದ ಮಾಜಿ ಅಗ್ರಕ್ರಮಾಂಕದ ಬಾಕ್ಸರ್, ಭಾರತದ ಅಮಿತ್ ಪಂಘಲ್ ಅವರು ಪ್ಯಾರಿಸ್ ಒಲಿಂಪಿಕ್ಸ್ನಿಂದ ಹೊರಬಿದ್ದರು. ಮಂಗಳವಾರ ನಡೆದ ಪುರುಷರ 51 ಕೆ.ಜಿ ವಿಭಾಗದ ಪ್ರಿಕ್ವಾರ್ಟರ್ಫೈನಲ್ನಲ್ಲಿ ಪಂಘಲ್ ಅವರು 1–4 ರಿಂದ ಪ್ಯಾಟ್ರಿಕ್ ಚಿನ್ಯೆಂಬ (ಜಾಂಬಿಯಾ) ವಿರುದ್ದ ಸೋಲನುಭವಿಸಿದರು.

ಮೊದಲ ಸುತ್ತಿನಲ್ಲಿ ಭಾರತದ ಬಾಕ್ಸರ್ಗೆ ಬೈ ದೊರಕಿತ್ತು. 2019ರ ವಿಶ್ವ ಚಾಂಪಿಯನ್ಷಿಪ್ ಬೆಳ್ಳಿ ಪದಕ ವಿಜೇತ ಪಂಘಲ್ ಮೇಲೆ ಚಿನ್ಯೆಂಬ ಅವರು ಆರಂಭದ ಸುತ್ತಿನಲ್ಲೇ ಒತ್ತಡ ಹೇರಿದರು. ಜಾಂಬಿಯಾದ ಬಾಕ್ಸರ್, ಆಫ್ರಿಕಾ ಕ್ರೀಡೆಗಳ ಹಾಲಿ ಚಾಂಪಿಯನ್ ಕೂಡ.

ಪಂಘಲ್ ರಕ್ಷಣಾತ್ಮಕ ಆಟದ ಮೊರೆಹೋಗಿದ್ದರ ಪರಿಣಾಮ, ಮೊದಲ ಮೂರು ನಿಮಿಷ ಮೂರನೇ ಶ್ರೇಯಾಂಕದ ಚಿನ್ಯೆಂಬಾ ಆಕ್ರಮಣಕ್ಕೆ ಒತ್ತು ನೀಡಿದರು.

ಪಂಘಲ್ ಎರಡನೇ ಸುತ್ತಿನ ಆರಂಭದಿಂದಲೇ ಆಕ್ರಮಣಕಾರಿ ಆಟಕ್ಕೆ ಮುಂದಾದರೂ, ಸಮರ್ಪಕವಾಗಿ ಪ್ರಹಾರಗಳನ್ನು ನಡೆಸುವಲ್ಲಿ ಎಡವಿದರು. ಹೀಗಾಗಿ ಚಿನ್ಯೆಂಬಾ ಈ ಸುತ್ತಿನಲ್ಲಿ 3–2ರಿಂದ ಗೆಲುವು ಸಾಧಿಸಿದರು.

ಕೊನೆಯ ಮೂರು ನಿಮಿಷ ಇಬ್ಬರೂ ಪರಸ್ಪರ ಪಂಚ್ಗಳನ್ನು ಮಾಡಿದ್ದು, ಪಂಘಲ್ ಒತ್ತಡ ಹೇರಲು ಯತ್ನಿಸಿದರು. ಆದರೆ ತೀರ್ಪುಗಾರರ ಗಮನ ಸೆಳೆಯುವಲ್ಲಿ ಸಫಲರಾಗಲಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.