ಕೋಲ್ಕತ್ತ: ಪ್ರಬಲ ಪೈಪೋಟಿ ಕಂಡುಬಂದ ಪಂದ್ಯದಲ್ಲಿ ತಮಿಳ್ ತಲೈವಾಸ್ ಮತ್ತು ಹರಿಯಾಣ ಸ್ಟೀಲರ್ಸ್ ತಂಡಗಳು ಸಮಬಲ ಸಾಧಿಸಿದವು. ಇಲ್ಲಿನ ನೇತಾಜಿ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ರಾತ್ರಿ ನಡೆದ ಪ್ರೊ ಕಬಡ್ಡಿ ಲೀಗ್ ಪಂದ್ಯದಲ್ಲಿ ಎರಡೂ ತಂಡದವರು 40–40 ಪಾಯಿಂಟ್ ಗಳಿಸಿದರು.

ತಲೈವಾಸ್ ಪರ ಅಜಯ್ ಠಾಕೂರ್ 17 ಪಾಯಿಂಟ್ ಗಳಿಸಿ ಮಿಂಚಿದರು. ಒಟ್ಟು 25 ರೇಡ್ ಮಾಡಿದ ಅವರು 15 ಟಚ್ ಪಾಯಿಂಟ್ಗಳನ್ನು ಬಗಲಿಗೆ ಹಾಕಿಕೊಂಡರು. ಆನಂದ್ ಎಂಟು ಪಾಯಿಂಟ್ ಗಳಿಸಿದರು. ಕನ್ನಡಿಗ ಸುಖೇಶ್ ಹೆಗಡೆ ನಾಲ್ಕು ರೇಡ್ ಮಾಡಿದರೂ ಕೇವಲ ಒಂದು ಪಾಯಿಂಟ್ ಗಳಿಸಲು ಮಾತ್ರ ಶಕ್ತರಾದರು. ಅದು ಬೋನಸ್ ಮೂಲಕ ಬಂದಿತ್ತು.

ಹರಿಯಾಣ ಸ್ಟೀಲರ್ಸ್ನ ಮೋನು ಗೋಯತ್ ಕೂಡ 17 ಪಾಯಿಂಟ್ ಕಲೆ ಹಾಕಿದರು. 18 ರೇಡ್ಗಳಿಂದ ಅವರು ಈ ಸಾಧನೆ ಮಾಡಿದ್ದರು. 11 ಟಚ್ ಪಾಯಿಂಟ್ ಮತ್ತು ಐದು ಬೋನಸ್ ಗಳಿಸಿದ ಅವರು ಒಂದು ಟ್ಯಾಕಲ್ ಪಾಯಿಂಟ್ ಕೂಡ ಸಂಗ್ರಹಿಸಿದರು. ವಿಕಾಸ್ ಖಂಡೋಲ 13 ರೇಡ್ಗಳಿಂದ 10 ಪಾಯಿಂಟ್ ಗಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.