ಪ್ಯಾರಿಸ್: ಫ್ರಾನ್ಸ್‌ನ ಪ್ಯಾರಿಸ್‌ನಲ್ಲಿ ಇಂದಿನಿಂದ ಆರಂಭವಾಗಲಿರುವ ಪ್ಯಾರಾಲಿಂಪಿಕ್ಸ್ ವೀಕ್ಷಿಸಲು 20 ಲಕ್ಷ ಜನ ಟಿಕೆಟ್ ಕಾಯ್ದಿರಿಸಿದ್ದಾರೆ ಎಂದು ಆಯೋಜಕರು ತಿಳಿಸಿದ್ದಾರೆ.

ಈ ಕುರಿತು ಹೇಳಿಕೆ ಬಿಡುಗಡೆ ಮಾಡಿರುವ ಆಯೋಜಕರು, ‘ಪ್ಯಾರಾಲಿಂಪಿಕ್ಸ್‌ನ ವೀಕ್ಷಣೆಗೆ ಮಾರಾಟವಾಗಿರುವ 20 ಲಕ್ಷ ಟಿಕೆಟ್‌ನಲ್ಲಿ, ಈ ಒಂದು ತಿಂಗಳಲ್ಲಿ ಮಾರಾಟವಾಗಿದ್ದು ಹತ್ತು ಲಕ್ಷ. ಇನ್ನೂ 5 ಲಕ್ಷ ಟಿಕೆಟ್‌ಗಳು ಬಾಕಿ ಇವೆ. 2012ರ ಲಂಡನ್ ಒಲಿಂಪಿಕ್ಸ್‌ನಲ್ಲಿ 27 ಲಕ್ಷ ಟಿಕೆಟ್‌ಗಳು (ಶೇ 97ರಷ್ಟು) ಟಿಕೆಟ್‌ಗಳು ಮಾರಾಟವಾಗಿದ್ದವು’ ಎಂದಿದ್ದಾರೆ.

2008ರ ಬೀಜಿಂಗ್ ಒಲಿಂಪಿಕ್ಸ್‌ನಲ್ಲಿ 18.2 ಲಕ್ಷ ಟಿಕೆಟ್ ಮಾರಾಟವಾಗಿತ್ತು. ಇದರಲ್ಲಿ ಆಯೋಜಕರು 16.2 ಲಕ್ಷ ಟಿಕೆಟ್‌ಗಳನ್ನು ಶಾಲೆಗಳಿಗೆ ನೀಡಿದ್ದರು. 2016ರ ರಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ 21 ಲಕ್ಷ ಟಿಕೆಟ್‌ಗಳು ಮಾರಾಟವಾಗಿದ್ದವು. ಎಂದು ಅಂತರರಾಷ್ಟ್ರೀಯ ಪ್ಯಾರಾಲಿಂಪಿಕ್ಸ್ ಸಮಿತಿಯ ವರದಿಯಲ್ಲಿ ಹೇಳಲಾಗಿದೆ.

‘ಈ ಬಾರಿ ಮುದ್ರಿಸಿದ ಅಷ್ಟೂ ಟಿಕೆಟ್‌ಗಳು ಮಾರಾಟವಾಗಲಿವೆ. ಕೊನೆಯ ದಿನ ಅಥವಾ ಕೊನೆ ಗಂಟೆಯಲ್ಲೂ ಟಿಕೆಟ್‌ಗಳು ಮಾರಾಟವಾದ ಉದಾಹರಣೆಗಳಿವೆ. ಹೀಗಾಗಿ ಅಂತಿಮವಾಗಿ ಎಷ್ಟು ಎಂಬುದು ಕ್ರೀಡಾಕೂಟದ ಕೊನೆಯ ದಿನವೇ ತಿಳಿಯಲಿದೆ’ ಎಂದು ಪ್ಯಾರಿಸ್ 2024ರ ಅಧ್ಯಕ್ಷ ಟೋನಿ ಎಸ್ತಾಂಗವೆಟ್ ಹೇಳಿದ್ದಾರೆ.

ಈ ಬಾರಿಯ ಪ್ಯಾರಾಲಿಂಪಿಕ್ಸ್‌ನ ಉದ್ಘಾಟನೆ ಕ್ರೀಡಾಂಗಣದ ಹೊರಗೆ ಬುಧವಾರ ನಡೆಯಲಿದೆ ಎಂದು ಆಯೋಜಕರು ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.