ಪಟ್ನಾ: ಶಿವಂ ಪತಾರೆ ಮತ್ತು ಸಿದ್ಧಾರ್ಥ್ ದೇಸಾಯಿ ಅವರ ಅಮೋಘ ರೈಡಿಂಗ್ ಬಲದಿಂದ ಹರಿಯಾಣ ಸ್ಟೀಲರ್ಸ್ ತಂಡವು ಪ್ರೊ ಕಬಡ್ಡಿ ಲೀಗ್ನ ಪಂದ್ಯದಲ್ಲಿ 41–36ರಿಂದ ಬೆಂಗಾಲ್ ವಾರಿಯರ್ಸ್ ತಂಡವನ್ನು ಮಣಿಸಿತು.

ಇಲ್ಲಿನ ಪಾಟಲೀಪುತ್ರ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ವಿರಾಮದ ವೇಳೆಗೆ 16–18ರಿಂದ ಹಿನ್ನಡೆಯಲ್ಲಿದ್ದ ಸ್ಟೀಲರ್ಸ್ ಉತ್ತರಾರ್ಧದಲ್ಲಿ ಪುಟಿದೆದ್ದು, ಸಾಂಘಿಕ ಪ್ರದರ್ಶನ ನೀಡಿತು. ಎದುರಾಳಿ ತಂಡವನ್ನು ಎರಡು ಬಾರಿ ಆಲೌಟ್ ಮಾಡಿತು. ತಂಡದ ಶಿವಂ ಮತ್ತು ಸಿದ್ಧಾರ್ಥ್ ಕ್ರಮವಾಗಿ 12 ಮತ್ತು 11 ಅಂಕ ಗಳಿಸಿ ಸೂಪರ್ ಟೆನ್ ಸಾಧನೆ ಮಾಡಿದರು.

ವಾರಿಯರ್ಸ್ ತಂಡದ ಪರವಾಗಿ ಮಣಿಂದರ್ ಸಿಂಗ್ 13 ಪಾಯಿಂಟ್ಸ್ ಪಡೆದು ಮಿಂಚಿದರು. ಉಳಿದಂತೆ ನಿತಿನ್ ಕುಮಾರ್ ಮತ್ತು ಶ್ರೀಕಾಂತ್ ದೇಸಾಯಿ ಕ್ರಮವಾಗಿ 9 ಮತ್ತು 7 ಪಾಯಿಂಟ್ಸ್ ಗಳಿಸಿದರೂ ಗೆಲುವು ದಕ್ಕಲಿಲ್ಲ.

ಆಡಿರುವ 16 ಪಂದ್ಯಗಳ ಪೈಕಿ 9ರಲ್ಲಿ ಗೆದ್ದು 50 ಅಂಕ ಸಂಪಾದಿಸಿರುವ ಸ್ಟೀಲರ್ಸ್ ತಂಡವು ಪಾಯಿಂಟ್ ಪಟ್ಟಿಯಲ್ಲಿ ನಾಲ್ಕನೇ ಸ್ಥಾನದಲ್ಲಿದೆ. 16 ಪಂದ್ಯಗಳ ಪೈಕಿ 6ರಲ್ಲಿ ಜಯಿಸಿರುವ ವಾರಿಯರ್ಸ್ ತಂಡವು 39 ಅಂಕಗಳೊಂದಿಗೆ 10ನೇ ಸ್ಥಾನದಲ್ಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.