ಹೈದರಾಬಾದ್: ನವೀನ್ ಕುಮಾರ್ ಅವರ ಸೊಗಸಾದ ಆಟದ ನೆರವಿನಿಂದ ದಬಾಂಗ್ ಡೆಲ್ಲಿ ತಂಡ ಪ್ರೊ ಕಬಡ್ಡಿ ಲೀಗ್ನಲ್ಲಿ ‘ಪ್ಲೇ ಆಫ್’ಗೆ ಪ್ರವೇಶಿಸಿತು.

ದಬಾಂಗ್ ತಂಡ ಪ್ಲೇ ಆಫ್ಗೆ ಅರ್ಹತೆ ಪಡೆಯಬೇಕಾದರೆ ಕೊನೆಯ ಲೀಗ್ ಪಂದ್ಯದಲ್ಲಿ ಗೆಲುವು ಅಥವಾ ‘ಟೈ’ ಸಾಧಿಸಬೇಕಿತ್ತು. ಗಚಿಬೌಲಿ ಒಳಾಂಗಣ ಕ್ರೀಡಾಂಗಣದಲ್ಲಿ ಗುರುವಾರ ನಡೆದ ಪಂದ್ಯದಲ್ಲಿ ಡೆಲ್ಲಿಯ ತಂಡ ಬೆಂಗಾಲ್ ವಾರಿಯರ್ಸ್ ಜತೆ 46–46 ರಲ್ಲಿ ‘ಟೈ’ ಮಾಡಿಕೊಂಡಿತು. ಈ ಮೂಲಕ ಒಟ್ಟು 66 ಪಾಯಿಂಟ್ಸ್ಗಳೊಂದಿಗೆ ಆರನೇ ತಂಡವಾಗಿ ‘ಪ್ಲೇ ಆಫ್’ ಪ್ರವೇಶಿಸಿತು.

16 ಪಾಯಿಂಟ್ಸ್ ಗಳಿಸಿದ ನವೀನ್ ಅವರು ದಬಾಂಗ್ ತಂಡದ ನೆರವಿಗೆ ನಿಂತರು. ವಾರಿಯರ್ಸ್ ತಂಡದ ಮಣಿಂದರ್ ಸಿಂಗ್ 18 ಪಾಯಿಂಟ್ಸ್ ತಂದಿತ್ತರು. ದಿನದ ಮತ್ತೊಂದು ಪಂದ್ಯದಲ್ಲಿ ಹರಿಯಾಣ ಸ್ಟೀಲರ್ಸ್ ತಂಡ 50–33 ರಲ್ಲಿ ತೆಲುಗು ಟೈಟನ್ಸ್ ತಂಡವನ್ನು ಮಣಿಸಿತು.

ಇಂದಿನ ಪಂದ್ಯಗಳು

ಗುಜರಾತ್ ಜೈಂಟ್ಸ್– ಪ್ಯಾಂಥರ್ಸ್

ಪುಣೇರಿ ಪಲ್ಟನ್– ಯು.ಪಿ. ಯೋಧಾಸ್

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.